545 ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಎನ್ನಲಾದ ರುದ್ರಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಕಲಬುಗರಿಯ ಜ್ಞಾನಜ್ಯೋತಿ ಶಾಲೆಯ ಕೇಂದ್ರದಲ್ಲಿ ನಡೆದ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ರುದ್ರಗೌಡನನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಂಧಿಸಿದ್ದಾರೆ.
ಪಿಎಸ್ ಐ ಅಭ್ಯರ್ಥಿಗಳಿಂದ 70 ಲಕ್ಷದಿಂದ 1.50 ಕೋಟಿ ರೂ.ವರೆಗೆ ಹಣ ಪಡೆದ ಪಾಸ್ ಮಾಡಲು ನೆರವಾಗುತ್ತಿದ್ದ ಆರೋಪದಲ್ಲಿ ಬಂಧಿತರ ಸಂಖ್ಯೆ 10ಕ್ಕೇರಿದೆ. ಇತ್ತೀಚೆಗೆ ಗನ್ ಮ್ಯಾನ್ ಮಹಾಂತೇಶ್ ಪಾಟೀಲ್ ನನ್ನು ಬಂಧಿಸಿದ ಬೆನ್ನಲ್ಲೇ ಇದೀಗ ರುದ್ರಗೌಡನನ್ನು ಬಂಧಿಸಲಾಗಿದೆ.
ರುದ್ರಗೌಡ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ರುದ್ರಗೌಡ ಡಿವೈಸ್ ಗಳನ್ನು ಪೂರೈಸುತ್ತಿದ್ದ ಎನ್ನಲಾಗಿದೆ. ಮಹಾಂತೇಶ್ ಪಾಟೀಲ್ ಸೋದರನಾಗಿದ್ದ ರುದ್ರಗೌಡ, ಪೊಲೀಸರಿಗೆ ಕರೆ ಮಾಡಿ ನನ್ನ ಸೋದರನನ್ನು ಯಾಕೆ ಬಂಧಿಸಿದ್ದೀರಿ ಎಂದು ಧಮ್ಕಿ ಹಾಕಿದ್ದ.
ಧಮ್ಕಿ ಹಾಕಿದ್ದರಿಂದ ಆತನ ಮೊಬೈಲ್ ಫೋನ್ ಟವರ್ ಲೊಕೇಷನ್ ಮೇಲೆ ಶನಿವಾರ ಮಧ್ಯಾಹ್ನ ಸೊಲ್ಲಾಪುರ ಗ್ರಾಮವೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ.