ಆರ್.ಎಸ್.ಎಸ್ ಟೀಕೆ ಮಾಡೋದು ಕಾಂಗ್ರೆಸ್ ನವರಿಗೆ ಒಂದು ಫ್ಯಾಷನ್ ಆಗಿದೆ. ಇಂತಹ ದೇಶಪ್ರೇಮದ ಸಂಘಟನೆ ಪ್ರಪಂಚದಲ್ಲೇ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಗದಗದಲ್ಲಿ ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವಂತ ಕೆಲಸ ಮಾಡಿದೆ. ಆದ್ರೆ ಕಾಂಗ್ರೆಸ್ ನವರಿಗೆ ಬೆಳಿಗ್ಗೆ ಯಿಂದ ಸಂಜೆ ವರೆಗೆ ಟೀಕೆ ಮಾಡೋದೆ ಒಂದು ಹವ್ಯಾಸವಾಗಿದೆ. ಆರ್.ಎಸ್.ಎಸ್ ಟೀಕೆ ಮಾಡದಿದ್ರೆ ಕಾಂಗ್ರೆನವರಿಗೆ ಉಂಡಿದ್ದು ಜೀರ್ಣ ಆಗೋದಿಲ್ಲ ಎಂದು ಕಿಡಿಕಾರಿದ್ದಾರೆ.

ಆರ್.ಎಸ್.ಎಸ್. ಟೀಕೆ ಮಾಡೋದ್ರ ಮೂಲಕ ಅಲ್ಪಸಂಖ್ಯಾತರನ್ನ ಓಲೈಸೋ ಕೆಲಸ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದ್ದಾರೆ.
ಆದ್ರೆ ಅಲ್ಪಸಂಖ್ಯಾತರು ಸಹ ಕಾಂಗ್ರೆಸ್ ನವರಿಗೆ ಓಟು ಕೊಡೋದಿಲ್ಲ. ಪಂಜಾಬ್ ದಲ್ಲಿ ಉತ್ತರ ಪ್ರದೇಶದಲ್ಲಿ ಯಾಕೆ ಅಲ್ಪಸಂಖ್ಯಾತರು ಕಾಂಗ್ರೆಸ್ಗೆ ಮತ ಹಾಕ್ಲಿಲ್ಲ. ಯಾವುದೇ ಒಂದು ಸಮುದಾಯವನ್ನು ತುಷ್ಟೀಕರಣ ಮಾಡುವ ಮೂಲಕ ಉಳಿದವರನ್ನ ಕಳೆದುಕೊಳ್ತಿದ್ದೀರಿ ಎಂದು ಈ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರ್ ಎಸ್ ಎಸ್ ಬಗ್ಗೆಗಿನ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.