ಹಿಂದಿ ಭಾಷೆ ಹೇರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಹೇಳಿದ್ದು ಸರಿಯಿದೆ. ಭಾಷಾವಾರು, ಪ್ರಾಂತವಾರು ಆದ ಮೇಲೆ ಎಲ್ಲವೂ ಮಾತೃಭಾಷೆ ಆಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸುದೀಪ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಹ ಬೆಂಬಲ ವ್ಯಕ್ತಪಡಿಸಿದರು.
ಇದೇ ವೇಳೆ ಕೋವಿಡ್ 4 ನೆಯ ಅಲೆ ವಿಚಾರವಾಗಿ ಪ್ರತಿಕ್ರಿಯಿಸಿ ಟೆಸ್ಟ್ ಗಳನ್ನು ಮತ್ತೆ ಜಾಸ್ತಿ ಮಾಡುತ್ತೇವೆ. 8500 ಜಿನೋಮ್ ಟೆಸ್ಟ್ ಗಳನ್ನ ಈಗಾಗಲೇ ಮಾಡಿದ್ದೇವೆ. ಐ ಎಲ್ ಐ ಟೆಸ್ಟ್ ಮಾಡಿದ್ರೆ ಟ್ರೀಟ್ಮೆಂಟ್ ಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಈಗಾಗಲೇ ಮಾಡಿದ್ದೇವೆ. ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಅದನ್ನ ತೆಗೆದುಕೊಂಡಿದ್ದೇವೆ. ಈಗ 4ನೆಯ ಅಲೆ ಇನ್ನು ಬಂದಿಲ್ಲ, ಆದ್ರೆ ಮುನ್ನೆಚ್ಚರಿಕೆಯನ್ನು ನಾವು ತೆಗೆದುಕೊಂಡಿದ್ದೇವೆ 6 ವರ್ಷದಿಂದ 12ವರ್ಷದ ವರೆಗೆ ಲಸಿಕೆ ಕೊಡೋ ನಿರ್ಧಾರ ಆಗಿದೆ ಎಂದು ಹೇಳಿದ್ದಾರೆ.
ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇದು 2017ರಲ್ಲಿ ನಡೆದ ಪ್ರಕರಣ. ಅದರ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತೇನೆ. ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.










