ಮುಂಬರುವ ಲೋಕಸಭಾ ಚುನಾವಣೆಗೆ ಹೊಸ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯುತ್ತಿರುವ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಘೋಷಣೆ ಮಾಡಲಿದೆ.
ರಾಜಸ್ಥಾನ್ ಉದಯ್ ಪುರದಲ್ಲಿ ಈ ವಾರ ನಡೆಯಲಿರುವ ಮೂರು ದಿನಗಳ ಚಿಂತನ ಸಭೆಯಲ್ಲಿ ಕಾಂಗ್ರೆಸ್ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮ ಜಾರಿಗೆ ತರುವ ಬಗ್ಗೆ ಗಂಭೀರ ಚರ್ಚೆ ನಡೆಸಿ ತೀರ್ಮಾನಿಸಲಿದೆ.
ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ನೇತೃತ್ವದಲ್ಲಿ ಶುಕ್ರವಾರದಿಂದ ಚಿಂತನ ಸಭೆಯಲ್ಲಿ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದು, ಅದರಲ್ಲೂ ಚುನಾವಣೆಯಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡುವ ನಿಯಮ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸಲಿದೆ.
ಭಾನುವಾರ ಮುಕ್ತಾಯಗೊಳ್ಳಲಿರುವ ಈ ಸಭೆಯಲ್ಲಿ ಒಂದು ವೇಳೆ ಈ ನಿಯಮ ಅಂಗೀಕಾರವಾದರೆ ಗಾಂಧಿ ಕುಟುಂಬಕ್ಕೆ ಮೊದಲು ಈ ನಿಯಮ ಅನ್ವಯವಾಗಲಿದೆ. ಆಗ ಇಬ್ಬರು ತೆರೆಮರೆಗೆ ಸರಿಯಬೇಕಾಗುತ್ತದೆ.