ಕಳೆದ 17 ದಿನಗಳಲ್ಲಿ 7 ಭಾರೀ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ತುರ್ತು ವಿಚಾರಣೆಗೆ ಹಾಜರಾಗುವಂತ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಭಾರತೀಯ ನಾಗರೀಕ ವಿಮಾನ ಯಾನ ನಿರ್ದೇಶನಾಲಯ(DGCA) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕಳಪೆ ಸುರಕ್ಷಣಾ ಕ್ರಮ ಹಾಗು ಅಸಮರ್ಪಕ ನಿರ್ವಹಣೆ ಕ್ರಮಗಳು ವೈಫಲ್ಯಕ್ಕೆ ಕಾರಣವಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಮೂರು ವಾರಗಳ ಒಳಗಾಗಿ ಉತ್ತರಿಸುವಂತೆ ಸಂಸ್ಥೆಗೆ ನಿರ್ದೇಶಿಸಿದೆ.
ನಿಯಮ 134 ಹಾಗೂ 1937 11ನೇ ವೇಳಾಪಟ್ಟಿಯ ಅಡಿಯಲ್ಲಿ ಸ್ಪೈಸ್ ಜೆಟ್ ಸಂಸ್ಥೆಯು ವಿಫಲವಾಗಿದೆ ಎಂದು ಡಿಜಿಸಿಎ ಹೇಳಿದೆ. ಪ್ರಯಾಣಿಕರ ಸುರಕ್ಷತೆ ಅತಿ ಮುಖ್ಯ ತಪ್ಪಿತಸ್ಥರು ಯಾರೇ ಆದರು ಅವರಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ವಿಮಾನಯಾನ ಖಾತೆ ಸಚಿವ ಜೋತಿರಾದಿತ್ಯ ಸಿಂಧಿಯಾ ಪ್ರತಿಪಾದಿಸಿದ್ದಾರೆ.









