ಸಿಲಿಕಾನ್ ಸಿಟಿ ಎಷ್ಟು ಸೇಫ್ ಅನ್ನೋದರ ಬಗ್ಗೆ ಈಗಾಗಲೇ ಹಲವು ಚರ್ಚೆಗಳು ಬಂದಿದೆ. ಅದೇ ರೀತಿ ಮಹಿಳಾ ಸುರಕ್ಷಿತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಇದೀಗ ಬಿ ಪ್ಯಾಕ್ನಿಂದ ಪೈಲೆಟ್ ಪ್ರಾಜೆಕ್ಟ್ ರೀತಿ ಸರ್ವೆಯನ್ನು ನಡೆಸಲಾಗಿದೆ. ಇದರಿಂದ ಬೆಂಗಳೂರಿನಲ್ಲಿ ಎಷ್ಟರ ಮಟ್ಟಿಗೆ ರಕ್ಷಣೆ ಇದೆ ಎನ್ನುವ ವರದಿಯನ್ನ ನೀಡಿದೆ.
ಸದ್ಯಕ್ಕೆ ಬೆಂಗಳೂರಿನಲ್ಲಿ ಭದ್ರತೆ, ಮೂಲಭೂತ ಸೌಕರ್ಯಗಳು ನಿಜಕ್ಕೂ ಇದಿಯಾ ಎನ್ನುವ ಪ್ರಶ್ನೆ ಎದುರಾಗಿದೆ. ಹೀಗಾಗಿ ಜನರಿಗೆ ಏನು ಅವಶ್ಯಕತೆ ಇದೆ ಅಥವಾ ಇಲ್ಲ ಅನ್ನೋದರ ಕುರಿತು ಹೊಸ ಸರ್ವೆಯೊಂದನ್ನ ನಡೆಸಿದೆ. ಮೊದಲ ಹಂತದಲ್ಲಿ ಮಲ್ಲೇಶ್ವರ ಹಾಗು ಮಹದೇವಪುರವನ್ನು ಆರಿಸಿ ಇಲ್ಲಿ ಸರ್ವೆ ನಡೆಸಲಾಗಿದೆ. ಇದರಲ್ಲಿ ಮಹಿಳೆಯರ ಸುರಕ್ಷತೆ ಹೇಗಿದೆ, ಮೂಲಭೂತ ಸೌಕರ್ಯ ಹೇಗಿದೆ ಅನ್ನೋದರ ಕುರಿತು ಪ್ರತಿ ವಾರ್ಡ್ಗೆ ಹೋಗಿ ನೋಡೋದರ ಜೊತೆಗೆ ಜನರ ಅಭಿಪ್ರಾಯವನ್ನು ಪಡೆಯಲಾಗಿದೆ. ಈ ಸರ್ವೇ ಪ್ರಕಾರ ಇನ್ನೂ ಮೂಲಭೂತ ಸೌಕರ್ಯಗಳು ಈ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬೇಕಿದೆ ಅನ್ನೋದು ಕಂಡು ಬಂದಿದೆ. ಅದರಲ್ಲಿ ಪ್ರಮುಖವಾದ ಅಂಶಗಳು ಏನು ಅಂತ ನೋಡೋದಾದ್ರೆ.
ಮಲ್ಲೇಶ್ವರ 7 ವಾರ್ಡ್ಗಳಲ್ಲಿನ ಸಮಸ್ಯೆ !
- ಮೆಟ್ರೋ ಸ್ಟೇಷನ್ ಬಳಿ ಆಟೋ ಸೇವೆ ಇಲ್ಲ
- ಬೀದಿ ದೀಪಗಳ ನಿರ್ವಹಣೆ ಇಲ್ಲ
- ಮಹಿಳೆಯರಿಗೆ ಸುರಕ್ಷತೆ ಕ್ರಮ ಬೇಕಾಗಿದೆ
- ಬಸ್ ಸ್ಟಾಪ್ಗಳ ಬಳಿ ಸುರಕ್ಷತೆ ಬೇಕು
- ಅಂಗನವಾಡಿಗಳಲ್ಲಿ ಶೌಚಾಲಯದ ವ್ಯವಸ್ಥೆ
- ಪಾರ್ಕ್ಗಳಲ್ಲಿ ಸಿಸಿಟಿವಿ, ಸೆಕ್ಯೂರಿಟಿ ಗಾರ್ಡ್ ಬೇಕು
- ಪಬ್ಲಿಕ್ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ಬೇಕು
ಮಹದೇವಪುರದ 8 ವಾರ್ಡ್ಗಳ ಸಮಸ್ಯೆ !
- ಅಂಗನವಾಡಿಗಳ ಸ್ವಚ್ಛತೆ
- ಬಸ್ ನಿಲ್ದಾಣದಲ್ಲಿ ಫುಟ್ಪಾತ್ ಹಾಗೂ ಸೆಕ್ಯೂರಿಟಿ ಬೇಕು
- ಪ್ರೈಮರಿ ಹೆಲ್ತ್ ಕೇರ್ ಸೆಂಟರ್ಗಳಲ್ಲಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ
- ಮಾರ್ಕೆಟ್ಗಳಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಬೇಕು
- ಪಾರ್ಕ್ಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ
ಮೊದಲ ಹಂತದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವೇ ನಡೆಸಿದ್ದು, ಮುಂದಿನ ದಿನದಲ್ಲಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಈ ಸರ್ವೇ ನಡೆಸಲು ಬಿ ಪ್ಯಾಕ್ ಮುಂದಾಗಿದ್ದು, ನಗರದಲ್ಲಿ ಇನ್ನು ಏನೆಲ್ಲಾ ಸಮಸ್ಯೆ ಇದೆ ಅನ್ನೋದು ತಿಳಿಯಲಿದೆ. ಮುಂದಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಸರ್ವೇ ಬೆಳಕು ಚೆಲ್ಲಲಿದೆ.