ನನ್ನ ವಿರುದ್ಧ ದೆಹಲಿಯ AAP ರಾಜ್ಯಸಭಾ ಸದಸ್ಯರೊಬ್ಬರು ದೂರು ನೀಡಿದ್ದಾರಷ್ಟೇ. ಆದರೆ ಇನ್ನೂ ಎಫ್ಐಆರ್ ದಾಖಲಾಗಿಲ್ಲ. ನೋಡೋಣ ಪೊಲೀಸರು ಮುಂದೆ ಏನ್ ಮಾಡ್ತಾರೆ. ನಾನು ಎಂದೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವವರು ರಾಷ್ಟ್ರದ್ರೋಹಿಗಳು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಲಾಯಿತು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿದ್ರು. ಇದನ್ನೇ ಅಧಿವೇಶನದಲ್ಲಿ ಇಟ್ಟುಕೊಂಡು ಹೋರಾಟ ನಡೆಸಿದ್ರು. ನನ್ನ ವಿಚಾರ ಮುಂದಿಟ್ಟುಕೊಂಡು ಪ್ರಚಾರ ಪಡೆದುಕೊಂಡರು. ನಮಗೆ ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿದೆ. ಆದರೆ ಮುಂದೊಂದು ದಿನ ಅದು ರಾಷ್ಟ್ರಧ್ವಜವಾಗಬಹುದು, ಕೆಂಪು ಕೋಟೆಯ ಮೇಲೆ ಹಾರಾಡಬಹುದು ಎಂದು ಹೇಳಿದ್ದೆ ಅಷ್ಟೇ ಎಂದರು.