ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಸಾಫ್ಟ್ ವೇರ್ ದೈತ್ಯ ತಮ್ಮ 48 ವರ್ಷ ಹಿಂದಿನ ರೆಸ್ಯೂಮ್ (ಉದ್ಯೋಗಕ್ಕಾಗಿ ಸಲ್ಲಿಸುವ ಸ್ವವಿವರ) ಅನ್ನು ಬಹಿರಂಗಪಡಿಸಿದ್ದು, ಈ ರೆಸ್ಯೂಮ್ ವೈರಲ್ ಆಗಿದೆ.
ಉದ್ಯೋಗಿಗಳು ತಮ್ಮ ಕನಸಿನ ಉದ್ಯೋಗ ಪಡೆಯಲು ನಿಖರ ಹಾಗೂ ಎಲ್ಲರೂ ಮೆಚ್ಚುವಂತಹ ರೆಸ್ಯೂಮ್ ಮಾಡಲು ಹರಸಾಹಸ ಪಡುತ್ತಾರೆ. ಇದಕ್ಕಾಗಿ ಹಲವರ ಸಹಾಯ ಪಡೆಯುತ್ತಾರೆ. ಅಂತಹ ನಿರ್ದಿಷ್ಟ ಹಾಗೂ ಖಚಿತ ರೆಸ್ಯೂಮ್ ನಿರೀಕ್ಷೆಯಲ್ಲಿ ಇದ್ದವರಿಗೆ ಬಿಲ್ ಗೇಟ್ಸ್ ಅವರ 48 ವರ್ಷ ಹಿಂದಿನ ರೆಸ್ಯೂಮ್ ಪ್ರೇರಣೆಯಾಗಿದೆ.
66 ವರ್ಷದ ಬಿಲ್ ಗೇಟ್ಸ್ ತಮ್ಮ ಹಳೆಯ ರೆಸ್ಯೂಮ್ ಹಂಚಿಕೊಂಡಿದ್ದು, ಇದು ಹಲವಾರು ಯುವಕರಿಗೆ ಇದು ನೆರವಾಗಬಹುದು ಎಂದು ಹೇಳಿಕೊಂಡಿದ್ದಾರೆ.