‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ವಿರೋಧಿಸಿದ ಸಿದ್ದರಾಮಯ್ಯ ವಿರುದ್ದ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋದ್ರಾಕ್ಕೆ ಒಮ್ಮೆ ಭೇಟಿ ನೀಡಿ ಬರಲಿ. ರೈಲಿನಲ್ಲಿ ಬೆಂಕಿ ಹಾಕಿ ಕೊಂದವರ ಮನೆಗೆ ಹೋಗಿ ಬರಲಿ. ಗೋದ್ರಾದಲ್ಲಿ ಮುಸ್ಲಿಮರು ಮಾಡಿದ ಅತ್ಯಾಚಾರವನ್ನು ಯಾವುದೇ ನಾಗರಿಕ ಸಮಾಜ ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು RSS ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಟೀಕಿಸಿದರು.
ಹಿಜಾಬ್ ಪ್ರಕರಣದಲ್ಲಿ ಹಿಜಾಬ್ ಅವರಿಗೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಲ್ಲಿನ ಹುಡುಗರು ಕೇಸರಿ ಶಾಲು ಹಾಕಿದ್ದು ದೊಡ್ಡ ವಿಷಯವಾಯಿತು. ಅದನ್ನೇ ಇಟ್ಟುಕೊಂಡು ಗೋದ್ರಾ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಇವತ್ತಿನವರೆಗೆ ಯಾವುದೇ ಹಿಂದೂ ಕ್ರಿಯೆ ಮಾಡಿಲ್ಲ, ಬದಲಾಗಿ ಕ್ರಿಯೆಗೆ ಪ್ರತಿಕ್ರಿಯೆ ನೀಡಿದ್ದಾನೆ.

ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ ಆಗಿದ್ದವರು, ನನಗೆ ಗೌರವ ಇದೆ. ಆದರೆ ಹುಚ್ಚುಚ್ಚು ಮಾತನಾಡಬಾರದು, ದನದ ಮಾಂಸ ತಿಂತೇನೇ ಯಾರು ಕೇಳೋರು ಅಂತಾರೆ. ದನ ಮತ್ತು ದೇವರನ್ನು ಪೂಜಿಸುವ ತಾಯಿ ಮತ್ತು ಹೆಂಡತಿಯನ್ನು ಸಿದ್ದರಾಮಯ್ಯ (Siddaramaiah) ಮನೆಯಿಂದ ಹೊರಗೆ ಹಾಕ್ತಾರಾ , ಇವರಿಗೆ ಅರ್ಥ ಆಗಲ್ಲ. 56 ಮಂದಿಯನ್ನು ಬೆಂಕಿ ಹಾಕಿ ರೈಲಿನಲ್ಲಿ ಕೊಂದ್ರಲ್ಲ ಅವರ ಮನೆಗೆ ಒಮ್ಮೆ ಹೋಗಿ ಬನ್ನಿ. ನಿಮ್ಮ ಬಗ್ಗೆ ಒಳ್ಳೆಯ ಭಾವನೆ, ಅಭಿಪ್ರಾಯ ಇದೆ, ಅದನ್ನು ಹಾಳು ಮಾಡಿಕೊಳ್ಳಬೇಡಿ. ದನ ಮಾಂಸ ತಿನ್ನುತ್ತೇ ನೆ ಎಂದು ಕೆಟ್ಟದಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಿ ಎಂದು ಪ್ರಭಾಕರ ಭಟ್ ಹೇಳಿದರು.

