ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ವಿರುದ್ದ ಬಂಡಾಯವೆದ್ದು ದೂರದ ಗುವಾಹಟಿಯಲ್ಲಿ ಠಿಕಾಣಿ ಹೂಡಿರುವ ರೆಬೆಲ್ ಶಾಸಕರನ್ನು ಃಏಗಾದರು ಮಾಡಿ ವಾಪಸ್ ಕರೆತಂದು ಸರ್ಕಾರ ಉಳಿಸಿಕೊಳ್ಳಲೇಬೇಕು ಎಂದು ಪಣ ತೊಟ್ಟಿರುವ ರಾಷ್ಟ್ರೀಯ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್ ತಮ್ಮ ಆಪ್ತರೊಂದಿಗೆ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಕಂದಾಯ ಸಚಿವ ಬಾಳಾ ಸಾಹೇಬ್ ಥೋರಟ್, ಮಾಜಿ ಸಿಎಂ ಹಾಗು ಲೋಕೋಪಯೋಗಿ ಸಚಿವ ಅಶೋಕ್ ಚವಾಣ್, ಸಾರಿಗೆ ಸಚಿವ ಅನಿಲ್ ಪರಬ್ ಹಾಗು ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ ಹಾಜರಿದ್ದರು ಎಂದು ತಿಳಿದು ಬಂದಿದೆ.
ಸದ್ಯ ರೆಬೆಲ್ ಶಾಸಕರು ಮುಂಬೈಗೆ ಮರಳಬೇಕು ಹಾಗು ವಿಶ್ವಾಸಮತವನ್ನ ಸಾಬೀತುಪಡಿಸಬೇಕು ಎಂದು ಶರದ್ ಆತ್ಮವಲೋಕನ ಸಭೆಯ್ಲಿ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.












