ಮಹಾರಾಷ್ಟ್ರದಲ್ಲಿ ಸದ್ಯ ಉಲ್ಭಣಿಸಿರುವ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಿರುವ ಶಿವಸೇನೆಯ ನಾಯಕರು ಬಂಡಾಯ ಶಾಸಕರು 24 ಘಂಟೆಗಳಲ್ಲಿ ವಾಪಸ್ ನಮ್ಮ ಬಳಿ ಬಂದರೆ ನಾವು ಮಹಾ ವಿಕಸ್ ಅಘಾಡಿ ಮೈತ್ರಿ ತೊರೆಲು ಸಿದ್ದರಿದ್ದೇವೆ ಎಂದು ಸಂಜಯ್ ರಾವುತ್ ತಿಳಿಸಿದ್ದಾರೆ.
ನೀವು ಶಿವಸೇನೆಯ ಕಾರ್ಯಕರ್ತರಾಗಿದ್ದು ನೀವು ಪಕ್ಷವನ್ನು ತೊರೆಯುವುದಿಲ್ಲ ಎಂದು ಹೇಳಿದ್ದೀರಿ. ಅದರಂತೆ ಪಕ್ಷ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಿದ್ದವಿದೆ ಅದು ಬಿಟ್ಟು ನೀವು ವಾಟ್ಸಾಪ್ ಹಾಗು ಟ್ವಿಟರ್ನಲ್ಲಿ ಪತ್ರಗಳನ್ನು ಬರೆದು ಹಾಕುವುದಲ್ಲ ಬದಲಾಗಿ ನೇರವಾಗಿ ಬಂದು ಮಾತನಾಡಿ ಎಂದು ಹೇಳಿದ್ದಾರೆ.
ಸದ್ಯ ಬಂಡಾಯ ಶಾಸಕರು ಹಿಂದುತ್ವದ ವಿಚಾರವನ್ನ ಮುನ್ನೆಲೆಗೆ ತಂದಿದ್ದಾರೆ. ಈ ಎಲ್ಲಾ ಶಾಸಕರು ಶಿವಸೇನ ಮೈತ್ರಿಯಿಂದ ಹೊರನಡೆಯಬೇಕು ಎಂದು ಇಚ್ಚಿಸಿದ್ದರೆ ನಾವು ತಯಾರಿದ್ದೇವೆ ಆದರೆ, ಅವರುಗಳು ಮೊದಲು ಮುಂಬೈಗೆ ಬಂದು ಉದ್ದವ್ ಠಾಕ್ರೆಯೊಂದಿಗೆ ನೇರವಾಗಿ ಮಾತನಾಡಲಿ ಎಂದು ಸವಾಲೆಸೆದಿದ್ದಾರೆ.
ಬೆಳ್ಳಗ್ಗೆ ಉದ್ಧವ್ ಠಾಕ್ರೆಸ ನಡೆಸಿದ ವರ್ಚುವಲ್ ಸಭೆಯಲ್ಲಿ ಶಿವಸೇನೆಯ 13 ಶಾಸಕರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.