ದಕ್ಷಿಣ ಮಲೆನಾಡು ಹಾಗು ಜಲಾನಯನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿ ಸುರಿಯುವುತ್ತಿರುವುದರಿಂದ ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗಿದೆ.
ಕಳೆದ ಎರಡು ದಿನಗಳಲ್ಲಿ ಒಟ್ಟು 12 ಟಿಎಂಸಿಗೂ ಹೆಚ್ಚಿನ ನೀರು ಅಣೆಕಟ್ಟಿಗೆ ಹರಿದು ಬಂದಿದ್ದು ಹಾಲಿ 75,843 ಕ್ಯೂಸೆಕ್ ನೀರು ಇಲ್ಲಿಯವರೆಗು ಹರಿದು ಬಂದಿದೆ. ಮಳೆರಾಯ ಇದೇ ರೀತಿ ಆರ್ಭಟಿಸಿದ್ದರೆ 1 ಲಕ್ಷಕ್ಕು ಅಧಿಕ ಕ್ಯೂಸೆಕ್ ನೀರು ಶೇಕರಣೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 133 ಅಡಿ ಶೇಖರಣೆ ಸಾಮರ್ಥ್ಯದ ಜಲಾಶಯದಲ್ಲಿ 105.788 ಟಿಎಂಸಿ ನೀರು ಸಂಗ್ರಹಿಸಬಹುದು. ಗುರುವಾರ 60,941 ಕ್ಯುಸೆಕ್ ನೀರು ಹರಿದು ಬಂದಿದ್ದು ಶುಕ್ರವಾರ ಹೆಚ್ಚಾಗುವ ಸಾಧ್ಯತೆಯಿದೆ.

ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ ನದಿ ಪ್ರದೇಶದ ಕಟ್ಟೆಚ್ಚರ ವಹಿಸಲಾಗಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಜಿಲ್ಲಾಡಳಿತದಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಅಪಾಯ ಎದುರಿಸುವ ಗ್ರಾಮಗಳನ್ನು ಗುರುತಿಸಲಾಗಿದ್ದು ಗ್ರಾಮಗಳನ್ನು ತೊರೆದು ಗ್ರಾಮ ತೊರೆಯುವಂತೆ ಡಂಗುರ ಸಾರಲಾಗಿದೆ.