• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಇವಿಎಂ ಬಗ್ಗೆ ಕಾಂಗ್ರೆಸ್‌ ಮತ್ತೆ ಅಪಸ್ವರ: ವಿಶ್ವದ ಯಾವೆಲ್ಲಾ ದೇಶಗಳಲ್ಲಿ ಇವಿಎಂಗಿದೆ ಮಾನ್ಯತೆ?

Shivakumar A by Shivakumar A
May 12, 2022
in ದೇಶ, ರಾಜಕೀಯ
0
ಇವಿಎಂ ಬಗ್ಗೆ ಕಾಂಗ್ರೆಸ್‌ ಮತ್ತೆ ಅಪಸ್ವರ: ವಿಶ್ವದ ಯಾವೆಲ್ಲಾ ದೇಶಗಳಲ್ಲಿ ಇವಿಎಂಗಿದೆ ಮಾನ್ಯತೆ?
Share on WhatsAppShare on FacebookShare on Telegram

ವಿದ್ಯುನ್ಮಾನ ಮತಯಂತ್ರ ಅಥವಾ ಇವಿಎಂ ವಿರುದ್ಧ ಮತ್ತೆ ಅಪಸ್ವರಗಳು ಎದ್ದಿವೆ. ಬಿಜೆಪಿ ಸರ್ಕಾರ ಇರುವ ಕಡೆ ಆಡಳಿತ ವಿರೋಧಿ ಅಲೆಯಿದ್ದರೂ ಬಿಜೆಪಿಯ ಸತತ ಗೆಲುವಿನ ನಾಗಾಲೋಟವು ಇವಿಎಂ ಹ್ಯಾಕ್‌ಗಳ ಬಗ್ಗೆ ಪುಕಾರು ಏಳಲು ಕಾರಣವಾಗಿತ್ತು. ಅಲ್ಲದೆ, ಚುನಾವಣೆ ಸಂದರ್ಭಗಳಲ್ಲಿ ನಡೆದ ಹಲವು ಇವಿಯಂ ಯಂತ್ರಗಳ ಅನಧಿಕೃತ ಸಾಗಾಟವು ಈ ಅನುಮಾನಗಳನ್ನು ಇನ್ನಷ್ಟು ಬಲಗೊಳಿಸಿತ್ತು. ಇದೀಗ, ಕಾಂಗ್ರೆಸ್‌ ಪಕ್ಷವು 19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿರುವ ಕುರಿತು ಮಾಹಿತಿ ನೀಡಿ, ಇವಿಎಂ ಬಗೆಗಿನ ಅಪನಂಬಿಕೆಗಳನ್ನು ಮತ್ತೆ ಎತ್ತಿದ್ದಾರೆ. ಹಾಗೂ ಹಲವಾರು ಚುನಾವಣಾ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದೆ.

ADVERTISEMENT

ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿ ಮಾಡಿದ ಕಾಂಗ್ರೆಸ್‌ ಹಿರಿಯ ನಾಯಕ ಹೆಚ್‌ ಕೆ ಪಾಟೀಲ್‌ ಅವರು, ದೇಶದಲ್ಲಿ 19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ, ವಿಧಾನಸಭೆ ಸ್ಪೀಕರ್ ಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಮತಯಂತ್ರಗಳ ಕಾಣೆಯ ಕುರಿತ ಪುರಾವೆಗಳನ್ನು ಕೂಡಾ ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ.

“ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ ಚುನಾವಣಾ ಸುಧಾರಣೆಗಳ ಕುರಿತು ಒಂದು ಸುದೀರ್ಘವಾದ ಚರ್ಚೆಯನ್ನು ನಾವು ಮಾಡಿದೆವು. ನಾನು ಈ ವಿಷಯದಲ್ಲಿ ಪ್ರಸ್ತಾಪ ಮಾಡಿ ಹಲವಾರು ಚುನಾವಣೆ ಸುಧಾರಣೆಗಳನ್ನು ಬಗ್ಗೆ ಮಾತನಾಡಿದೆ. ಅದೇ ರೀತಿ ಸಾಕಷ್ಟು ಹಿರಿಯ ಸದಸ್ಯರು ಸದನದಲ್ಲಿ ತಮ್ಮದೇ ಆದ ಅಭಿಪ್ರಾಯಗಳನ್ನು ಮಂಡಿಸಿದ್ದರು. ನಾನು ವಿಚಾರವಾಗಿ ಮಾತನಾಡಿದಾಗ ನಾಲ್ಕೈದು ವಿಚಾರವಾಗಿ ಸದನದಲ್ಲಿ ಮಾತನಾಡಿದೆ. ಅದರಲ್ಲಿ ಮೊದಲನೆಯದು 19 ಲಕ್ಷ ಮತಯಂತ್ರಗಳು ಕಾಣೆಯಾಗಿದೆ ಮತ್ತೊಂದು ವಿಚಾರ ಎಂದರೆ ನ್ಯಾಯಾಲಯಗಳು ನಮ್ಮ ಚುನಾವಣಾ ಅರ್ಜಿಗಳನ್ನು ಆಗಲಿ ಈವಿಎಂ ಸಂಬಂಧಿತ ಪ್ರಕರಣಗಳನ್ನು ಅಂತ್ಯಗೊಳಿಸಿದ ರೊಳಗೆ ಅವಮಾನ ಮಾಡುವ ರೀತಿ ವಿಳಂಬ ಮಾಡುತ್ತಾರೆ. ಇಂತಹ ತೀರ್ಥಗಳು ಸಾಕಷ್ಟು ಪ್ರಭಾವ ಬೀರುತ್ತದೆ. “ ಎಂದು ಹೆಚ್‌ ಕೆ ಪಾಟೀಲ್‌ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಮತಯಂತ್ರಗಳ ಹ್ಯಾಕ್ ಮಾಡುವ ವಿಚಾರವಾಗಿ ಬಹಳಷ್ಟು ಗೊಂದಲಗಳಿದ್ದು, ಸಾಕಷ್ಟು ಅನುಮಾನಗಳಿದ್ದು ಇವುಗಳನ್ನು ಹೋಗಲಾಡಿಸಲು ಸಾಕಷ್ಟು ಹ್ಯಾಕಥಾನ್ ಗಳನ್ನು ರಾಷ್ಟ್ರೀಯ ಚುನಾವಣಾ ಆಯೋಗ ನಡೆಯಬೇಕು. ರಾಜ್ಯ ಚುನಾವಣಾ ಆಯೋಗ ಎಥಿಕಲ್ ಹ್ಯಾಕಥಾನ್ ಅನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಲಿ ಎಂದು ಅವರು ಆಗ್ರಹಿಸಿದ್ದರು.

ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ಸಮಿತಿ ರಚಿಸಿ 19 ಲಕ್ಷ ಕಾಣೆಯಾಗಿರುವುದು ತನಿಖೆ ಮಾಡಿಸಬೇಕು ಎಂದು ಎಚ್‌ ಕೆ ಪಾಟೀಲ್‌, ಈ ಹಿನ್ನೆಲೆಯಲ್ಲಿ ನನ್ನ ಮಾತುಗಳಿಗೆ ಪುರಾವೆ ಹಾಗೂ ಹೆಚ್ಚಿನ ಮಾಹಿತಿಗಳನ್ನು ನೀಡಲು ಸಾಧ್ಯವಿದೆ ಅವುಗಳನ್ನು 2750 ಪುಟಗಳ ಕಾಗದ ಪತ್ರಗಳನ್ನು ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದ್ದರು.

ಇವಿಎಂ ಕುರಿತು ಮಾಧ್ಯಮಗಳು ಸಾಕಷ್ಟು ವರದಿ ಮಾಡಿವೆ. ಇತ್ತೀಚಿಗಷ್ಟೇ ಟ್ರಕ್ ಗಳಷ್ಟು ಇವಿಎಂ ಗಳು ಮಾರುಕಟ್ಟೆಯಲ್ಲಿ ಪ್ರದರ್ಶನಗೊಂಡಿದ್ದವು. ಈ ವಿಚಾರ ಇಷ್ಟು ಸೂಕ್ಷ್ಮವಾಗಿ ಇರುವಾಗ 15 ವರ್ಷಕ್ಕಿಂತ ಹಳೆಯ ಇವಿಎಂ ಗಳನ್ನು ಇಟ್ಟುಕೊಳ್ಳಬಾರದು. ಹಳೆಯದಾದ ಇವಿಯಂಗಳನ್ನು ಹೇಗೆ ನಾಶಗೊಳಿಸಬೇಕು ಎಂಬುದರ ಬಗ್ಗೆ 2006 ರಲ್ಲಿ ಸಮಿತಿ ಮಾಡಿ, ಆ ಸಮಿತಿ 2007ರಲ್ಲಿ ತನ್ನ ವರದಿ ಸಲ್ಲಿಸಿತು. ಈ ವಿಚಾರವಾಗಿ ಯಾವ ನಿಯಮಗಳನ್ನು ರೂಪಿಸಬೇಕು ಎಂಬ ಶಿಫಾರಸು ನೀಡಿತು. 2007 ರಿಂದ 2018ರ ವರೆಗೆ ಸುಮಾರು 12ವರ್ಷಗಳ ಕಾಲ ಚುನಾವಣಾ ಆಯೋಗ ಮೌನವಾಗಿ ಕುಳಿತಿತ್ತು. ಈ ಇವಿಎಂ ಗಳನ್ನು ನಾಶಗೊಳಿಸಲು ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ವರ್ತನೆ ಮಾಡಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಇವಿಎಂ ಕುರಿತು ಕಾಂಗ್ರೆಸ್‌ ಅಪಸ್ವರ ಇಂದು ನಿನ್ನೆಯದಲ್ಲ. ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಮಾತ್ರವಲ್ಲದೆ ಹಲವು ಪ್ರತಿಪಕ್ಷಗಳು ಇವಿಎಂ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದವು. ಇದೀಗ, ಚುನಾವಣೆಗೆ ಕೆಲವೇ ವರ್ಷಗಳು ಉಳಿದಿರುವ ಬೆನ್ನಲ್ಲೇ ಮತ್ತೆ ಇವಿಎಂ ಬಗ್ಗೆ ತಗಾದೆಗಳನ್ನು ಎತ್ತಿದೆ.

2019 ರಲ್ಲಿ ಸುಮಾರು 22 ಪ್ರತಿಪಕ್ಷಗಳು ಇವಿಎಂ ಬಗ್ಗೆ ಅಪಸ್ವರ ಎತ್ತಿ ಚುನಾವಣಾ ಆಯೋಗವನ್ನು ಸಂಪರ್ಕಿಸಿತ್ತು. ಎರಡನೇ ಅವಧಿಗೆ ನರೇಂದ್ರ ಮೋದಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಅಂದಾಜಿಸಿದ್ದರೂ, ಎಲ್ಲಾ ಅಂದಾಜುಗಳಿಗೆ ಮೀರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಪ್ರಚಂಡ ಬಹುಮತದಿಂದ ಮತ್ತೆ ಸರ್ಕಾರ ರಚಿಸಿತ್ತು.

1982 ರಿಂದಲೇ ಭಾರತದಲ್ಲಿ ಇವಿಎಂ!

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡಿರುವ ಭಾರತದಲ್ಲಿ ಮೊದಲ ಬಾರಿಗೆ ಇವಿಎಂ ಬಳಸಿರುವುದು 1982ರಲ್ಲಿ. ಕೇರಳದ ಪರೂರ್ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ಇವಿಎಂ ಮತಯಂತ್ರವನ್ನು ಮೊದಲ ಬಾರಿಗೆ ಬಳಸಲಾಗಿತ್ತು. ಇದಾದ ಬಳಿಕ 1999 ರ ಲೋಕಸಭಾ ಚುನಾವಣೆ ವೇಳೆ ಸೀಮಿತ ಕ್ಷೇತ್ರದಲ್ಲಿ ಇವಿಎಂ ಮತಯಂತ್ರಗಳ ಪ್ರಯೋಗ ಮಾಡಲಾಗಿತ್ತು.‌ ಆದರೆ, 2004 ರ ಲೋಕಸಭಾ ಚುನಾವಣೆ ನಂತರ ನಡೆದ ಪ್ರತಿಯೊಂದು ವಿಧಾನಸಭಾ ಚುಣಾವಣೆಯಲ್ಲೂ ಇವಿಎಂ ಬಳಕೆ ವ್ಯಾಪಕಗೊಂಡಿತ್ತು.

ಯಾವೆಲ್ಲಾ ದೇಶದಲ್ಲಿ ಇವಿಎಂಗೆ ನಿಷೇಧ.!

ಇನ್ನು ಇವಿಎಂ ವಿರುದ್ಧ ಇಷ್ಟೆಲ್ಲಾ ಅಪಸ್ವರಗಳಿದ್ದರೂ ಚುನಾವಣಾ ಆಯೋಗ ಇವಿಎಂ ಅನ್ನು ಸಮರ್ಥಿಸುತ್ತಲೇ ಬಂದಿವೆ. ವಿಶ್ವದ 195 ರಾಷ್ಟ್ರಗಳಲ್ಲಿ ಕೇವಲ 20 ದೇಶಗಳಲ್ಲಿ ಮಾತ್ರ ಇವಿಎಂ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಅದಾಗ್ಯೂ, ಈ 20 ದೇಶಗಳಲ್ಲಿ 6 ದೇಶಗಳು ಚುನಾವಣೆಗೆ ಸಂಪೂರ್ಣವಾಗಿ ಇವಿಎಂ ಅನ್ನು ನೆಚ್ಚಿಕೊಂಡಿಲ್ಲ. ಭಾರತವನ್ನು ಹೊರತುಪಡಿಸಿ, ಬ್ರೆಝಿಲ್, ಫಿಲಿಫೈನ್ಸ್, ಬೆಲ್ಜಿಯಂ, ಎಸ್ಟೋನಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ವೆನೆಜುವೆಲಾ, ಜೋರ್ಡಾನ್, ಮಾಲ್ಡೀವ್ಸ್, ನಮೀಬಿಯಾ, ನೇಪಾಳ, ಭೂತಾನ್, ಈಜಿಪ್ಟ್ ದೇಶಗಳಲ್ಲಿ ಮತ ಚಲಾವಣೆಗೆ ಇವಿಎಂ ಗಳನ್ನು ಬಳಸಲಾಗುತ್ತಿದೆ.

ಇನ್ನು ಅನೇಕ ದೇಶಗಳಲ್ಲಿ ಇವಿಎಂಗಳನ್ನು ಬಳಕೆಗೆ ತಂದು ನಂತರ ನಿಷೇಧಿಸಲಾಯಿತು. ಭದ್ರತೆ ಮತ್ತು ಅಪನಂಬಿಕೆಯ ಕಾರಣದಿಂದ ಜರ್ಮನಿ, ನೆದರ್ಲ್ಯಾಂಡ್ಸ್, ಇಟಲಿ ಮತ್ತು ಅಮೆರಿಕ ದೇಶಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಕ್ಕೆ ಬಳಕೆಗೆ ನಿಷೇಧ ಹೇರಲಾಗಿದೆ. ಐರ್ಲೆಂಡ್, ನೆದರ್ಲ್ಯಾಂಡ್ಸ್ನಲ್ಲಿ ಇವಿಎಂ ಮೇಲೆ ನಿಷೇಧ ಹೇರಲಾಯಿತು. ಹಾಗೆಯೇ 2009 ರಲ್ಲಿ ಜರ್ಮನಿ ಸರ್ವೋಚ್ಚ ನ್ಯಾಯಾಲಯ ಮತದಾನಕ್ಕೆ ಇವಿಎಂ ಬಳಕೆ ಅಸಂವಿಧಾನಿಕ ಎಂದು ತೀರ್ಪು ನೀಡಿ ಅಲ್ಲೂ ನಿಷೇಧ ಮಾಡಲಾಗಿತ್ತು. ಇಟಲಿಯಲ್ಲೂ ಚುನಾವಣಾ ಫಲಿತಾಂಶಗಳ ಮೇಲೆ ಇವಿಎಂ ಪರಿಣಾಮ ಬೀರುತ್ತಿದೆ ಎಂದು ನಿಷೇಧಿಸಲಾಯಿತು. ಆದರೆ ಇಂಗ್ಲೆಂಡ್ ಮತ್ತು ಫ್ರಾನ್ಸ್ನಲ್ಲಿ ಚುನಾವಣೆಗೆ ಇವಿಎಂ ಬಳಸಿಲ್ಲ. ಇವಿಎಂ ಬಳಸದ ರಾಷ್ಟ್ರಗಳಲ್ಲಿ ಈಗಲೂ ಮತಪತ್ರಗಳ ಮೂಲಕ ಚುನಾವಣೆಗಳನ್ನು ನಡೆಸಲಾಗುತ್ತಿದೆ.

Tags: BJPCongress Against EVM: EVM is recognized in all countries of the world?Congress Partyನರೇಂದ್ರ ಮೋದಿಬಿಜೆಪಿ
Previous Post

ಭಾರತದ ನಿರುದ್ಯೋಗ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಬಲ್ಲ ಗಿಗ್ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿದೆಯೇ?

Next Post

ಮೊದಲ ಕೋವಿಡ್ ಪ್ರಕರಣಕ್ಕೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಉತ್ತರ ಕೊರಿಯಾ

Related Posts

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ
Top Story

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

by ಪ್ರತಿಧ್ವನಿ
November 21, 2025
0

ಮೈಸೂರು: ರಾಜ್ಯ ನಾಯಕತ್ವ ಬದಲಾವಣೆಯ ವಿಚಾರ ಚರ್ಚೆಯಲ್ಲಿರುವಾಗಲೇ ಕಾಂಗ್ರೆಸ್‌ನ ಒಂದಿಷ್ಟು ನಾಯಕರು ಹೈಕಮಾಂಡ್‌ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಯಾರೂ ದೆಹಲಿಗೆ...

Read moreDetails
ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್

ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್

November 21, 2025
ಸಿಎಂ ಬದಲಾವಣೆ ಚರ್ಚೆ: ಮಾಧ್ಯಮಗಳಿಗೆ ಹೆಚ್.ಸಿ ಮಹದೇವಪ್ಪ ಹೀಗಂದಿದ್ಯಾಕೆ..?

ಸಿಎಂ ಬದಲಾವಣೆ ಚರ್ಚೆ: ಮಾಧ್ಯಮಗಳಿಗೆ ಹೆಚ್.ಸಿ ಮಹದೇವಪ್ಪ ಹೀಗಂದಿದ್ಯಾಕೆ..?

November 21, 2025
ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಬಂಧನ

ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಬಂಧನ

November 21, 2025
ನವೆಂಬರ್ ಕ್ರಾಂತಿಯ ಕಾವು: ಕಾಂಗ್ರೆಸ್‌ನಲ್ಲಿ ತಂತ್ರ-ಪ್ರತಿತಂತ್ರ

ನವೆಂಬರ್ ಕ್ರಾಂತಿಯ ಕಾವು: ಕಾಂಗ್ರೆಸ್‌ನಲ್ಲಿ ತಂತ್ರ-ಪ್ರತಿತಂತ್ರ

November 21, 2025
Next Post
ಮೊದಲ ಕೋವಿಡ್ ಪ್ರಕರಣಕ್ಕೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಉತ್ತರ ಕೊರಿಯಾ

ಮೊದಲ ಕೋವಿಡ್ ಪ್ರಕರಣಕ್ಕೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಉತ್ತರ ಕೊರಿಯಾ

Please login to join discussion

Recent News

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ
Top Story

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

by ಪ್ರತಿಧ್ವನಿ
November 21, 2025
ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**
Top Story

ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**

by ಪ್ರತಿಧ್ವನಿ
November 21, 2025
ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್
Top Story

ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್

by ಪ್ರತಿಧ್ವನಿ
November 21, 2025
ಸಿಎಂ ಬದಲಾವಣೆ ಚರ್ಚೆ: ಮಾಧ್ಯಮಗಳಿಗೆ ಹೆಚ್.ಸಿ ಮಹದೇವಪ್ಪ ಹೀಗಂದಿದ್ಯಾಕೆ..?
Top Story

ಸಿಎಂ ಬದಲಾವಣೆ ಚರ್ಚೆ: ಮಾಧ್ಯಮಗಳಿಗೆ ಹೆಚ್.ಸಿ ಮಹದೇವಪ್ಪ ಹೀಗಂದಿದ್ಯಾಕೆ..?

by ಪ್ರತಿಧ್ವನಿ
November 21, 2025
ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಬಂಧನ
Top Story

ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಬಂಧನ

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ವಿಧಾನಸೌಧ ಬಳಿ ಗುಂಪು ಗಲಾಟೆ: 13 ಜನರ ಬಂಧನ

ವಿಧಾನಸೌಧ ಬಳಿ ಗುಂಪು ಗಲಾಟೆ: 13 ಜನರ ಬಂಧನ

November 21, 2025
ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada