ಜಗತ್ತಿನಲ್ಲಿ ಪ್ರತಿನಿತ್ಯ 15 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು, ಒಮಿಕ್ರಾನ್ ರೂಪಾಂತರಿ ಎಕ್ಸ್ ವಿ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಹೊಸ ಕೊರೊನಾ ರೂಪಾಂತರಿ ತಳಿ ಪತ್ತೆಯಾಗುತ್ತಿದೆ. ಯುರೋಪ್ ನಲ್ಲಿ ಎಲ್ಲೆಡೆ ಹೊಸ ವೈರಸ್ ಹಬ್ಬಿದ್ದು, ಇದೀಗ ಏಷ್ಯಾದಲ್ಲಿ ಅಬ್ಬರ ಮುಂದುವರಿಸುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಜನರಲ್ ಸೆಕ್ರೆಟರಿ ಅಂಟಿನೊ ಗುಟ್ಟೆರಸ್ ತಿಳಿಸಿದ್ದಾರೆ.