ವಿವಿಧ ರಾಜ್ಯಗಳ ಜನರು ಇಂಗ್ಲೀಷ್ ಬದಲು ಹಿಂದಿಯನ್ನು ಬಳಸಬೇಕು ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿ ಸರಕಾರ ಯಾವ ಭಾಷೆಯಲ್ಲಿ ಆಡಳಿತ ಮಾಡುತ್ತಿದೆಯೋ ಅದೇ ಅಧಿಕೃತ ಭಾಷೆ ಆಗಿದೆ. ಇದರಿಂದ ಸಹಜವಾಗಿ ಹಿಂದಿ ಭಾಷೆಯ ಪ್ರಾಮುಖ್ಯತೆ ಹೆಚ್ಚಾಗಿದೆ. ದೇಶವನ್ನು ಒಂದುಗೂಡಿಸಲು ಒಂದು ಅಧಿಕೃತ ಭಾಷೆ ಜಾರಿಗೆ ತರಲು ಇದು ಸೂಕ್ತ ಸಮಯ ಎಂದು ಹೇಳಿದರು.
ಬೇರೆ ರಾಜ್ಯಗಳಲ್ಲಿ ಪರಸ್ಪರ ಸಂಪರ್ಕಕ್ಕೆ ಬಳಸುತ್ತಿರುವ ಇಂಗ್ಲೀಷ್ ಭಾಷೆಯ ಬದಲು ಇನ್ನು ಮುಂದೆ ಹಿಂದಿಯನ್ನು ಬಳಸಬೇಕು. ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನು ಘೋಷಿಸುವ ಬಗ್ಗೆ ಈಗಾಗಲೇ ೩೭ ಸಭೆಗಳನ್ನು ನಡೆಸಿದೆ ಎಂದು ವಿವರಿಸಿದರು.
ಭಾಷಾ ಸಮಿತಿ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ರಾಷ್ಟ್ರೀಯ ಭಾಷೆಯನ್ನಾಗಿ ಇಂಗ್ಲೀಷ್ ಬದಲು ಹಿಂದಿ ಬಳಸಲು ಹೇರಿಕೆ ಮಾಡಲು ಬಿಡುವುದಿಲ್ಲ ಎಂದು ಹೇಳಿವೆ.