ಕಂಪನಿ ಯಶಸ್ಸಿಗೆ ಶ್ರಮಿಸಿದ್ದಕ್ಕಾಗಿ ಚೆನ್ನೈ ಮೂಲದ ಕಂಪನಿಯೊಂದು 100ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕಾರು ಉಡುಗೊರೆ ನೀಡಿದೆ.
ಐಟಿ ಕಂಪನಿ Ideas2IT ತನ್ನ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರನ್ನು ಉಡುಗೊರೆಯಾಗಿ ನೀಡಿದೆ.
ನಮ್ಮ ಕಂಪನಿಯಲ್ಲಿ 500ಕ್ಕೂ ಹೆಚ್ಚು ಉದ್ಯೋಗಿಗಳಿದ್ಧಾರೆ. ಅದರಲ್ಲಿ 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ 100 ಉದ್ಯೋಗಿಗಳನ್ನು ಗುರುತಿಸಿ 100 ಕಾರುಗಳನ್ನು ಉಡುಗೊರೆಗಳನ್ನು ನೀಡಲಾಗಿದೆ ಎಂದು ಕಂಪನಿಯ ಮಾರುಕಟ್ಟೆ ಮುಖ್ಯಸ್ಥ ಹರಿ ಸುಬ್ರಹ್ಮಣ್ಯನ್ ತಿಳಿಸಿದ್ದಾರೆ.
ಕಂಪನಿಯ ಸಂಸ್ಥಾಪಕ ನಿರ್ದೇಶಕರಾದ ಮುರಳಿ ವಿವೇಕಾನಂದ ಕಾರು ಉಡುಗೊರೆ ನೀಡುವ ನಿರ್ಧಾರ ಕೈಗೊಂಡಿದ್ದು, ಕಂಪನಿ ಅಭಿವೃದ್ಧಿಗೆ ಈ ಉದ್ಯೋಗಿಗಳು ಅಪಾರ ಶ್ರಮ ಹಾಕಿದ್ದಾರೆ ಹೇಳಿದರು.