ದೇಶದಲ್ಲಿ ಸಾಲ ನೀಡುವ ಮೊಬೈಲ್ ಅಪ್ಲಿಕೇಶನ್ ಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಇದರಲ್ಲಿ ಬಹುತೇಕ ಕಂಪನಿಗಳು ನೋಂದಣಿ ಮಾಡಿಕೊಂಡಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಕಂತು ಮರುಪಾವತಿ ಮಾಡದೇ ಇರುವುದು, ಸಮರ್ಪಕವಾಗಿ ಪಾವತಿ ಮಾಡದೇ ಇರುವುದು ಸೇರಿದಂತೆ ನಾನಾ ಕಾರಣಗಳಿಗೆ ಸಾಲ ನೀಡುವ ಮೊಬೈಲ್ ಅಪ್ಲಿಕೇಶನ್ ಕಂಪನಿಗಳಿಗೆ ತೊಂದರೆ, ಕಿರುಕುಳ ಅಗುತ್ತಿರುವ ಬಗ್ಗೆ ಸಾವಿರಾರು ದೂರುಗಳು ಬಂದಿದ್ದು, ಇವುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್ ಸಿಬಿ ನಿರ್ದೇಶಕ ಶಶಿಕಾಂತ್ ದಾಸ್ ತಿಳಿಸಿದ್ದಾರೆ.

ಬ್ಯಾಂಕಿಂಗ್ ನಿಯಮದ ಪ್ರಕಾರ ನೋಂದಣಿ ಮಾಡಿಕೊಳ್ಳ ದೇ ಕಾರ್ಯಚರಿಸುತ್ತಿರುವ ಮೊಬೈಲ್ ಆಪ್ ಅನ್ನು ಅಕ್ರಮ ಎಂದು ಭಾವಿಸಲಾಗುವುದು. ಇಂತಹ ಮೊಬೈಲ್ ಆಪ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ದೇಶಾದ್ಯಂತ ಒಟ್ಟಾರೆ 2562 ದೂರುಗಳು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ 572 ಅತೀ ಹೆಚ್ಚು ದೂರುಗಳು ಬಂದಿವೆ. ಕರ್ನಾಟಕದಲ್ಲಿ 394, ದೆಹಲಿಯಲ್ಲಿ 352, ಮತ್ತು ಹರಿಯಾಣದಲ್ಲಿ 314 ದೂರುಗಳು ದಾಖಲಾಗಿವೆ.





