ಮುಂದಿನ ಹೋರಾಟದ ಬಗ್ಗೆ ಜಾತ್ರೆ ನಂತರದಲ್ಲಿ ನಿರ್ಧರಿಸಲಾಗುವುದು ಎಂದು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಗದಗ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಅವರು, ಮೇ.16 ಮತ್ತು 17ಕ್ಕೆ ಶಿರಹಟ್ಟಿ ಮಠದ ಜಾತ್ರೆ ಇರುವುದರಿಂದ ಈಗ ನಾವು ಜಾತ್ರೆಯ ತಯಾರಿಯಲ್ಲಿದ್ದೇವೆ. ಜಾತ್ರೆಯ ನಂತರ ಭಾವೈಕ್ಯತೆ ವಿಚಾರವಾಗಿ ಮತ್ತೇ ಪ್ರಾಸ್ತಾಪಿಸುತ್ತೇವೆ ಎಂದರು.
ಇನ್ನು ಸಚಿವ ಸಿ.ಸಿ. ಪಾಟೀಲರ ವಿರುದ್ಧ ಧರಣಿ ವಿಷಯಕ್ಕೆ ಸಂಬಂಧಿಸಿದಂತೆ ಭಕ್ತರ ಕೆಲವು ಜೊತೆಗೆ ಒಂದು ಸುತ್ತಿನ ಸಭೆ ಮಾಡಿದ್ದೇನೆ. ಸಿ.ಸಿ. ಪಾಟೀಲರ ವಿರುದ್ಧ ಸ್ವಾಮಿಗಳು ಪ್ರಚಾರ ಮಾಡಿ, ಎಲೆಕ್ಷನ್ ನಲ್ಲಿ ಸೋಲಿಸಲಿದ್ದಾರೆ ಅನ್ನೋ ವದಂತಿಗೆ ಏನು ಹೇಳಬೇಕು? ಸ್ವಾಮಿಗಳು ಯಾರನ್ನೂ ಗೆಲ್ಲಿಸಲು ಸೋಲಿಸಲು ಹೋಗಲ್ಲ. ಜನ ಪ್ರಜ್ಞಾವಂತರಿದ್ದಾರೆ. ಯಾರನ್ನು ಸೋಲಿಸಬೇಕು, ಯಾರನ್ನು ಗೆಲ್ಲಿಸಬೇಕು ಎನ್ನುವ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ಜಾತ್ರೆ ನಂತ ಎರಡನೇ ಸುತ್ತನ ಸಭೆ ನಡೆಸಿ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದರು.
ಫಕೀರ ದಿಂಗಾಲೇಶ್ವರ ಶ್ರೀಗಳು ಕೆಲ ದಿನಗಳ ಹಿಂದಷ್ಟೆ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಪರ್ಸೆಂಟೇಜ್ ವ್ಯವಹಾರದ ಬಗ್ಗೆ ಹಾಗೂ ಸಿಎಂ ಬೊಮ್ಮಾಯಿ ಅವರು ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ಜನ್ಮ ದಿನವನ್ನು ಭಾವೈಕ್ಯ ದಿನವಾಗಿ ಘೋಷಿಸಿದ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.












