ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದು ನಿರೀಕ್ಷೆಯಂತೆ ಬಿಜೆಪಿಯ ಮೂವರು ಅಭ್ಯರ್ಥಿಗಳು ಹಾಗು ಕಾಂಗ್ರೆಸ್ಸಿನ ಓರ್ವ ಅಭ್ಯರ್ತೀ ಜಯಗಳಿಸಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ಮೊದಲ ಪ್ರಾಶಸ್ತ್ಯದ 46 ಮತಗಳು ಲಭಿಸಿದ್ದು. ನಟ ಜಗ್ಗೇಶ್ ಹಾಗು ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ಗೆ ಎರಡನೇ ಪ್ರಾಶಸ್ತ್ಯದ ಮತಗಳು ಲಭಿಸಿದ್ದು ಜಯಗಳಿಸಿದ್ದಾರೆ.

ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಜೈರಾಮ್ ರಮೇಶ್ಗೆ ಮೊದಲ ಪ್ರಾಶಸ್ತ್ಯದ 46 ಮತಗಳು ಲಭಿಸಿ ಜಯಗಳಿಸಿದ್ದಾರೆ. ಎರಡನೇ ಆಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನ್ಸೂರ್ ಅಲಿಖಾನ್ 25 ಮತಗಳನ್ನು ಪಡೆದು ಸೋಲುಂಡಿದ್ದಾರೆ.
ಜೆಡಿಎಸ್ನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿಗೆ 30 ಮತಗಳು ಲಭಿಸಿದ್ದು ನಿರಾಸೆ ಅನುಭವಿಸಿದ್ದಾರೆ.