ಅಭೂತಪೂರ್ವ ಗೆಲುವನ್ನು ಸಾಧಿಸಿದ ಪಂಜಾಬ್ ಎಎಪಿ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ತಮ್ಮ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಸಂಪುಟದಿಂದ ವಜಾಗೊಳಿಸಿದ್ದಾರೆ.
ಟೆಂಡರ್ಗಳಲ್ಲಿ ಒಂದು ಶೇಕಡಾ ಕಮಿಷನ್ಗೆ ಬೇಡಿಕೆಯಿಡುತ್ತಿದ್ದರು ಎಂಬ ಭ್ರಷ್ಟಾಚಾರದ ಕುರಿತು ಅವರ ವಿರುದ್ಧ ದೃಢವಾದ ಸಾಕ್ಷ್ಯಗಳು ಕಂಡುಬಂದ ಕಾರಣ ಅವರನ್ನು ಪಂಜಾಬ್ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳಬಂದಿಸಿ ನಂತರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಿವ ನಿರ್ಧಾರ ಕೈಕೊಂಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಿರುವುದಾಗಿ ಮಂಗಳವಾರ ಟ್ವೀಟ್ ಮಾಡುವ ಮೂಲಕ ತಿಳಿಸಿದ್ಧಾರೆ.

ಟೆಂಡರ್ಗಳಿಗೆ ಸಚಿವ ವಿಜಯ್ ಸಿಂಗ್ಲಾ ಶೇಕಡಾ ಒಂದು ಪರ್ಸೆಂಟ್ ಕಮಿಷನ್ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ತಿಳಿದ ನಂತರ ತಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮಾನ್ ಹೇಳಿಕೊಂಡಿದ್ದಾರೆ.






