• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಉದಯಪುರ ಹತ್ಯೆ ಆರೋಪಿಗಳಿಗೆ ಬಿಜೆಪಿ ಸದಸ್ಯರೊಂದಿಗೆ ಸಂಬಂಧ.! : ಇಂಡಿಯಾ ಟುಡೆ ತನಿಖಾ ವರದಿ

Any Mind by Any Mind
July 2, 2022
in ದೇಶ
0
ಉದಯಪುರ ಹತ್ಯೆ ಆರೋಪಿಗಳಿಗೆ ಬಿಜೆಪಿ ಸದಸ್ಯರೊಂದಿಗೆ ಸಂಬಂಧ.! : ಇಂಡಿಯಾ ಟುಡೆ ತನಿಖಾ ವರದಿ
Share on WhatsAppShare on FacebookShare on Telegram

ADVERTISEMENT

ದೇಶವನ್ನೇ ಬೆಚ್ಚಿಬೀಳಿಸಿದ ಉದಯಪುರದ ಹತ್ಯೆಯ ರುವಾರಿಗಳು ಬಿಜೆಪಿ ನಾಯಕರೊಂದಿಗೆ ಸಂಬಂಧ ಹೊಂದಿರುವುದು ಈಗ ಬೆಳಕಿಗೆ ಬಂದಿದೆ. ಹತ್ಯೆಯ ಬಳಿಕ ಆರೋಪಿಗಳ ಗತಕಾಲವನ್ನು ಕೆದಕಿದ ಇಂಡಿಯಾಟುಡೆ ವಾಹಿನಿಯು ಈ ಮಾಹಿತಿಯನ್ನು ಹೊರ ಹಾಕಿದೆ.

ಇಂಡಿಯಾ ಟುಡೆ ಮಾಡಿದ ವರದಿ ಪ್ರಕಾರ, ಕನಿಷ್ಟ ಮೂರು ವರ್ಷಗಳಿಂದ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಟೈಲರ್‌ ಕನ್ನಯ್ಯಲಾಲ್‌ ಹತ್ಯೆ ಆರೋಪಿಗಳು ಸಂಬಂಧ, ಒಡನಾಟ ಹೊಂದಿದ್ದಾರೆ.

ರಾಜಸ್ಥಾನ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯ ಇರ್ಷಾದ್‌ ಚೈನ್‌ವಾಲ ಎಂಬಾತನೊಂದಿಗೆ ಹತ್ಯೆ ಆರೋಪಿ ರಿಯಾಝ್‌ ಇರುವ ಹಲವು ಚಿತ್ರಗಳನ್ನು ವಾಹಿನಿಯು ತನ್ನ ವರದಿ ಮೂಲಕ ಬಿಡುಗಡೆ ಮಾಡಿದೆ. ಇದು ಸಾಕಷ್ಟು ಸದ್ದು ಮಾಡಿದೆ.

😱 Breaking News 😱

India Today investigation revealed that Riyaz Atari, one of the Murderer of Hindu Shopkeeper Kanhaiyalal used to attend BJP leader and former home minister of Rajasthan,Gulab Chand Kataria 's events regularly#Udaipur #BJP pic.twitter.com/x3klW2CvBb

— Bole Bharat (@bole_bharat) July 1, 2022

ಇರ್ಷಾದ್‌ ಚೈನ್‌ವಾಲ ಪ್ರಕಾರ, ರಿಯಾಝ್‌ ಹಲವು ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಬಿಜೆಪಿಗಾಗಿ ಕೆಲಸ ಮಾಡುವ ಇಂಗಿತವನ್ನೂ ಅವರೊಂದಿಗೆ ವ್ಯಕ್ತಪಡಿಸಿದ್ದರು. ಅಲ್ಲದೆ, ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿರುವ ಮಹಮ್ಮದ್‌ ತಾಹೀರ್‌ ಎಂಬ ಬಿಜೆಪಿ ಕಾರ್ಯಕರ್ತನೊಂದಿಗೂ ರಿಯಾಝ್‌ಗೆ ಹೆಚ್ಚಿನ ಒಡನಾಟವಿತ್ತು ಎಂದು ಇರ್ಷಾದ್‌ ಚೈನ್‌ವಾಲ ಅವರು ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದ್ದಾರೆ.

ತಾಹೀರ್‌ ಜೊತೆಗೆ ಹಲವು ಬಿಜೆಪಿ ಕಾರ್ಯಕ್ರಮದಲ್ಲಿ ರಿಯಾಝ್‌ ಅಟ್ಟಾರಿ ಭಾಗಿಯಾಗಿದ್ದ. ಕುತೂಹಲಕಾರಿಯೆಂದರೆ, ಕನ್ನಯ್ಯಲಾಲ್‌ ಹತ್ಯೆಯ ಬಳಿಕ ತಾಹಿರ್‌ ತನ್ನ ಫೋನ್‌ ಅನ್ನು ಆಫ್‌ ಮಾಡಿ, ತಲೆ ಮರೆಸಿಕೊಂಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

https://twitter.com/IndiaToday/status/1542890364121812992

ಕೃತ್ಯದಲ್ಲಿ ಬಿಜೆಪಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

ಇಂಡಿಯಾ ಟುಡೇ ಈ ವರದಿಯನ್ನು ಟ್ವೀಟ್‌ ಮಡಿದ ಬೆನ್ನಲ್ಲೇ ಹಲವು ನೆಟ್ಟಿಗರು ಈ ಕೊಲೆಯಲ್ಲಿ ಬಿಜೆಪಿಗೆ ಲಾಭವಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ, ಮುಂದಿನ ವರ್ಷ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂಬ ಊಹಾಪೋಹಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡಲಾಗುತ್ತಿದೆ.

ಅದರಲ್ಲೂ 2019 ರಲ್ಲಿ ತಬಿಜೆಪಿ ಸದಸ್ಯ ತಾಹಿರ್‌ ಫೇಸ್‌ಬುಕ್‌ ಮೂಲಕ ಹಂಚಿಕೊಂಡ ಚಿತ್ರವೊಂದರಲ್ಲಿ ಕೊಲೆ ಆರೋಪಿ ರಿಯಾಝ್‌ ಬಿಜೆಪಿಯ ಸ್ಥಳೀಯ ನಾಯಕರೊಂದಿಗೆ ಇರುವುದು ಕಂಡು ಬಂದಿದೆʼ

pic.twitter.com/Tgz43JrRpY

— 𝕴𝖒𝖗𝖆𝖓 𝕸𝖚𝖟𝖆𝖋𝖋𝖗𝖎 A͜͡d͜͡v͜͡ 🇮🇳 (@advimran007) July 1, 2022

ಚುನಾವಣೆ ಬಂದಾಗ ಜನರನ್ನು ಕೋಮುವಾದಿಗಳನ್ನಾಗಿ ಮಾಡಲು ಮತ್ತು ಅಧಿಕಾರವನ್ನು ಪಡೆಯಲು ರಕ್ತಪಾತ ನಡೆಯಬೇಕು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

When there is an election , There should be bloodsheld to make people communal & to attain power.

— தாரிக்-Tariq (@Syedtariq28) July 1, 2022

ಕಾಂಗ್ರೆಸ್‌ ನಾಯಕಿ ರೇಣುಕಾ ಛೌಧರಿ ಈ ವರದಿಯ ತುಣುಕನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದು, ನನಗೆ ಯಾವುದೇ ಆಶ್ಚರ್ಯವಾಗಿಲ್ಲ ಎಂದು ಬರೆದಿದ್ದಾರೆ.

I'm not surprised.. Are you? pic.twitter.com/jVpmARtBue

— Renuka Chowdhury (@RenukaCCongress) July 1, 2022

@AdaniHu ಎಂಬ ಟ್ವಿಟರ್‌ ಖಾತೆಯು, ಮುಂದಿನ ಅಸೆಂಬ್ಲಿ ಗೆಲುವಿಗಾಗಿ ಇದು ಬಿಜೆಪಿಯ ಫಾರ್ಮುಲಾ ಎಂದು ಪ್ರತಿಕ್ರಿಯಿಸಿದೆ.

BJP's formula to win next assembly election

— Doctor Adani™ (@AdaniHu) July 1, 2022

“ಬಿಜೆಪಿ ಮತ್ತು ಸಂಘದ ರಾಜಕೀಯವನ್ನು ನೀವು ಅರ್ಥಮಾಡಿಕೊಂಡರೆ, ಬಂಗಾಳ, ಜಮ್ಮು, ಕೇರಳ ಮತ್ತು ಇತರ ಹಿಂದೂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಹೇಗೆ ದಾಳಿ ಮಾಡಲಾಗುತ್ತದೆ ಎಂಬುದು ನಿಮಗೆ ತನ್ನಿಂತಾನೆ ಅರ್ಥವಾಗುತ್ತದೆ. ಅಧಿಕಾರದ ಹಂಬಲ ಯಾರ ಬದುಕನ್ನೂ ನೋಡುವುದಿಲ್ಲ, ಅದು ನಿಮ್ಮಿಂದ ಸಾಧ್ಯ” ಎಂದು ಪ್ರಶಾಂತ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

बीजेपी और संघ की राजनीति समझ जाओगे तो अपने आप समझ जाओगे बंगाल जम्मू केरल और अन्य हिंदू बाहुल्य इलाकों में हिंदुओं पर कैसे हमले हो जाते हैं।

सत्ता की लालसा किसी की जान नहीं देखती है, इस लिए संभव है आपकी बात pic.twitter.com/2CeYKN89Ts

— Prashant_Raj ♕︎ (@The_Jadons) July 1, 2022


“ನನಗೆ ಆಶ್ಚರ್ಯವಾಗಿಲ್ಲ.. ಎಲ್ಲಾ ಧಾರ್ಮಿಕ ದ್ವೇಷ ಹರಡುವಿಕೆಯ ಹಿಂದೆ ಭಕ್ತರು ಮತ್ತು ಬಿಜೆಪಿಯವರು ಇದ್ದಾರೆ.. ಭಾರತದಲ್ಲಿ ಮಾತ್ರವಲ್ಲ.. ಪ್ರಪಂಚದಾದ್ಯಂತ.. ಈ‌ ಪಾರ್ಟಿಯಲ್ಲಿ ಅತಿ ಹೆಚ್ಚು ಭಯೋತ್ಪಾದಕರು ಇದ್ದಾರೆ.” ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಹಾಕಿದ್ದಾರೆ.

i amnot surprised..bhakts and bjpians are behind all the religious hatred spread.. not only in india..but across the world..this prty has the largest amount of terrorists..

— Parvma (@parvchichu) July 1, 2022


“ಉದಯಪುರದಲ್ಲಿ ಕನ್ಹಯ್ಯಾಲಾಲ್‌ನನ್ನು ನಿರ್ದಯವಾಗಿ ಕೊಂದ ಭಯೋತ್ಪಾದಕರು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಪುರಾವೆ ಇಲ್ಲಿದೆ” ಗೌರವ್‌ ಪಾಂಧೀ ಎಂಬವರು ವರದಿಯ ತುಣುಕಿನೊಂದಿಗೆ ಟ್ವೀಟ್‌ ಮಾಡಿದ್ದಾರೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ರಸ್ತೆ ಮೇಲೆ ಮಳೆ ನೀರು ತಡೆಗಟ್ಟಲು ಕ್ರಾಸ್ ಕಲ್ವರ್ಟ್ಸ್ ಅಳವಡಿಕೆ : BBMP ಕಮಿಷನರ್ ತುಷಾರ್ ಗಿರಿನಾಥ್ !

Next Post

ದಲಿತ ಪ್ರೊ. ರತನ್‌ ಲಾಲ್‌, ಪತ್ರಕರ್ತ ಝುಬೈರ್‌ ಬಂಧನಕ್ಕೆ ತೋರಿದ ಉತ್ಸಾಹ ನೂಪುರ್‌ ಶರ್ಮಾ ಬಂಧನಕ್ಕಿಲ್ಲವೇ?

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ದಲಿತ ಪ್ರೊ. ರತನ್‌ ಲಾಲ್‌, ಪತ್ರಕರ್ತ ಝುಬೈರ್‌ ಬಂಧನಕ್ಕೆ ತೋರಿದ ಉತ್ಸಾಹ ನೂಪುರ್‌ ಶರ್ಮಾ ಬಂಧನಕ್ಕಿಲ್ಲವೇ?

ದಲಿತ ಪ್ರೊ. ರತನ್‌ ಲಾಲ್‌, ಪತ್ರಕರ್ತ ಝುಬೈರ್‌ ಬಂಧನಕ್ಕೆ ತೋರಿದ ಉತ್ಸಾಹ ನೂಪುರ್‌ ಶರ್ಮಾ ಬಂಧನಕ್ಕಿಲ್ಲವೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada