ಟಿಕ್ ಟಾಕ್ ನಲ್ಲಿ ಖ್ಯಾತಿ ಪಡೆದಿದ್ದ 35 ವರ್ಷದ ಕಲಾವಿದೆಯನ್ನು ಉಗ್ರರು ಗುಂಡಿಟ್ಟು ಕೊಂಡ ಆಘಾತಕಾರಿ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.
ಬಡ್ಗಮ್ ಜಿಲ್ಲೆಯಲ್ಲಿ ಬುಧವಾರ ಸಂಜೆ 7.55ರ ಸುಮಾರಿಗೆ ಲಷ್ಕರೆ ಇ-ತೋಯ್ಬಾ ಸಂಘಟನೆಯ ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದು, 10 ವರ್ಷದ ಸೋದರಳಿಯ ದಾಳಿಯಲ್ಲಿ ಗಾಯಗೊಂಡಿದ್ದಾನೆ.
ಟಿಕ್ ಟಾಕ್ ಕಲಾವಿದೆ ಅಮರಿನ್ ಬಟ್ ಒಂಟಿಯಾಗಿ ಮನೆಯಲ್ಲಿದ್ದಾಗ ನುಗ್ಗಿದ ಉಗ್ರರು ಗುಂಡು ಹಾರಿಸಿ ಕೊಲೆ ಮಾಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
10 ವರ್ಷದ ಸೋದರಳಿಯ ಫರ್ಹಾನ್ ಜುಬೇರ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದು, ಉಗ್ರರಿಗೆ ಬಲೆ ಬೀಸಿದ್ದಾರೆ.