RSS ಪ್ರೇರಿತ ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಿ, ಮಕ್ಕಳ ಶಿಕ್ಷಣಕ್ಕೂ ರೋಹಿತ್ ತೀರ್ಥ ಎಂಬ ಆರ್ಎಸ್ಎಸ್ ಸದಸ್ಯನಿಗೂ ಯಾವುದೇ ಸಂಬಂದ ಇಲ್ಲದೇ ಇದ್ದರೂ. ಇಂತಹ ವ್ಯಕ್ತಿಯಿಂದ ಪರಿಷ್ಕರಣೆಯಾದ ಪಠ್ಯ ಪುಸ್ತಕವನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಮತ್ತು ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಇಂದು ಟ್ವೀಟರ್ ಅಭಿಯಾನ ನಡೆದಿದ್ದು ದೇಶದಲ್ಲಿಯೇ ಮೊದಲ ಟ್ರೆಂಡ್ ಆಗಿದೆ.
ಹೌದು, ಪಠ್ಯದಲ್ಲಿ ಒಂದು ಜಾತಿಯ ಲೇಖಕರ ವಿಜೃಂಭಣೆ, ಕೇಸರೀಕರಣ ಆಗಿದೆ ಅಂತ ಆರೋಪಿಸಿ, RejectBrahminTextBooks #RejectRSSTextBooks ಎಂಬ ಹ್ಯಾಶ್ ಟ್ಯಾಗ್ ನಡಿ ನಾಡಿನ ಜನತೆ ಸ್ವಯಂ ಪ್ರೇರಿತವಾಗಿ ಟ್ವೀಟರ್ ಅಭಿಯಾನ ನಡೆಸಿದ್ದು, 10 ಸಾವಿರಕ್ಕು ಹೆಚ್ಚು ಟ್ವೀಟ್ ಮತ್ತು ರಿ ಟ್ವೀಟ್ ಆಗಿದ್ದು, ದೇಶದಲ್ಲಿಯೇ ಮೊದಲ ಟ್ರೆಂಡ್ ಕ್ರಿಯೇಟ್ ಆಗಿದೆ. ಅಭಿಯಾನದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಖಂಡಿಸಿ ಮತ್ತು ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಕನ್ನಡ ನಾಡಿನ ಅಸ್ಮಿತೆ, ಕನ್ನಡ ಭಾಷೆಯ ಘನತೆಗಳನ್ನು ಗಾಳಿಗೆ ತೂರುವ ರೋಹಿತ್ ಚಕ್ರತೀರ್ಥರವರ ಸಮಿತಿ, ಅದಕ್ಕೆ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಲ್ಲೊಬ್ಬರಾದ ಹಡಗೇವಾರ್ರವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು’, ಬನ್ನಂಜೆ ಗೋವಿಂದಾಚಾರ್ಯರವರ ‘ಶುಕನಾಸನ ಉಪದೇಶ’ ಶತಾವಧಾನಿ ಗಣೇಶ್ ರವರ ‘ಶ್ರೇಷ್ಠ ಭಾರತೀಯ ಚಿಂತನೆಗಳು, ಶಿವಾನಂದ ಕಳವೆಯವರ ‘ಸ್ವದೇಶಿ ಸೂತ್ರದ ಸರಳ ಹಬ್ಬ’ ಪಠ್ಯಗಳನ್ನು ಸೇರಿಸಲಾಗಿದೆ. ಯಾವ ಕಾರಣಕ್ಕೆ ಕನ್ನಡದ ಪ್ರಮುಖ ಲೇಖಕ, ಲೇಖಕಿಯರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಕಾರಣಗಳನ್ನು ಕೊಟ್ಟಿಲ್ಲ ಎಂದು ಕನ್ನಡಿಗರೆಲ್ಲರೂ ಕಿಡಿಕಾರಿದ್ದಾರೆ.
ಇನ್ನು ಪಠ್ಯಪೂರಕ ಅಧ್ಯಯನಕ್ಕೆ ಭಗತ್ ಸಿಂಗ್ ಪಾಠದ ಜೊತೆ ಚಕ್ರವರ್ತಿ ಸೂಲಿಬೆಲೆ ಪಾಠವನ್ನೂ ಶಿಕ್ಷಣ ಇಲಾಖೆ ಸೇರಿಸಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಚಕ್ರವರ್ತಿ ಸೂಲಿಬೆಲೆಯವರ ಅಧ್ಯಯನ ದಕ್ಷತೆ ಬಗ್ಗೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರೆಲ್ಲರೂ ಒಮ್ಮತದಿಂದ ಟ್ವೀಟ್ ಮಾಡಿ ತೀಕ್ಷ್ಮವಾಗಿ ಪ್ರಶ್ನಿಸಿದ್ದಾರೆ.
ಅಭಿಯಾನಕ್ಕೆ ಸಂಬಂಧಿಸಿದ ಒಂದಷ್ಟು ಟ್ವೀಟ್ಗಳು ಇಲ್ಲಿವೆ :