ಇಡಿ ಇಲಾಖೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್‌ಮೆಂಟ್ ಆಗಿ ಕೆಲಸ ಮಾಡುತ್ತಿದೆ” ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.
ಶಿರಸಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಎದುರಿಸಲು ಸಾಧ್ಯವಾಗದೇ ಭಯ ಶುರುವಾಗಿದೆ. ಆದ್ದರಿಂದ ಜಾರಿ ನಿರ್ದೇಶನಾಲಯ ಮೂಲಕ ಬೆದರಿಸಲು ಹೊರಟಿದ್ದಾರೆ. ಸುಪ್ರೀಂಕೋರ್ಟ್ ಕ್ಲೀನ್‌ಚಿಟ್ ಕೊಟ್ಟಿರುವ ಪ್ರಕರಣವನ್ನು ಮತ್ತೆ ತನಿಖೆ ನಡೆಸುತ್ತಿರುವುದು ಬಿಜೆಪಿ ಸರ್ಕಾರದ ನೀಚತನಕ್ಕೆ ಸಾಕ್ಷಿ.
ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ ಕೊಟ್ಟ ದೂರಿನ ಮೇಲೆ ತನಿಖೆ ನಡೆಸುವುದಾದರೆ, ಈಗ ಇದೇ ಸಂಸದ ಅಮಿತ್ ಶಾ ಮಗ ಜಯ ಶಾ ಮೇಲೂ ಗಂಭೀರ ಆರೋಪ ಮಾಡಿದ್ದಾರೆ ತನಿಖೆ ಯಾಕಿಲ್ಲ 50 ಲಕ್ಷ ಇದ್ದ ಜಯ್ ಶಾ ಆದಾಯ ಇಂದು ನೂರಾರು ಕೋಟಿಯಾಗಿದೆ. ಅದರ ಮೂಲದ ಬಗ್ಗೆ ಯಾಕೆ ಇಡಿ ಇಲಾಖೆ ತನಿಖೆ ನಡೆಸುತ್ತಿಲ್ಲ?. ಅಧಿಕಾರಿಗಳಿಗೆ ಧೈರ್ಯ ಇದ್ದರೆ ಅಮಿತ್ ಶಾ ಮಗನ ಮೇಲೂ ತನಿಖೆ ನಡೆಸಲಿ ಎಂದು ಬಿ. ಕೆ. ಹರಿಪ್ರಸಾದ್ ಸವಾಲು ಎಸೆದರು.

ಐಪಿಎಲ್ ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿಗೆ ಉತ್ತರವಿಲ್ಲ, ಅವರಿಗಿಂತ ದೊಡ್ಡ ಕ್ರಿಕೆಟರ್ ಜಗತ್ತಿನಲ್ಲೇ ಯಾರೂ ಇಲ್ಲ ಹೀಗಾಗಿ ಆತನನ್ನು ಬಿಸಿಸಿಐ ಸೆಕ್ರೆಟರಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.