ಕಳೆದ ವಾರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಗ್ರಹ ದಳ ಅಧಿಕಾರಿಗಳಿಗೆ ಚಳಿ ಬಿಡಿಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಗೆ ಬೆದರಿಕೆ ಕರೆ ಬಂದಿರುವುದು ಬೆಳಕಿಗೆ ಬಂದಿದೆ.
ಖುದ್ದು ಈ ಕುರಿತು ಸ್ವತಃ ನ್ಯಾಯಮೂರ್ತಿಗಳೇ ವಿಚಾರಣೆ ವೇಳೆ ನಿನ್ನನ್ನು ವರ್ಗಾವಣೆ ಮಾಡಿಸುತ್ತೇವೆ ಎಂದು ಕರೆ ಮಾಡಿ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ನಾನು ಇದ್ಯಾವುದಕ್ಕು ಹೆದರುವವನಲ್ಲ. ನಾನು ಎಲ್ಲದಕ್ಕೂ ಸಿದ್ದನಿದ್ದೇನೆ ಜನರ ಒಳಿತಿಗಾಗಿ ಏನು ಬೇಕಾದರೂ ಎದುರಿಸುತ್ತೇನೆ. ನಿಮ್ಮ ಎಸಿಬಿ, ಎಡಿಜಿಪಿ ತುಂಬಾ ಪವರ್ ಫುಲ್ ಆಗಿದ್ದಾರಂತೆ. ಓರ್ವ ವ್ಯಕ್ತಿ ಇದನ್ನು ನ್ಯಾಯಮೂರ್ತಿಗೆ ಹೇಳಿದ್ದಾರಂತೆ. ಸ್ವತಃ ಇನ್ನೊಬ್ಬ ನ್ಯಾಯಮೂರ್ತಿ ನನಗೆ ಇದನ್ನು ಹೇಳಿದ್ದಾರೆ ಎಂದು ಅವರು ವಿವರಿಸಿದರು.
