ನವರಸನಾಯಕ ಜಗ್ಗೇಶ್ ಎಂದರೆ ನಗುವಿನ ಚಿಲುಮೆ ಎಂತಹವರಿಗು ಕೂಡ ಇವರ ಮಾತನ್ನು ಕೇಳಿದೊಡನೆ ನಗ್ಗು ಉಕ್ಕಿ ಹರಿಯುತ್ತದೆ. ಉತ್ತಮ ವಾಗ್ಮಿ ಹಾಗು ತಮ್ಮ ಮಾತಿನ ಚಾಕಚಕ್ಯತೆಯಿಂದಲ್ಲೆ ಅಪಾರ ಅಭಿಮಾನಿ ಬಳಗವನ್ನ ಅವರು ಹೊಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಾಯಕನಟ, ಹಾಸ್ಯ ನಟ, ಖಳ ನಟ, ನಿರ್ದೇಶನ ಹಾಗೂ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಿರುವ ನವರಸ ನಾಯಕ ಜಗ್ಗೇಶ್ ಅವಕಾಶಗಳ ಬಾಗಿಲು ತೆರೆದರೂ ಅನ್ಯ ಭಾಷೆಯತ್ತ ಮುಖಮಾಡದೇ ಕನ್ನಡದೇ ಇರ್ತೀನಿ ಅಂತ ಸೀಮಿತವಾಗಿದ್ದ ನಟನಿಗೆ ಈಗ ರಾಜ್ಯಸಭೆಯ ಬಾಗಿಲು ತೆರೆದಿದೆ.
ನಟ ಜಗ್ಗೇಶ್ ಗೆ ಕನ್ನಡ ಮೇಲಿನ ಪ್ರೇಮ ಅಷ್ಟಿಷ್ಟಲ್ಲಾ ಕನ್ನಡ ಪರ ಹೋರಾಟ ಹಾಗು ತಮ್ಮ ಭಾಷಾಭಿಮಾನದಿಂದಲೇ ಎಲ್ಲರಿಗೂ ಅಚ್ಚುಮೆಚ್ಚು ಎನಿಸಿದ್ದಾರೆ. ಇಂತಹ ನಟಿನಿಗೆ ಇದೀಗ ದೆಹಲಿ ವಿಮಾನ ಏರುವ ಅವಕಾಶ ಒದಗಿ ಬಂದಿದೆ.

ಅಂದರೆ, ಬಿಜೆಪಿ ಹೈಕಮಾಂಡ್ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಜಗ್ಗೇಶ್ ಅವರನ್ನು ಆಯ್ಕೆ ಮಾಡಿದೆ.
ಕನ್ನಡ ಹಾಗೂ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಎದುರಾದಾಗಲೆಲ್ಲಾ ಧ್ವನಿ ಎತ್ತುವುದು ಮಾತ್ರವಲ್ಲದೇ ಪ್ರತಿಭಟನೆಗಳಲ್ಲೂ ತೊಡಗಿಸಿಕೊಂಡವರು. ಜಗ್ಗೇಶ್ ತಾನು ಕನ್ನಡ ಪ್ರೇಮಿ ಎಂದು ಕನ್ನಡ ಬಿಟ್ಟು ನನಗೆ ಬೇರೆ ಭಾಷೆ ಗೊತ್ತಿಲ್ಲ ಎಂದು ಸಾರಿ ಸಾರಿ ಹೇಳಿದ್ದಾರೆ. ಇದೀಗ ಈ ನಟನಿಗೆ ರಾಜ್ಯಸಭೆಯ ಬಾಗಿಲು ತೆರೆದಿದ್ದು ದೆಹಲಿಯು ಕನ್ನಡದ ಕಂಪು ಪಸರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬಿಜೆಪಿ ಹೈಕಮಾಂಡ್ ಜಗ್ಗೇಶ್ ಆಯ್ಕೆಯಲ್ಲಿ ವಿಶಿಷ್ಟ ಹೆಜ್ಜೆಯನ್ನು ಅನುಸರಿಸಿದೆ ಎಂಬುದರಲ್ಲಿ ಯಾವುದೇ ತಪ್ಪಿಲ್ಲ ಯಾಕೆಂದರೆ ಈ ಹಿಂದೆ ಕರ್ನಾಟಕದಿಂದ ರಾಜ್ಯಸಭೆಗೆ ಬಿಜೆಪಿಯಿಂದ ಕನ್ನಡಿಗರು ಆಯ್ಕೆಯಾಗಿ ಹೋಗಿದ್ದು ತೀರಾ ವಿರಳ ಇದೀಗ ಜಗ್ಗೇಶ್ರನ್ನು ಆಯ್ಕೆ ಮಾಡುವ ಮೂಲಕ ವಿಶಿಷ್ಟ ಹೆಜ್ಜೆಯನ್ನ ಅನುಸರಿಸಿದೆ.
ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಭಾಷೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಹಿಂದಿ ಬಾರದ ಸ್ಥಳೀಯ ನಟನೊಬನನ್ನು ಗುರುತಿಸಿ ರಾಜ್ಯಸಭೆಗೆ ಅವಕಾಶ ನೀಡಿರುವುದು ಗಮನಾರ್ಹ ವಿಚಾರ.
