ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಾದ ಪಠ್ಯ ಪರಿಷ್ಕರಣೆ ಹಲವು ದಿನಗಳಿಂದ ವಿವಾದಕ್ಕೀಡಾಗಿದೆ. ಪಠ್ಯದಲ್ಲಿ ಕೋಮು ರಾಜಕೀಯ, ಬ್ರಾಹ್ಮಣಿಕರಣವಾಗಿದೆ ಎಂದೇಳಿ ಹಲವು ದಿನಗಳಿಂದ ನಾಡಿನ ಅನೇಕ ಜನರು ವಿರೋಧ ವ್ಯಕ್ತಪಡಿಸಿ ದೇವನೂರು ಮಹಾದೇವ, ಜಿ ರಾಮಕೃಷ್ಣ, ಮೂಡ್ನಾಕೂಡು ಚಿನ್ನಸ್ವಾಮಿ ಸೇರಿದಂತೆ ಹಲವು ಸಾಹಿತಿಗಳು ಪಠ್ಯದಲ್ಲಿ ತಮ್ಮ ಲೇಖನವನ್ನು ಹಿಂಪಡೆದಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈಗ ಈ ಸಾಲಿಗೆ ಈಗ ಸಾಹಿತಿ ಈರಪ್ಪ ಎಂ ಕಂಬಳಿ ಕೂಡ ಸೇಪಡೆಯಾಗಿದ್ದು ಪಠ್ಯ ಪುಸ್ತಕದಿಂದ ತಮ್ಮ ಲಲಿತ ಪ್ರಬಂದಕ್ಕೆ ನೀಡಿದ ಅನುಮತಿ ಹಿಂಪಡೆದಿದ್ದೇನೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.
ಹೌದು ಈ ಕುರಿತು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ಪತ್ರ ಬರೆದಿರುವ ಅವರು, ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಅನಾರೋಗ್ಯಕರ ಬೆಳವಣಿಗೆಯನ್ನು ಕಂಡು ನನಗೆ ತೀವ್ರ ಅಸಮಾಧಾನವಾಗಿದೆ.
ಮುಂದುವರೆದು, ಆ ಕಾರಣಕ್ಕೆ ಕಳೆದ ಸಾಲಿನಲ್ಲಿ ಹತ್ತನೇ ತರಗತಿಯ ನುಡಿ ಕನ್ನಡ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿರುವ “ಹೀಗೊಂದು ಟಾಪ್ ಪ್ರಯಾಣ” ಶೀರ್ಷಿಕೆಯ ನನ್ನ ಲಲಿತ ಪ್ರಬಂಧವನ್ನು ಮುಂದುವರೆಸಬಾರದೆಂದು ಹಿಂದೆ ನೀಡಿದ್ದ ನನ್ನ ಅನುಮತಿಯನ್ನು ಈ ಮೂಲಕ ವಾಪಸ್ಸು ಪಡೆದಿರುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಪತ್ರ ಬರೆದಿದ್ದಾರೆ.
