• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜಧಾನಿಯಲ್ಲಿ ರಸ್ತೆ ಗುಂಡಿಗೆ ಸಾಲು ಸಾಲು ಸಾವು : ಒಬ್ಬರಿಗೂ ಸಿಕ್ಕಿಲ್ಲ ನಯಾಪೈಸೆ ಪರಿಹಾರ!

Any Mind by Any Mind
March 24, 2022
in ಕರ್ನಾಟಕ
0
ರಾಜಧಾನಿಯಲ್ಲಿ ರಸ್ತೆ ಗುಂಡಿಗೆ ಸಾಲು ಸಾಲು ಸಾವು : ಒಬ್ಬರಿಗೂ ಸಿಕ್ಕಿಲ್ಲ ನಯಾಪೈಸೆ ಪರಿಹಾರ!
Share on WhatsAppShare on FacebookShare on Telegram

ಬೆಂಗಳೂರು ರಸ್ತೆ ಮೇಲೆ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಆಚೆ ಹೋದವರು ಮತ್ತೆ ಜೀವಂತವಾಗಿ ಬರ್ತಾರಾ ಎನ್ನುವ ಯಾವ ನಂಬಿಕೆಯೂ ಇಲ್ಲ ಎನ್ನುವ ಸ್ಥಿತಿ ಸದ್ಯದ್ದು. ಅಂಥಾ ಅದ್ವಾನ ಸ್ಥಿತಿಯಲ್ಲಿದೆ ಬೆಂಗಳೂರಿನ ರಸ್ತೆಗಳು. ರಸ್ತೆ ಗುಂಡಿಯಿಂದ ಸಾವಾದರೆ ಪರಿಹಾರ ಕೊಡುವ ಜವಾಬ್ದಾರಿಯನ್ನು ಪಾಲಿಕೆ ಹೊತ್ತುಕೊಂಡಿತ್ತು. ಆದರೆ ಕಳೆದ ಒಂದು ವರ್ಷದಲ್ಲಿ ಆದ ರಸ್ತೆ ಅಪಘಾತದಲ್ಲಿ ಜೀವಹಾನಿಯಾದವರಿಗೆ ಬಿಬಿಎಂಪಿಯಿಂದ ನಯಾ ಪೈಸೆ ಪರಿಹಾರ ಸಿಕ್ಕಿಲ್ಲ.‌

ADVERTISEMENT

ಒಂದು ವರ್ಷದಲ್ಲಿ 6 ಜನ ಅಮಾಯಕರು ಬಲಿ, ಮೃತರ ಕುಟುಂಬಕ್ಕೆ ಸಲ್ಲಿಕೆಯಾಗದ ಪರಿಹಾರ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವರ್ಷದಲ್ಲಿ ರಸ್ತೆಗುಂಡಿಯಿಂದ ಬರೋಬ್ಬರಿ 600 ಕ್ಕೂ ಅಧಿಕ ಅಫಘಾತ ಸಂಭವಿಸಿವೆ. ಈ ಒಂದು ವರ್ಷದ ಅವಧಿಯಲ್ಲಿ ಆರು ಜನ ರಸ್ತೆ ಗುಂಡಿಯಲ್ಲಿ ಬಿದ್ದು ಜೀವ ಕಳೆದುಕೊಂಡರೆ, ನೂರಾರು ಸಂಖ್ಯೆಯಲ್ಲಿ ಜನರು ಕೈ ಕಾಲು ಕಳೆದುಕೊಂಡು ಬದುಕುತ್ತಿದ್ದಾರೆ. ಆದರೆ ಬಿಬಿಎಂಪಿ ನಿರ್ಲಕ್ಷ್ಯ ಮತ್ತು ನಿರ್ವಹಣೆ ವೈಫಲ್ಯದಿಂದ ಸಂಭವಿಸಿದ ಅಪಘಾತಗಳಿಗೆ ಬಿಬಿಎಂಪಿಯೇ ನೇರ ಹೊಣೆ ಎಂದು ಹೈಕೋರ್ಟ್ ಸಹ ಹೇಳಿದೆ. 2020 ಡಿಸೆಂಬರ್ ನಲ್ಲಿ ಹೈಕೋರ್ಟ್, ಪಾಲಿಕೆ ಪರಿಹಾರ ಒದಗಿಸಬೇಕು ಎಂದು ಖಡಕ್ ಸೂಚನೆಯನ್ನು ಕೊಟ್ಟಿತ್ತು. ಆದರೆ ಬಿಬಿಎಂಪಿಯಿಂದ ಸತ್ತವರಿಗೆ ಈವರೆಗೆ ಪರಿಹಾರ ಸೇರಿಲ್ಲ. ಇದುವರೆಗೂ ಸಾರ್ಜನಿಕರು ಯಾರೂ ಕೂಡ ಪರಿಹಾರಕ್ಕೆ ಅರ್ಜಿ ಸಲ್ಲಿಸಿಲ್ಲಾ. ಅರ್ಜಿ ಬಂದರೆ ಪರಿಶೀಲನೆ ನಡೆಸಿ ಪರಿಹಾರ ನಿಡುತ್ತೇವೆ ಎನ್ನುವ ಬಿಬಿಎಂಪಿ ಅಧಿಕಾರಿಗಳು, ಅರ್ಜಿ ಸಲ್ಲಿಸಬೇಕಾದ ರೀತಿ ರಿವಾಜುಗಳ ಪಟ್ಟಿಯನ್ನೇ ಈವರೆಗೆ ಅಧಿಕೃತವಾಗಿ ಪ್ರಕಟಿಸಿಲ್ಲ.

ಯಾವ ರಸ್ತೆಯಲ್ಲಿ ಎಷ್ಟು ಅಪಘಾತಗಳು

ಸಿಮೆಂಟ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆ :

2019 ರಲ್ಲಿ- 35
2020 ರಲ್ಲಿ – 29
2021 ರಲ್ಲಿ – 77

ಡಾಂಬರ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆ :

2019 ರಲ್ಲಿ – 744
2020 ರಲ್ಲಿ – 588
2021ರಲ್ಲಿ – 535

ಪರಿಹಾರ ಧನ ಕೊಡುವಂತೆ ಬಿಬಿಎಂಪಿ ಕಿವಿ ಹಿಂಡಿದ್ದ ಹೈ ಕೋರ್ಟ್!

ರಸ್ತೆ ಗುಂಡಿಯಿಂದ ಅಫಘಾತವಾದವರಿಗೆ ಪರಿಶೀಪಿಸಿ ಪರಿಹಾರ ಒದಗಿಸಬೇಕು ಬಿಬಿಎಂಪಿ. ಈ ಬಗ್ಗೆ ಹೈ ಕೋರ್ಟ್ ಸೂಚನೆ ನೀಡಿ ಒಂದು ವರ್ಷ ಕಳೆದರು ಒಂದು ಅರ್ಜಿಯೂ ಬಂದಿಲ್ಲ. ಅಪಘಾತದಿಂದ ಆದ ಹಾನಿ ಆಧಾರದ ಮೇಲೆ ಪರಿಹಾರ ಸಿಗುತ್ತದೆ. ಆದರೆ ಮಾಹಿತಿಯ ಕೊರತೆಯಿಂದ ಅರ್ಜಿಗಳು ಬಂದಿಲ್ಲ ಎಂಬುವುದೇ ವಾಸ್ತವ. ಸಾರ್ವಜನಿಕರು ರಸ್ತೆ ಗುಂಡಿಗೆ ಆದ ಬಲಿಗಳಿಗೆ ಬಿಬಿಎಂಪಿ ನೇರ ಹೊಣೆ ಎಂದು ಹಿಡಿ ಶಾಪ ಹಾಕಿ ಓಡಾಡುವ ಸ್ಥಿತಿ ತಲುಪಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೇಲ್ಲಾ ಕಾರಣ. ನ್ಯಾಯಾಂಗ ಆದೇಶವನ್ನು ಅಧಿಕಾರಿಗಳು ಉಲ್ಲಂಘನೆ ಮಾಡುತ್ತಿದ್ದಾರೆ. ಪರಿಹಾರ‌ದ ಕುರಿತು ಸಾರ್ವಜನಿಕರಿಗೆ ಮಾಹಿತಿ‌ ನೀಡುವಲ್ಲಿ ಬಿಬಿಎಂಪಿ ಎಡವಿದೆ ಎಂಬುವುದು ಸಾರ್ವಜನಿಕರ ಮಾತು. ಬಿಬಿಎಂಪಿ ಮಾಹಿತಿ ಕೊರತೆಯಿಂದ ಅಪಘಾತವಾದ ಕುಟುಂಬಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಎಷ್ಟೇ ಸಾವು ನೋವುಗಳಾದರೂ ಸಹ ಬಿಬಿಎಂಪಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಹೊಸ ಹೊಸ ಯೋಜನೆಗಳು ಜಾರಿ ಮಾಡಿ ಬಿಲ್ ಲಗತ್ತಿಸುವ ಕೆಲಸದಲ್ಲಿದೆ.

ಎಎಪಿಯಿಂದ ನಗರದೆಲ್ಲೆಡೆ ಗುಂಡಿಗಳು ಬಿದ್ದಿರುವುದನ್ನು ಖಂಡಿಸಿ ಬೃಹತ್ ಸಹಿ ಸಂಗ್ರಹ ಅಭಿಯಾನ ಆರಂಭ

ಇತ್ತ ರಾಜಧಾನಿಯ ರಸ್ತೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ನಗರದೆಲ್ಲೆಡೆ ಗುಂಡಿಗಳು ಬಿದ್ದಿರುವುದನ್ನು ಖಂಡಿಸಿ 10 ದಿನಗಳ ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಶನಿವಾರ ಚಾಲನೆ ನೀಡಿದರು.

Tags: BJPCongress PartyCovid 19ನಯಾಪೈಸೆ ಪರಿಹಾರನರೇಂದ್ರ ಮೋದಿಬಿಜೆಪಿರಸ್ತೆ ಗುಂಡಿರಾಜಧಾನಿಸಾಲು ಸಾಲು ಸಾವು
Previous Post

ಟಿಎಂಸಿ ನಾಯಕನ ಹತ್ಯೆಗೆ ಪ್ರತೀಕಾರ: ಭೀಕರ ಹಿಂಸಾಚಾರಕ್ಕೆ ಕನಿಷ್ಟ ಎಂಟು ಮಂದಿ ಸಜೀವ ದಹನ

Next Post

ಇಡೀ ರಾಜ್ಯಕ್ಕೆ ಬೆಂಕಿ ಹಚ್ಚಿದವನು ನೀನು – ಜಮೀರ್ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಈಶ್ವರಪ್ಪ!

Related Posts

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ
ಕರ್ನಾಟಕ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

by ಪ್ರತಿಧ್ವನಿ
March 4, 2026
0

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಪರೀಕ್ಷಾ ಪ್ರಾಧಿಕಾರ (BEA) ಸಂಯುಕ್ತವಾಗಿ, Rajiv Gandhi University of Health Sciences (RGUHS) ಸಮನ್ವಯದಲ್ಲಿ...

Read moreDetails
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
Next Post
ಇಡೀ ರಾಜ್ಯಕ್ಕೆ ಬೆಂಕಿ ಹಚ್ಚಿದವನು ನೀನು – ಜಮೀರ್ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಈಶ್ವರಪ್ಪ!

ಇಡೀ ರಾಜ್ಯಕ್ಕೆ ಬೆಂಕಿ ಹಚ್ಚಿದವನು ನೀನು - ಜಮೀರ್ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಈಶ್ವರಪ್ಪ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada