ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಕನ್ನಡದ ‘ಕಬ್ಜ’ ಸಿನಿಮಾ ಸೆಟ್ಟೇರಿ ಹಲವು ಸಮಯ ಕಳೆದಿದೆ. ಆದರೆ, ಚಿತ್ರದ ನಾಯಕಿ ಯಾರು ಎನ್ನುವ ವಿಚಾರದಲ್ಲಿ ಗುಟ್ಟನ್ನು ಮಾತ್ರ ಎಲ್ಲೂ ರಿವಿಲ್ ಮಾಡದ ಚಿತ್ರತಂಡ ಇಂದು ಚಿತ್ರದ ಇಬ್ಬರಲ್ಲಿ ಇಬ್ಬ ನಾಯಕಿಯ ಹೆಸರನ್ನು ರಿವೀಲ್ ಮಾಡಿದ್ದು, ಖ್ಯಾತ ನಟಿ ಶ್ರೀಯಾ ಶರಣ್ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.
ಟಾಲಿವುಡ್ , ಕಾಲಿವುಡ್ ಟಾಪ್ ಸೂಪರ್ ಸ್ಟಾರ್ ಗಳ ಜತೆ ನಟಿಸಿ ಬಹುಭಾಷೆಯಲ್ಲಿ ನಾಯಕಿಯಾಗಿ ಆಳಿ, ಬಾಲಿವುಡ್ ನಲ್ಲಿ ಮತ್ತೆ ಚಾರ್ಮಿಂಗ್ ಇನ್ನಿಂಗ್ಸ್ ಶುರು ಮಾಡಿರೋ ಶ್ರೀಯಾ ಶರಣ್, ಇದೀಗ ವರ್ಷಗಳ ನಂತರ ಮತ್ತೆ ಕನ್ನಡದಲ್ಲಿ ಹಲ್ ಚಲ್ ಎಬ್ಬಿಸೋದಕ್ಕೆ ಬಂದಿದ್ದಾರೆ.

ಅರಸು ಹಾಗೂ ಚಂದ್ರ ಚಿತ್ರಗಳ ಗ್ಯಾಪ್ ನಂತ್ರ ಶ್ರಿಯಾ ದೊಡ್ಡ ಪಾತ್ರದೊಂದಿಗೆ ಕನ್ನಡದ ಅತಿದೊಡ್ಡ ಸಿನಿಮಾದೊಂದಿಗೆ ಭರ್ಜರಿಯಾಗಿ ಕಂಬ್ಯಾಕ್ ಆಗಿದ್ದಾರೆ.

ಕಬ್ಜದಲ್ಲಿ ಇಬ್ಬರು ರಾಣಿಯರಲ್ಲಿ ಒಬ್ಬರು ಇವತ್ತು ರಿವೀಲ್ ಅದ್ರೆ, ಮತ್ತೊಬ್ಬರು ಅತಿ ಶೀಘ್ರದಲ್ಲೇ ಆಗಲಿದ್ದಾರೆ. ಅದ್ರಂತೆ ಇಬ್ಬರಲ್ಲಿ ಒಬ್ಬರಾಗಿರೋ ಶ್ರೀಯಾ ಅವ್ರ ಪಾತ್ರ ಈಗ ರಿಲೀಲ್ ಆಗಿದ್ದು, ರೆಟ್ರೋ ಸ್ಟೈಲ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶ್ರಿಯಾ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

ಕೆ.ಜಿ.ಎಫ್ ನಂತರ ಪ್ಯಾನ್ ಇಂಡಿಯಾ ಲೆವ್ವೆಲ್ ನಲ್ಲಿ ಸದ್ದು ಸುದ್ದಿಯಾಗ್ತಿರೋ ಸಿನಿಮಾ ಕಬ್ಜ. ಕಥೆ ಹಾಗೂ ಮೇಕಿಂಗ್ ವಿಚಾರವೇ ಹೈಲೇಟ್ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ತೆಲುಗು ನೆಲದಲ್ಲಿ ಹಾಗೂ ಮುಂಬೈ ಮಾರ್ಕೆಟ್ ನಲ್ಲಿ ಕಬ್ಜ ವಿಚಾರ ಹಾಟ್ ಟಾಪಿಕ್ ಆಗಿದೆ. ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ. ಅಂಡರ್ ವಲ್ಡ್ ಕಿಂಗ್ ಪಾತ್ರದಲ್ಲಿನ ಉಪೇಂದ್ರಗೆ ಶ್ರಿಯಾಜೊಡಿಯಾಗಿ ನಟಿಸಲಿದ್ದಾರಂತೆ.

ಈಗಾಗ್ಲೇ ಪ್ಯಾನ್ ಇಂಡಿಯಾ ತುಂಬೆಲ್ಲಾ ನಿರೀಕ್ಷೆ ಹುಟ್ಟಿಸಿರೋ ಭರವಸೆ ಹೆಚ್ವಿಸಿರೋ ಕಬ್ಜ ಕೊನೆಯ ಭಾಗದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಅಂದ್ಹಾಗೆ ಇಷ್ಟರಲ್ಲೇ ನಿರ್ದೇಶಕ ಆರ್.ಚಂದ್ರು ಚಿತ್ರದ ಮತ್ತೊಂದು ರಾಣಿಯನ್ನ ಪರಿಚಯಿಸಲಿದ್ದು, ಅವ್ರು ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಅನ್ನೋದು ವಿಶೇಷ.
‘ಕಬ್ಜ’ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ಗಳು ಇರಲಿದ್ದಾರೆ. ಆ ಪೈಕಿ ಒಬ್ಬರನ್ನು ಚಿತ್ರತಂಡ ರಿವೀಲ್ ಮಾಡಿದೆ. ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನ ಮಾಡುತ್ತಿರುವ ‘ಆರ್ಆರ್ಆರ್’ ಸಿನಿಮಾದಲ್ಲಿ ಶ್ರೀಯಾ ನಟಿಸಿದ್ದಾರೆ.