ಪಾಕಿಸ್ತಾನದ ಈ ಮೇಕೆ ಮರಿ ಅತ್ಯಂತ ಉದ್ದನೆಯ ಕಿವಿ ಹೊಂದಿರುವ ಮೇಕೆ ಎಂಬ ದಾಖಲೆ ಬರೆದಿದೆ. ಈ ಮೂಲಕ ಈ ಮೇಕೆ ಮರಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.
ಹೌದು, ಅತ್ಯಂತ ಉದ್ದನೆಯ ಕಿವಿಗಳೊಂದಿಗೆ ಮೇಕೆ ಮರಿಯೊಂದು ಜನಿಸಿದ ಅಪರೂಪದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಸದ್ಯ ಮೇಕೆಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಪಾಕಿಸ್ತಾನದಲ್ಲಿ 1ತಿಂಗಳ ಹಿಂದೆ ಹುಟ್ಟಿದ ಮೇಕೆ ಮರಿ ಅತ್ಯಂತ ಉದ್ದನೆಯ ಕಿವಿಗಳನ್ನು ಹೊಂದುವ ಮೂಲಕ ವೈರಲ್ ಆಗುತ್ತಿದೆ. ಜೂನ್ 4 ರಂದು ದಕ್ಷಿಣ ನಗರದ ಕರಾಚಿಯಲ್ಲಿ ಬ್ರೀಡರ್ ಮೊಹಮ್ಮದ್ ಹಸನ್ ನರೇಜೋ ಅವರಿಗೆ ಸೇರಿದ ಮೇಕೆಯೊಂದು ಅತ್ಯಂತ ಉದ್ದನೆಯ ಉದ್ದ ಕಿವಿ ಇರುವ ಮರಿಗೆ ಜನ್ಮ ನೀಡಿದೆ.

ಮೇಕೆ ಮರಿ ಮಾಲೀಕ ಹಸನ್ ನರೇಜೋ ಅವರು ಈ ಮರಿಗೆ ಸಿಂಬಾ ಎಂದು ಹೆಸರಿಟ್ಟಿದ್ದಾರೆ. ಫೋಟೋ ವೈರಲ್ ಆಗುತ್ತಿದ್ದ ಬೆನ್ನಲ್ಲೆ ಮೇಕೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ನುಬಿಯನ್ ತಳಿಗೆ ಸೇರಿದ ಮೇಕೆ ಇದಾಗಿದೆ.
ನುಬಿಯನ್ ಆಡುಗಳು ಉತ್ತಮ ಗುಣಮಟ್ಟದ ಬೆಣ್ಣೆಯ ಹಾಲನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ, ಈ ಹಾಲನ್ನು ಕುಡಿಯಬಹುದಾಗಿದ್ದು, ಐಸ್ ಕ್ರೀಮ್, ಮೊಸರು, ಚೀಸ್ ಮತ್ತು ಬೆಣ್ಣೆಯನ್ನು ತಯಾರಿಸಲು ಬಳಸುತ್ತಾರೆ. ಸಿಂಬಾ 46 ಸೆಂಟಿಮೀಟರ್ ಉದ್ದದ ಕಿವಿಯೊಂದಿಗೆ ಜನಿಸಿದ್ದು, ಸದ್ಯ ಕಿವಿಯ ಉದ್ದ 50 ಸೆ.ಮೀ.ಗೂ ಅಧಿಕವಾಗಿದೆ.