ಭಾರತ ಹಾಗು ರಾಯಲ್ ಚಾಲೆಂಜರ್ಸ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚಿನ ವರ್ಷಗಳಲ್ಲಿ ರನ್ ಬರ ಎದುರಿಸುತ್ತರಿಉವುದು ಎಲ್ಲರಿಗು ಗೊತ್ತಿರುವ ವಿಚಾರ ಆರಂಭಿಕ ಹಾಗು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು ಸಹ ಅತೀವ್ ರನ್ ಬರ ಎದುರಿಸುತ್ತಿದ್ದಾರೆ.
ನಿನ್ನೆ ನಡೆದ ಐಪಿಎಲ್ ಸೆಮಿಫೈನಲ್ನಲ್ಲಿ ಆರಂಭಿಕರಾಗಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರು ಸಹ 7 ರನ್ ಗಳಿಸಲಷ್ಟೇ ಶಕ್ತರಾದರು ಇವರ ವೈಫಲ್ಯವೇ ಆರ್ಸಿಬಿ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಈ ವಿಚಾರವಾಗಿ ಮಾತನಾಡಿರುವ ಭಾರತದ ಮಾಜಿ ಬ್ಯಾಟ್ಸ್ಮ್ಯಾನ್ ವೀರೇಂದ್ರ ಸೆಹ್ವಾಗ್ 14 ಆವೃತ್ತಿಗಳಲ್ಲಿ ಕೊಹ್ಲಿ ಮಾಡದ ತಪ್ಪನ್ನು ಇದೊಂದೆ ಆವೃತ್ತಿಯ್ಲಲಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರೆದು, ಕಳೆದ ಎರಡುವರೆ ವರ್ಷಗಳಿಂದ ಕೊಹ್ಲಿ ಯಾವುದೇ ಅಂತರಾಷ್ಟ್ರೀಯ ಶತಕವನ್ನ ಗಳಿಸಿಲ್ಲ. ಐಪಿಎಲ್ನಲ್ಲಿ ಆಡಿರುವ 16 ಪಂದ್ಯಗಳಲ್ಲಿ 22.73 ಸರಾಸರಿಯಲ್ಲಿ ಎರಡು ಅರ್ಧಶತಕ ಸೇರಿದಂತೆ 341 ರನ್ ಗಳಿಸಿದ್ದಾರೆ.
ಇದು ನನ್ನಗನಿಸುವ ಮಟ್ಟಿಗೆ ವಿರಾಟ್ ಕೊಹ್ಲಿಯ ಆಟವಲ್ಲ ಈ ಆವೃತ್ತಿಯ್ಲಲಿ ಮಾಡಿದ ಎಡವಟ್ಟುಗಳು ಸಂಖ್ಯೆ ತಮ್ಮ 14 ವರ್ಷಗಳ ವೃತ್ತಿಜೀವನದಲ್ಲಿ ಮಾಡಿಲ್ಲ ಎಂದು ಕ್ರಿಕ್ಬಜ್ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.