ಕಲ್ಲಿದ್ದಲಿನ ಕೊರತೆಯಿಂದಾಗಿ ದೇಶದ ವಿವಿದ ಭಾಗಗಳು ನಾನಾ ರೀತಿಯ ಸಮಸ್ಯೆಗಳನ್ನು ಎದರಿಸುತ್ತಿದೆ. ಇದರಿಂದ ಯುಪಿ ರಾಜ್ಯಾಂದ್ಯಂತ ವ್ಯಾಪಕ ವಿದ್ಯುತ್ ಕಡಿತ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿತ್ತಿದೆ. ಇದರ ಮಧ್ಯೆ ಉತ್ತರ ಪ್ರದೇಶದ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಅವರು ಶನಿವಾರ ಕಲ್ಲಿದ್ದಲು ಕೊರತೆ ಜಾಗತಿಕ ಬಿಕ್ಕಟ್ಟು ಎಂದು ಹೇಳಿದ್ದಾರೆ.
ಭಾರತದಲ್ಲಿ ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆಯಿದೆ ಎಂಬ ವರದಿಗಳ ಬಗ್ಗೆ ಕೇಳಿದಾಗ, “COVID19 ನಿಂದಾಗಿ ಜಗತ್ತು ಕಲ್ಲಿದ್ದಲು ಬಿಕ್ಕಟ್ಟನ್ನು ಎದುರಿಸುತ್ತಿದೆ, ಆದರೆ, ಜಿಲ್ಲಾ ಕೇಂದ್ರಗಳಲ್ಲಿ 24 ಗಂಟೆ ವಿದ್ಯುತ್ ಸರಬರಾಜು ಮಾಡಲು ಸಿಎಂ ಸೂಚಿಸಿದರು. ಹಳ್ಳಿಗಳಲ್ಲಿ, 15 ಗಂಟೆಗಳು ವಿದ್ಯುತ್ ಪೂರೈಕೆ ಮಾಡಲಾಗುವುದು’ ಎಂದರು.
ಏತನ್ಮಧ್ಯೆ, ಯುಪಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಚಿವರು ಹೇಳಿದ ಹೇಳಿಕೆಗಳಿಗಿಂತ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ನಿನ್ನೆ, ವಿದ್ಯುತ್ ಬಿಕ್ಕಟ್ಟಿನ ಮಧ್ಯೆ ಕಲ್ಲಿದ್ದಲು ಸರಬರಾಜಿಗೆ ಅನುಕೂಲವಾಗುವಂತೆ ರೈಲ್ವೇ ಇಲಾಖೆ ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಪ್ರಯಾಗ್‌ರಾಜ್‌ನಲ್ಲಿ ಪ್ರಯಾಣಿಕರು ತೊಂದರೆ ಎದುರಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಯಾಣಿಕರೊಬ್ಬರು, “ನಿಲ್ದಾಣಕ್ಕೆ ತಲುಪಿದ ನಂತರ, ರೈಲು ರದ್ದಾದ ಬಗ್ಗೆ ನಮಗೆ ತಿಳಿಯಿತು, ನಾನು ದೆಹಲಿಗೆ ಹೋಗಬೇಕಾಗಿದೆ ಆದರೆ ಇಲ್ಲಿಯವರೆಗೆ ಯಾವುದೇ ರೈಲು ಲಭ್ಯವಿಲ್ಲ” ಎಂದು ಹೇಳಿದರು.
ಉತ್ತರ ಪ್ರದೇಶದ ಕಾನ್ಪುರದ ಗೋಧಿ ಉದ್ಯಮಿಯೊಬ್ಬರು ನಗರದಲ್ಲಿ ವಿದ್ಯುತ್ ಕಡಿತದ ಬಗ್ಗೆ ದೂರಿದ್ದು, ಇದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಅಕಾಲಿಕ ಹಾಗೂ ಪದೇ ಪದೇ ವಿದ್ಯುತ್ ಕಡಿತವಾಗುತ್ತಿದ್ದು, ಸಣ್ಣ ಅಂಗಡಿಕಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಮತ್ತೊಬ್ಬ ಸಣ್ಣ ಅಂಗಡಿಯ ಮಾಲೀಕರು ಹೇಳಿದರು.
ವಿದ್ಯುತ್ ಕಡಿತದಿಂದ ನೀರಿನ ಸಮಸ್ಯೆ ಉಂಟಾಗಿದೆ-
ವಿದ್ಯುತ್ ಕಡಿತದಿಂದ ನೀರಿನ ಸಮಸ್ಯೆ ಎದುರಾಗಿದೆ, ಮಕ್ಕಳಿಗೆ ತೊಂದರೆಯಾಗಿದೆ, ಬೇಸಿಗೆ ಉತ್ತುಂಗದಲ್ಲಿದೆ, ಆದರೆ ಆಗಾಗ್ಗೆ ವಿದ್ಯುತ್ ಕಡಿತವಾಗುತ್ತಿದೆ ತುಂಬಾ ಸಮಸ್ಯೆಗಳಾಗುತ್ತೆ. ಈವರೆಗೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಅಲ್ಲಿಯ ನಿವಾಸಿಗರು ಎಎನ್ ಐಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಕೆಲಸಕ್ಕೆ ತೆರಳುವ ವ್ಯಕ್ತಿವೊಬ್ಬರು ತಾವು ಕಷ್ಟಪಟ್ಟು ಕಛೆರಿಯಲ್ಲಿ ಕೆಲಸ ಮುಗಿಸಿ ಆಯಾಸವನ್ನು ನಿವಾರಿಸಲು ರಾತ್ರೆ ನಿದ್ರೆ ಮಾಡಲು ಸಾದ್ಯವಾಗುತ್ತಿಲ್ಲ ಅಷ್ಟರ ಮಟ್ಟಕ್ಕೆ ಬೇಸಿಗೆ ಇದೆ ಇದರ ಮಧ್ಯ ಕರೆಂಟ್ ತೆಗೆದರೆ ಹೇಗೆ ಶಾಂತಿಯಿಂದ ನಿದ್ರಿಸುವುದು? ”ಸಾಕಷ್ಟು ಸಮಸ್ಯೆಗಳಿವೆ, ನೀರು ತುಂಬಿಸಲು ಬಂದರೆ ಕರೆಂಟ್ ಇರಲ್ಲ, ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.








