ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ದೊರೆಯುವಂತೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ರನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವೀರಪ್ಪನ್ ಹೋಲಿಸಿದ್ದಾರೆ.
ಪ್ರಶಾಂತ್ ನೀಲ್ ಅವರನ್ನು ವೀರಪ್ಪನ್ ಹೋಲಿಸಿದ್ದೇಕೆ ಎಂದು ಅನ್ಕೊತಿದಿರ? ಹೌದು, ಪ್ರಶಾಂತ್ ನೀಲ್ ಅವರನ್ನು ವೀರಪ್ಪನ್ ಅಂದಿದ್ದು ನಿಜ ಆದರೆ ಮೇ 4 ವಿಶ್ವ ನಿರ್ದೇಶಕರ ದಿನದಂದು ಶುಭ ಕೋರಿರುವ ವರ್ಮಾ ನಿವು ಭಾರತೀಯ ಚಿತ್ರರಂಗದ ವೀರಪ್ಪನ್ ಎಂದು ವಿಶ್ಲೇಷಿಸಿದ್ದಾರೆ. ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯ ನಿರ್ದೇಶಕರುಗಳ ತಲೆ ಕೆಡಿಸಿದ್ದಕ್ಕೆ ನಾನು ನಿಮ್ಮಗೆ ನಿರ್ದೇಶಕರ ದಿನಾಚರಣೆಯ ಶುಭಾಶಯ ಕೋರುತ್ತಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ರಾಮ್ ಗೋಪಾಲ್ ವರ್ಮಾ ಟ್ವೀಟ್ಗೆ ಪ್ರಶಾಂತ್ ನೀಲ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಮುಂದಿನ ದಿನಗಳಲ್ಲಿ ಅವರ ರಿಯಾಕ್ಷನ್ ಹೇಗಿರುತ್ತದೆ ಎಂಬುದನ್ನ ಕಾದು ನೋಡಬೇಕಿದೆ












