2100ರ ವೇಳೆಗೆ ಭಾರತದಲ್ಲಿ ಜನಸಂಖ್ಯೆ 41 ಕೋಟಿಯಷ್ಟು ಕಡಿಮೆ ಆಗಲಿದೆ ಎಂದು ವರದಿಯೊಂದು ಹೇಳಿದೆ.
ಜಗತ್ತಿನ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾಗಿರುವ ಭಾರತದಲ್ಲಿ ಜನರ ಜೀವನಮಟ್ಟ ಕುಸಿಯುತ್ತಿರುವುದರಿಂದ ಮುಂದಿನ 78 ವರ್ಷಗಳಲ್ಲಿ ದೇಶದ ಜನಸಂಖ್ಯೆ 41 ಕೋಟಿಯಷ್ಟು ಕಡಿಮೆ ಆಗಲಿದೆ ಎಂದು ಹೇಳಲಾಗಿದೆ.
ದೇಶದಲ್ಲಿ ಪ್ರತಿ ಚದರ ಅಡಿಗೆ 476 ಜನರು ಜೀವಿಸುತ್ತಿದ್ದಾರೆ. ಆದರೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಪ್ರತಿ ಚದರ ಅಡಿಗೆ ಕೇವಲ 148 ಜನರು ಬದುಕುತ್ತಿದ್ದಾರೆ.
2100ರ ವೇಳೆಗೆ ಭಾರತದಲ್ಲಿ ಪ್ರತಿ ಚದರ ಅಡಿಗೆ ಜೀವಿಸುತ್ತಿರುವವರ ಸಂಖ್ಯೆ 335ಕ್ಕೆ ಇಳಿಯಲಿದೆ ಎಂದು ವರದಿ ಹೇಳಿದೆ. ವಿಶೇಷ ಅಂದರೆ ಚೀನಾದಲ್ಲಿ ಈ ಸಂಖ್ಯೆ 51 ಜನರು ವಾಸಿಸಲಿದ್ದಾರೆ. ಜಪಾನ್ ನಲ್ಲಿ ಪ್ರಸ್ತುತ 328 ಜನರು ವಾಸಿಸುತ್ತಿದ್ದು, ಇದು 133 ಕಿ.ಮೀ.ಗೆ ಕುಸಿಯಲಿದೆ.