ಮುಂಬೈ ಇಂಡಿಯನ್ಸ್ ವಿರುದ್ಧದ ಸೋಮವಾರ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು ತಂಡದಲ್ಲಿ 5 ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದೆ.
ಸತತ ಸೋಲುಗಳಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ನಾಯಕ ಶ್ರೇಯಸ್ ಅಯ್ಯರ್ 5 ಬದಲಾವಣೆ ಮಾಡಿದ್ದು, ವೆಂಕಟೇಶ್ ಅಯ್ಯರ್, ಪ್ಯಾಟ್ ಕಮಿನ್ಸ್, ಅಜಿಂಕ್ಯ ರಹಾನೆ, ವರುಣ್ ಚಕ್ರವರ್ತಿ, ಶೆಲ್ಡಾನ್ ಜಾಕ್ಸನ್ ಸ್ಥಾನ ಪಡೆದಿದ್ದಾರೆ.
ಕಳಪೆ ಪ್ರದರ್ಶನ ನೀಡುತ್ತಿರುವ ಏರಾನ್ ಫಿಂಚ್, ಶಿವಂ ಮವಿ, ಹರ್ಷಿತ್ ರಾಣಾ, ಅನುಕೂಲ್ ರಾಯ್ ಮತ್ತು ಬಾಬಾ ಇಂದ್ರಜೀತ್ ಸ್ಥಾನ ಕಳೆದುಕೊಂಡಿದ್ದಾರೆ. ಈ ಮೂಲಕ ಪ್ರಸ್ತುತ ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ ಆಟಗಾರರನ್ನು ಬದಲಾವಣೆ ಮಾಡಿದ ತಂಡ ಎಂಬ ಹೆಸರು ಪಡೆದಿದೆ. ಕೆಕೆಆರ್ ಟೂರ್ನಿಯಲ್ಲಿ ಆಡಿದ ೧೧ ಪಂದ್ಯಗಳಲ್ಲಿ ೪ರಲ್ಲಿ ಮಾತ್ರ ಗೆಲುವು ಕಂಡಿದ್ದು, ಪ್ಲೇಆಫ್ ತಲುಪಬೇಕಾದರೆ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ.