ಪಾಕಿಸ್ತಾನದ 4 ಸೇರಿದಂತೆ 22 ಯೂಟ್ಯೂಬ್ ಚಾನೆಲ್ ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ.
ರಾಷ್ಟ್ರೀಯ ಭದ್ರತೆ ಕುರಿತು ತಪ್ಪು ಮಾಹಿತಿ ನೀಡಿದ ಕಾರಣಕ್ಕಾಗಿ ಕೇಂದ್ರ ಸರಕಾರ ೨೨ ಯೂಟ್ಯೂಬ್ ಚಾನೆಲ್ ಗಳನ್ನು ನಿಷೇಧಿಸಿದೆ.
ಇದಲ್ಲದೇ 4 ಟ್ವಿಟರ್, 1 ಫೇಸ್ ಬುಕ್ ಮತ್ತು 1 ವೆಬ್ ಸೈಟ್ ಅನ್ನು ನಿಷೇಧಿಸುವುದಾಗಿ ಕೇಂದ್ರ ವರ್ತಾ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಪಾಕಿಸ್ತಾನದ ಯೂಟ್ಯೂಬ್ ಗಳನ್ನು ನಿಷೇಧಿಸಿದ್ದ ಕೇಂದ್ರ ಸರಕಾರ ಇದೇ ಮೊದಲ ಬಾರಿ ಭಾರತದ ಯೂಟ್ಯೂಬ್, ಫೇಸ್ ಬುಕ್, ವೆಬ್ ಸೈಟ್ ಮತ್ತು ಟ್ವಿಟರ್ ಖಾತೆಗಳನ್ನು ನಿಷೇಧಿಸಿದೆ.