PSI ನೇಮಕಾತಿ ಹಗರಣ ಪ್ರಕರಣ ದಿನದಿಂದ ದಿನಕ್ಕೆ ತನ್ನ ವ್ಯಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. 545 ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ನಡೆಸುತ್ತಿದ್ದರೂ ಇದರಿಂದ ಯಾವುದೇ ಪ್ರಯೋಜನ ಇಲ್ಲ, ಹೈಕೋರ್ಟ್ CJ ಅಡಿಯಲ್ಲಿ SIT ರಚಿಸಿ ತನಿಖೆ ನಡೆಸಬೇಕು ಇದಕ್ಕೆ ಧೈರ್ಯ ತೋರುವರೇ ಸಿಎಂ? ಎಂದು ಕಾಂಗ್ರೆಸ್ ಸಿಎಂ ಬೊಮ್ಮಾಯಿಗೆ ಸವಾಲ್ ಎಸೆದಿದ್ದಾರೆ.
ಹೌದು, ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬೊಮ್ಮಾಯಿ ಸರಕಾರದ ದಿನಕ್ಕೊಂದು ಹಗರಣ ಯುವಜನರ ಭವಿಷ್ಯವನ್ನ ಹಾಳುಗೆಡವಿದೆ. ಕಿರಿಯ ಅಧಿಕಾರಿಗಳನ್ನ ಬಂಧಿಸುವುದರಿಂದ #PSIJobsScam ಮುಚ್ಚಿಹಾಕಲಾಗುವುದಿಲ್ಲ. ಮುಂದಿನ ದಾರಿ ಸ್ಪಷ್ಟ. ಅಶ್ವತ್ಥನಾರಾಯಣ & ಗೃಹಸಚಿವರನ್ನು ವಜಾಗೊಳಿಸಿ, ಹೈಕೋರ್ಟ್ CJ ಅಡಿಯಲ್ಲಿ SIT ರಚಿಸಿ, ಉದ್ಯೋಗ ಮಾಫಿಯಾವನ್ನ ಅನಾವರಣಗೊಳಿಸಿ ಇದಕ್ಕೆ ಧೈರ್ಯ ತೋರುವರೇ ಸಿಎಂ?ಎಂದು ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ, ಅಧಿಕಾರಕ್ಕಾಗಿ ಏನು ಬೇಕಿದ್ದರೂ ಮಾಡಲು ಸಿದ್ದ…ಇದು ಸಿಎಂ ಬೊಮ್ಮಾಯಿ ಅವರ ‘ಮಂತ್ರ’. ಇದೇ ಅವರ ನಿಜವಾದ ಮುಖ!. “ಸರ್ವ ಜನಾಂಗದ ಶಾಂತಿಯ ತೋಟ”ವನ್ನು ಕೋಮು ಉನ್ಮಾದದ ಪ್ರಪಾತಕ್ಕೆ ತಳ್ಳಲು ಅವರು ಕಣ್ಣು ರೆಪ್ಪೆ ಮುಚ್ಚಲಿಲ್ಲ ಎಂಬುದಕ್ಕೆ ಪುರಾವೆ ಇದೆ. ಜನರು ಅವರನ್ನು ಮತ್ತು ಬಿಜೆಪಿಯನ್ನು ಸೋಲಿಸುವುದು ನಿಶ್ಚಿತ ಎಂದಿದೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿಯ ಫಿಂಗರ್ ಪ್ರಿಂಟ್ ವಿಭಾಗದ ಇನ್ಸ್ಪೆಕ್ಟರ್ ಆನಂದ ಮೇತ್ರಿ ಬಂಧನವಾಗಿದೆ.