ನಿನ್ನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಆದರಿದು ಇಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳೋ ನಾಟಕ ಎಂಬುದಾಗಿ ಬಿಜೆಪಿ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿತ್ತು. ಇದಕ್ಕೆ ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದ್ದು, ‘ಸಿಡಿ’ ಪಕ್ಷವು ‘ಇಡಿ’ಯನ್ನು ಚೂ ಬಿಟ್ಟರೆ ಹೆದರುವವರು ಯಾರೂ ಇಲ್ಲ ಎಂದಿದೆ.

ಹೌದು, ಈ ಕುರಿತಂತೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಒಬ್ಬರ ಅನಾರೋಗ್ಯವನ್ನು ಹಿಯಾಳಿಸುವ ವಿಕೃತಿ ಇರುವುದು ಬಿಜೆಪಿ ಕರ್ನಾಟಕ ಪಕ್ಷಕ್ಕೆ ಮಾತ್ರ. ‘ಸಿಡಿ’ ಪಕ್ಷವು ‘ಇಡಿ’ಯನ್ನು ಚೂ ಬಿಟ್ಟರೆ ಹೆದರುವವರು ಯಾರೂ ಇಲ್ಲ. ಹಾಗೆಯೇ ಕೋವಿಡ್ ವರದಿ ನೀಡುವುದು ನಿಮ್ಮದೇ ಸರ್ಕಾರದ ವ್ಯವಸ್ಥೆ ಎಂಬುದು ನೆನಪಿರಲಿ. SIT ತನಿಖೆ ತಪ್ಪಿಸಲು ರಮೇಶ್ ಜಾರಕಿಹೊಳಿಯ ಕೋವಿಡ್ ಸೋಂಕಿನ ನಾಟಕವನ್ನು ರಾಜ್ಯ ಕಂಡಿದೆ ಎಂದು ವಾಗ್ದಾಳಿ ನಡೆಸಿದೆ.