ಲ್ಲಾಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಿಎಂ ಬೊಮ್ಮಾಯಿ, ಕೆಲಸಮಾಡದಿದ್ದರೆ ನಿಮಗೆ ಊಟವಾದರೂ ಯಾಕೆ ಬೇಕು ? ಎಂದು ಪ್ರ ಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವ ದಲ್ಲಿ ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತ್ ಸಿಇಒಗಳ ಸಭೆ ನಡೆದಿದ್ದು , ಸಭೆಯ ಆರಂಭದಲ್ಲಿಯೇ ಅಧಿಕಾರಿಗಳಿಗೆ ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆ ಗಳಲ್ಲಿ ಕೆಲ ಸಮಸ್ಯೆ ಗಳು ಆಗಿರುವುದು ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸುವ ಕೆಲಸ ನಿಮ್ಮಿಂದ ಸರಿಯಾಗಿ ಆಗುತ್ತಿಲ್ಲ , ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿಲ್ಲ . ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಸರ್ಕಾರಿ ಕೆಲಸ ಅನ್ನೋದನ್ನು ಬಿಟ್ಟು ಜನರ ಕಷ್ಟ ಸುಖಗಳನ್ನು ಸರಿಯಾಗಿ ಕೇಳಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

ಜನರ ಸಮಸ್ಯೆ ವಿಷಯದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ
ದೀನ ದಲಿತರ, ರೈತರ ಸಮಸ್ಯೆ ಬಗೆಹರಿಸಲು ವಿಳಂಬ ಬೇಡ. ಜಿಲ್ಲಾವಾರು ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು. ಆಡಳಿತ ಬಿಗಿ ಮಾಡಿ. ಕಳಂಕರಹಿತ ಕೆಲಸ ಮಾಡಿ. ಜನರ ತೊಂದರೆ ದೂರ ಮಾಡುವುದು ನಿಮ್ಮ ಕೆಲಸ. ಕೆಲಸಮಾಡಿಲ್ಲ ಅಂದ್ರೆ ನಿಮಗೆ ಊಟಯಾಕ್ ಬೇಕು? ಎಂದು ಡಿಸಿಗಳಿಗೆ ಸಿಎಂ ಎಚ್ಚ ರಿಕೆ ನೀಡಿದ್ದಾರೆ.






