ದೂರು ನೀಡಲು ಠಾಣೆಗೆ ಹೋದ ಮಹಿಳೆಯರಿಂದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅರೆನಗ್ನಾವತಾರದಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಅಧಿಕಾರಿ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ ಮತ್ತು ಸೇವೆಯಿಂದ ಅಮಾನತು ಮಾಡಲಾಗಿದೆ.
ನೌಹಟ್ಟ ಪೊಲೀಸ್ ಠಾಣಾಧಿಕಾರಿ ಶಶಿಭೂಷಣ್ ಸಿನ್ಹಾ ಅಮಾನತಾದ ಅಧಿಕಾರಿ. ಠಾಣೆಯಲ್ಲಿ ಮಹಿಳೆಯ ಕೈಯಿಂದ ಮಸಾಜ್ ಮಾಡಿಸಿಕೊಳ್ಳುವ ಸಮಯದಲ್ಲಿ ಪೊಲೀಸ್ ಅಧಿಕಾರಿ ಫೋನಿನಲ್ಲಿ ಮಾತನಾಡುತ್ತ ಮಹಿಳೆಯ ಪ್ರಕರಣದ ಬಗ್ಗೆಯು ತಿಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.