ಕಳೆದೆರಡು ವರುಷ ಕೊರೊನಾದಿಂದ ಶಾಲೆಗಳು ಸರಿಯಾಗಿ ನಡೆದಿಲ್ಲ. ಈ ವರ್ಷವಾದರೂ ಸಮರ್ಪಕವಾಗಿ ಶಾಲೆ ನಡೆಯಲೆಂದು ಶಿಕ್ಷಣ ಇಲಾಖೆ ಹದಿನೈದು ದಿನ ಮುಂಚಿತವಾಗಿಯೇ ಶಾಲೆ ಆರಂಭಿಸಲಿದೆ. ಆದರೆ ಶಾಲೆ ಆರಂಭಕ್ಕೂ ಮೊದಲೇ ಕೊರೊನಾ 4ನೇ ಅಲೆಯ ಆತಂಕ ಎದುರಾಗಿದೆ. ಈಗಲೇ ಶಾಲೆ ತೆರೆಯಬೇಡಿ ಎಂದು ಪೋಷಕರು ವಿರೋಧಿಸುತ್ತಿದ್ದಾರೆ.
ಶಿಕ್ಷಣ ಇಲಾಖೆ ಈ ವರುಷವಾದರೂ ಶೈಕ್ಷಣಿಕ ಚಟುವಟಿಕ ಸಮರ್ಪಕವಾಗಿ ಆಗಲಿ ಎಂದು ಶಾಲೆಗಳ ಆರಂಭಕ್ಕೆ ಮುಹೂರ್ತ ನಿಗದಿ ಮಾಡಿದೆ. ಮೇ 16ರಿಂದ ಶಾಲೆ ರೀ ಓಪನ್ ಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮೇ 16 ರಿಂದ ಜೂನ್ 15ರವರೆಗೆ ಸೇತುಬಂಧ ಕಾರ್ಯಕ್ರಮ, ಮಕ್ಕಳ ದಾಖಲಾತಿಯನ್ನು ಮೇ 16ರಿಂದ ಆರಂಭಿಸಲು ಸೂಚನೆ ನೀಡಲಾಗಿದೆ. ಜುಲೈ 31ರೊಳಗೆ ಪ್ರವೇಶಾತಿಗೆ ಶಿಕ್ಷಣ ಇಲಾಖೆ ಡೆಡ್ ಲೈನ್ ನೀಡಿದೆ. ಶಾಲೆ ಆರಂಭದ ದಿನಾಂಕ ಬದಲಿಸಲ್ಲ ಎಂದಿರುವ ಶಿಕ್ಷಣ ಸಚಿವರು ಪುನರುಚ್ಚರಿಸಿದ್ದಾರೆ. ನಿಗದಿಯಂತೆ ಮೇ 16ರಿಂದಲೇ ಶಾಲೆ ಆರಂಭಕ್ಕೆ ತೀರ್ಮಾನ ಮಾಡಲಿದ್ದು, ಆದರೆ ಪೋಷಕರಿಂದ ಶಾಲೆಗಳ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ 4 ಅಲೆ ಜೂನ್, ಜುಲೈನಲ್ಲಿ ಕೊರೊನಾ 4ನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ. 15 ದಿನ ಅಥವಾ 1 ತಿಂಗಳು ಕಾದು ನೋಡಿ, ಬಳಿಕ ಶಾಲೆ ಓಪನ್ ಮಾಡಿ. ಮೊದಲು ಶಾಲೆಯ ಆರಂಭದ ದಿನಾಂಕ ಬದಲಿಸಿ. ಕೋವಿಡ್ ಸ್ಥಿತಿಗತಿ ನೋಡಿ ಶಾಲೆ ಆರಂಭಿಸಿ. ಶುಲ್ಕ, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್ ಡೌನ್ ಮಾಡುತ್ತಾರೆ. ಲಾಕ್ ಡೌನ್ ಆಯ್ತು ಅಂತ ಆನ್ ಲೈನ್ ಕ್ಲಾಸ್ ಮಾಡ್ತಾರೆ. ಇದೆಲ್ಲ ದೊಡ್ಡ ಹುನ್ನಾರ. ಶಾಲೆ ಆರಂಭವಾದರೂ ನಾವು ಶಾಲೆಗೆ ಮಕ್ಕಳನ್ನ ಕಳಿಸೊಲ್ಲ. ಶಿಕ್ಷಣ ಇಲಾಖೆಯ ಶಾಲೆ ಆರಂಭ ನಡೆಗೆ ಪೋಷಕರು ಗರಂ ಆಗಿದ್ದಾರೆ. ಆದರೆ ಸರ್ಕಾರಿ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಶಾಲೆ ಆರಂಭಿಸಲು ವಿರೋಧಿಸಬೇಡಿ, ನಿಮಗ್ಯಾವ ತೊಂದರೆಯಾಗುವುದಿಲ್ಲ ಎಂದು ರುಪ್ಸಾ ಖಾಸಗಿ ಶಾಲಾ ಸಂಘ ಮನವಿ ಮಾಡಿಕೊಳ್ಳುತ್ತಾರೆ. ಕಳೆದ 3 ವರ್ಷಗಳಲ್ಲಿ ಕೇವಲ 50ರಿಂದ 60% ಮಾತ್ರ ಭೌತಿಕ ಕಲಿಕೆ ಚಟುವಟಿಕೆಗಳನ್ನ ಅವಲೋಕಿಸಿ ಶಿಕ್ಷಣ ಇಲಾಖೆ ಈ ವರ್ಷ ಶೈಕ್ಷಣಿಕ ವರ್ಷ ಬೇಗನೇ ಆರಂಭಕ್ಕೆ ನಿರ್ಧಾರ ಮಾಡಿದೆ. ಇಂಥ ಹೊತ್ತಲ್ಲಿ ಕೊರೊನಾ ನಾಲ್ಕನೆಯ ಅಲೆಯಿಂದಾಗಿ ಖಾಸಗಿ ಶಾಲೆಗಳು ಫೀಸು ಪೀಕಿ ಶಾಲೆಯೂ ನಡೆಯದೇ ಹೋದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗದಂತಾಗಿದೆ.