ಕೆಲವು ಸುದ್ದಿ ವಾಹಿನಿಗಳ ಬೇಜವಾಬ್ದಾರಿ ವರ್ತನೆ ದೇಶಕ್ಕೆ ಮುಜುಗರ ತಂದಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.
ಮೇ 26 ರಂದು ಟೆಲಿವಿಷನ್ ಚಾನೆಲ್ ಟೈಮ್ಸ್ ನೌನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, (ಈಗ ಅಮಾನತುಗೊಂಡಿರುವ) ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪತ್ರಕರ್ತರ ಸಂಘಟನೆಯಾದ ಎಡಿಟರ್ಸ್ ಗಿಲ್ಡ್ ಸಂಸ್ಥೆ ಈ ಹೇಳಿಕೆ ನೀಡಿದೆ.
ಹಲವಾರು ಮುಸ್ಲಿಂ ರಾಷ್ಟ್ರಗಳು ಭಾರತೀಯ ರಾಯಭಾರಿಗಳನ್ನು ಕರೆಸಿ, ನೂಪುರ್ ಶರ್ಮಾ ಹೇಳಿಕೆಯನ್ನು ಖಂಡಿಸಿದ್ದು, ಈ ಕೆಲವು ದೇಶಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆಯನ್ನೂ ನೀಡಿದ್ದಾರೆ. ಇದರ ಬೆನ್ನಲ್ಲೇ ಮುಸ್ಲಿಮರ ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗುವಂತಹ ಹೇಳಿಕೆ ನೀಡದಂತೆ ತನ್ನ ನಾಯಕರಿಗೆ ಸೂಚಿಸಿದೆ, ಅಲ್ಲದೆ, ಕೆಲವು ಪ್ರಕರಣಗಳಲ್ಲಿ ಹಿಂದುತ್ವವಾದಿ ನಾಯಕರ ಬಂಧನವೂ ಆಗಿದೆ.
ಈ ವಿವಾದಾತ್ಮಕ ಹೇಳಿಕೆಯು ಜೂನ್ 3 ರಂದು ಕಾನ್ಪುರದಲ್ಲಿ ಹಿಂಸಾಚಾರವನ್ನು ಹುಟ್ಟುಹಾಕಿದ್ದು, ಇದರಿಂದ ಕನಿಷ್ಠ 40 ಜನರು ಗಾಯಗೊಂಡಿದ್ದರು.
“ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಕೋಮು ಪರಿಸ್ಥಿತಿಯನ್ನು ನಿಭಾಯಿಸಲು ಹೊರಡಿಸಿದ ಪತ್ರಿಕೋದ್ಯಮ ನೀತಿಗಳು ಮತ್ತು ಮಾರ್ಗಸೂಚಿಗಳು ಹಾಗೂ ಜಾತ್ಯತೀತತೆಗೆ ರಾಷ್ಟ್ರದ ಸಾಂವಿಧಾನಿಕ ಬದ್ಧತೆಯ ಕುರಿತು ಕೆಲವು ಟಿವಿ ಚಾನೆಲ್‌ಗಳು ಗಮನಹರಿಸಿದ್ದರೆ, ದೇಶಕ್ಕೆ ಅನಗತ್ಯ ಮುಜುಗರ ಉಂಟು ಮಾಡಿದ ಘಟನೆಯನ್ನು ತಪ್ಪಿಸಬಹುದಿತ್ತು” ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
ಕೆಲವು ಸುದ್ದಿ ವಾಹಿನಿಗಳು ಉದ್ದೇಶಪೂರ್ವಕವಾಗಿ ದುರ್ಬಲ ಸಮುದಾಯಗಳನ್ನು ಗುರಿಯಾಗಿಸುವ ಸನ್ನಿವೇಶಗಳನ್ನು ಸೃಷ್ಟಿಸಿವೆ ಎಂದು ಪತ್ರಿಕಾ ಸಂಸ್ಥೆ ಹೇಳಿದೆ.

ಚಾನೆಲ್‌ಗಳು ವಿರಾಮ ತೆಗೆದುಕೊಂಡು, ವಿಭಜಕ ಮತ್ತು ವಿಷಕಾರಿ ಧ್ವನಿಗಳಿಗೆ ನ್ಯಾಯಸಮ್ಮತತೆಯನ್ನು ನೀಡುವ ಮೂಲಕ ಅವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ವಿಮರ್ಶಾತ್ಮಕ ನೋಟವನ್ನು ತೆಗೆದುಕೊಳ್ಳಬೇಕು ಎಂದು ಎಡಿಟರ್ಸ್ ಗಿಲ್ಡ್ ಒತ್ತಾಯಿಸಿದೆ.
ಕಳೆದ ತಿಂಗಳು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೆಹಲಿಯ ಜಹಾಂಗೀರ್ಪುರಿಯಲ್ಲಿನ ಹಿಂಸಾಚಾರ ಮತ್ತು ಉಕ್ರೇನ್ ಬಿಕ್ಕಟ್ಟಿನ ದೂರದರ್ಶನ ಸುದ್ದಿ ವಾಹಿನಿಗಳ ಕೆಲವು ಪ್ರಸಾರವನ್ನು ಟೀಕಿಸಿತು.
ಜಹಾಂಗೀರ್‌ಪುರಿ ಕೋಮು ಹಿಂಸಾಚಾರವನ್ನು ವರದಿ ಮಾಡುವಾಗ ಅವರು “ಕೋಮು ದ್ವೇಷವನ್ನು ಪ್ರಚೋದಿಸುವ ಪ್ರಚೋದನಕಾರಿ ಶೀರ್ಷಿಕೆಗಳು ಮತ್ತು ಹಿಂಸಾಚಾರದ ವೀಡಿಯೊಗಳನ್ನು” ಪ್ರಸಾರ ಮಾಡಿದ್ದಾರೆ ಎಂದು ಚಾನೆಲ್‌ಗಳನ್ನು ಹೆಸರಿಸದೆ ಸಚಿವಾಲಯವು ಹೇಳಿತ್ತು. ಉಕ್ರೇನ್ ಸಂಘರ್ಷದ ಪ್ರಸಾರದಲ್ಲಿ, ಕೆಲವು ಚಾನೆಲ್‌ಗಳು ಸುದ್ದಿ ಐಟಂಗೆ ಸಂಪೂರ್ಣವಾಗಿ ಸಂಬಂಧಿಸದ “ಹಗರಣೀಯ ಮುಖ್ಯಾಂಶಗಳನ್ನು” ನಡೆಸುತ್ತಿವೆ ಎಂದು ಸಚಿವಾಲಯ ಹೇಳಿತ್ತು.
“ಉತ್ತಮ ಅಭಿರುಚಿ ಮತ್ತು ಸಭ್ಯತೆಯ ವಿರುದ್ಧ ಅಪರಾಧ” ಮತ್ತು ಇತರ ವಿಷಯಗಳ ಜೊತೆಗೆ ಧರ್ಮಗಳು ಅಥವಾ ಸಮುದಾಯಗಳನ್ನು ಗುರಿಯಾಗಿಸುವ ವಿಷಯವನ್ನು ಪ್ರಸಾರ ಮಾಡುವುದನ್ನು ತಡೆಯಲು ಚಾನೆಲ್‌ಗಳಿಗೆ ಅಗತ್ಯವಿರುವ ಪ್ರೋಗ್ರಾಂ ಕೋಡ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರವು ದೂರದರ್ಶನ ಚಾನೆಲ್‌ಗಳನ್ನು ಒತ್ತಾಯಿಸಿದೆ.












