ಅದು 20 ಸಾವಿರ ನೌಕರರ ಪಾಲಿನ ಸಂಜೀವಿನಿ. ದಶಕಗಳಿಂದ ಇಲ್ಲಿ ಸಾರಿಗೆ ನೌಕರರು ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದರು. ಈ ಆಸ್ಪತ್ರೆಯ ಮೇಲೆ ಸಂಸದರೊಬ್ಬರ ಎಂಪಿ ಕಣ್ಣು ಬಿದ್ದಿದೆ. ಇದನ್ನು ಖಾಸಗಿ ಅವರಿಗೆ ಗುತ್ತಿಗೆ ನೀಡಲು ಗುಪ್ತ್ ಗುಪ್ತ್ ಆಗಿ ಎಲ್ಲಾ ಸಿದ್ದತೆ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.
ಸಾವಿರಾರು ಸಾರಿಗೆ ನೌಕರರಿಗೆ ಆಸರೆಯಾಗಿರೋ ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆ
ಸಾರಿಗೆ ನೌಕರರಿಗೆಂದು ನಿರ್ಮಿಸಿದ ಏಕೈಕ ಆಸ್ಪತ್ರೆಯದು. ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ ಕಳೆದ 25 ವರ್ಷಗಳ ಹಿಂದೆ ಕೆಎಸ್ಆರ್ಟಿಸಿ ಆಸ್ಪತ್ರೆ ನಿರ್ಮಾಣ ಮಾಡಿತ್ತು. ಇಲ್ಲಿ ಸಾವಿರಾರು ನೌಕರರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ರು. ಅದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲ. ಆದ್ರೂ ಇದನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಬೇಕು ಎಂದು ಸಾವಿರಾರು ನೌಕರರ ಬೇಡಿಕೆಯಿತ್ತು. ಆಸ್ಪತ್ರೆಯ ಹಿಂದೆ ಮತ್ತು ಮುಂದೆ ವಿಸ್ತಾರವಾದ ಜಾಗವಿದೆ. ಮದ್ಯಪಾನ ವ್ಯಸನದ ಡ್ರೈವರ್ ಗಳಿಗೆ ಇಲ್ಲಿ ಡಿ ಅಡಿಕ್ಷನ್ ಕ್ಯಾಂಪ್ ಕೂಡ ಮಾಡ್ತಿದ್ರು. ಆದರೆ ಇದೀಗ ಆಸ್ಪತ್ರೆ ಮೇಲೆ ಬೆಂಗಳೂರು ಸೌತ್ ಸಂಸದ ತೇಜಸ್ವಿ ಸೂರ್ಯ, ವಾಸವಿ ಅನ್ನೋ ಖಾಸಗಿ ಸಂಸ್ಥೆಗೆ ಇದನ್ನು 30 ವರ್ಷಗಳ ಕಾಲ ಗುತ್ತಿಗೆ ನೀಡುವಂತೆ ಸಿಎಂ ಸಾರಿಗೆ ಸಚಿವರು ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಂತ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ ಸುಬ್ಬರಾವ್ ಆರೋಪ ಮಾಡ್ತಾರೆ.
ಕೆಎಸ್ಆರ್ಟಿಸಿಯ ಏಕೈಕ ಆಸ್ಪತ್ರೆ ಮೇಲೆ ಸಂಸದ ತೇಜಸ್ವಿ ಸೂರ್ಯ ಕಣ್ಣು
ಇನ್ನೂ ಈ ಕೆಎಸ್ಆರ್ಟಿಸಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಾಗಿ ಮಾಡಿ, ಇಲ್ಲಿ ಡಯಾಲಿಸಿಸ್ ಸೆಂಟರ್ ಓಪನ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ಹೀಗೆ ಮಾಡಿದ್ರೆ ನೌಕರರು ಹಣ ಕೊಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ಹಲವಾರು ದಶಕಗಳಿಂದ ಸಾರಿಗೆ ನೌಕರರಿಗೆ ಚಿಕಿತ್ಸೆ ಸಿಗುತ್ತಿದೆ. ನೌಕರರಿಗೆ ಮೀಸಲಿಟ್ಟ ಆಸ್ಪತ್ರೆ ಮೇಲೆ ಯಾಕೆ ನಿಮ್ಮ ಕಣ್ಣು. ಕೂಡಲೇ ಸಂಸದ ತೇಜಸ್ವಿ ಸೂರ್ಯ ಈ ನಿರ್ಧಾರವನ್ನು ಕೈ ಬಿಡಲಿಲ್ಲ ಅಂದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರಿಗೆ ಮುಖಂಡರು ಎಚ್ಚರಿಕೆ ನೀಡ್ತಾರೆ. ಆದ್ರೆ ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಆರೋಪಗಳೆಲ್ಲ ನಿರಾಧಾರ ಎಂದು ಮಾಹಿತಿ ನೀಡ್ತಾರೆ.

ಆಸ್ಪತ್ರೆಯನ್ನ ಖಾಸಗಿ ಆಸ್ಪತ್ರೆ ಗೆ 30 ವರ್ಷ ಗುತ್ತಿಗೆ ನೀಡಲು ಒತ್ತಡ
ಆಸ್ಪತ್ರೆಯನ್ನು ಗುತ್ತಿಗೆ ಗೆ ನೀಡಲು ನಾನ್ಯಾರು? ಈ ಹಿಂದೆ ಈ ಕಟ್ಟಡ ಪಾಳು ಬಿದ್ದಿತ್ತು ಕೊರೊನಾ ಸಂದರ್ಭದಲ್ಲಿ ಜನರಿಗೆ ಸಹಾಯ ಆಗಲಿ ಎಂದು ನಾನು ನನ್ನ ಸಂಸದರ ನಿಧಿ ಖಾಸಗಿ ಮತ್ತು ಬಿಬಿಎಂಪಿಯಿಂದ ಹಣ ಬಿಡುಗಡೆ ಮಾಡಿಸಿ ಆಸ್ಪತ್ರೆಯನ್ನು ಪುನರ್ ನಿರ್ಮಾಣ ಮಾಡಿದ್ವಿ. ನಾನು ಯಾವುದೇ ಸಂಸ್ಥೆಗೆ ಗುತ್ತಿಗೆ ನೀಡಲು ಪ್ಲಾನ್ ಮಾಡಿಲ್ಲ. ನನ್ನ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳುತ್ತಿದ್ದಾರೆ.
ಇತ್ತ ಸಾರಿಗೆ ಮುಖಂಡರು ನೋಡಿದ್ರೆ ಈಗಾಗಲೇ ಆಸ್ಪತ್ರೆಯನ್ನು ಗುತ್ತಿಗೆ ನೀಡುವಂತೆ ಸಂಸದರು ಸಾಕಷ್ಟು ಒತ್ತಡ ಹೇರುತ್ತಿದ್ದಾರೆ ಎನ್ನುತ್ತಾರೆ. ಅತ್ತ ಸಂಸದರು ಮಾತ್ರ ಗುತ್ತಿಗೆ ನೀಡಲು ನ್ಯಾನ್ಯಾರು..? ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಗುತ್ತಿಗೆ ನೀಡೋ ಪ್ಲಾನ್ ನಲ್ಲಿಲ್ಲ ಅಂತಿದ್ದಾರೆ.