• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಕುಟುಂಬವನ್ನು ಪೋಷಿಸಲು ಕಿಡ್ನಿಗಳನ್ನೇ ಮಾರಾಟಕ್ಕಿಟ್ಟ ಅಫ್ಘನ್ನರು!

Any Mind by Any Mind
March 6, 2022
in ವಿದೇಶ
0
ಕುಟುಂಬವನ್ನು ಪೋಷಿಸಲು ಕಿಡ್ನಿಗಳನ್ನೇ ಮಾರಾಟಕ್ಕಿಟ್ಟ ಅಫ್ಘನ್ನರು!
Share on WhatsAppShare on FacebookShare on Telegram

ಅಫ್ಘಾನಿಸ್ತಾನ ಮತ್ತೆ ತಾಲಿಬಾನಿನ ತೆಕ್ಕೆಗೆ ಬಿದ್ದು ಆರು ತಿಂಗಳುಗಳಾದವು. ಮೊದಮೊದಲು ಅಫ್ಘಾನಿಸ್ತಾದಿಂದ ಓಡಿಹೋಗಲು ಏರ್‌ಪೋರ್ಟ್‌ನಲ್ಲಿ‌‌ ಕಿಕ್ಕಿರಿದ ಜನರ, ಮಹಿಳೆಯರ ಫೊಟೊಇಗಳನ್ನು ಸಾರ್ವಜನಿಕ ಸ್ಥಳಗಳಿಂದ ಅಳಿಸಿ ಹಾಕಿದ, ಮಹಿಳಾ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದ, ಸೆಲೂನುಗಳ ಮುಚ್ಚಲ್ಪಟ್ಟ, ಶಾಲೆಗಳು ಮುಚ್ಚಲ್ಪಟ್ಟ ಸುದ್ದಿಗಳು ಅಲ್ಲಿಂದ ಕೇಳಿ ಬರುತ್ತಿದ್ದರೆ ಈಗ ಹಸಿವಿನಿಂದ ಕಂಗಾಲಾದ ಅಫ್ಘಾನರು ತಮ್ಮ ಒಂದು‌ ಕಿಡ್ನಿಯನ್ನೇ ಮಾರಾಟಕ್ಕಿಟ್ಟ ಸುದ್ದಿ ಬರುತ್ತಿದೆ.

ADVERTISEMENT

ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲೂ ಕಾನೂನುಬಾಹಿರ ಅಂಗಾಂಗ ವ್ಯಾಪಾರವು ಅಲ್ಲಿ ಅಸ್ತಿತ್ವದಲ್ಲಿತ್ತು. ಆದರೆ ಆ ದೇಶವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಂತರರಾಷ್ಟ್ರೀಯ ನಿರ್ಬಂಧಗಳಿಂದಾಗಿ ಲಕ್ಷಾಂತರ ಜನರು ಬಡತನದಲ್ಲಿ ಮುಳುಗಿದ ನಂತರ ಅಂಗಾಂಗ ಮಾರಾಟದ ಬ್ಲ್ಯಾಕ್ ಮಾರ್ಕೆಟ್ ಮತ್ತಷ್ಟು ಚುರುಕುಗೊಂಡಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 24 ದಶಲಕ್ಷಕ್ಕೂ ಹೆಚ್ಚು ಜನರು ಅಂದರೆ‌ ಜನಸಂಖ್ಯೆಯ 59 ಪ್ರತಿಶತ ಜನರಿಗೆ ಜೀವ ಉಳಿಸುವ ಮಾನವೀಯ ನೆರವಿನ ಅವಶ್ಯಕತೆಯಿದೆ. ಇದು 2021ರಲ್ಲಿ ಇದ್ದದ್ದಕ್ಕಿಂತ 30 ಪ್ರತಿಶತ ಹೆಚ್ಚಾಗಿದೆ.

ತಮ್ಮ ಕುಟುಂಬಗಳನ್ನು ಉಳಿಸಲು ಕಿಡ್ನಿಯನ್ನು ಮಾರಾಟ ಮಾಡಿದ ಆಫ್ಘನ್ನರಲ್ಲಿ ಒಬ್ಬರಾಗಿವ ನೂರುದ್ದೀನ್ ನ್ಯೂಸ್ ಏಜೆನ್ಸಿ ಎಎಫ್‌ಪಿ ಜೊತೆ ಮಾತನಾಡುತ್ತಾ “ನಿರುದ್ಯೋಗ, ಸಾಲದ ಹೊರೆ ಮತ್ತು ತನ್ನ ಮಕ್ಕಳನ್ನು ಪೋಷಿಸಲು  ಹೆಣಗಾಡುತ್ತಿರುವಾಗ ಮೂತ್ರಪಿಂಡವನ್ನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ”. ಕಿಡ್ನಿ ಮಾತಾಟವು  ಪಶ್ಚಿಮ ನಗರವಾದ ಹೆರಾತ್‌ನಲ್ಲಿ ಎಷ್ಟು ವ್ಯಾಪಕವಾಗಿ ಹರಡಿದೆ ಎಂದರೆ ಹತ್ತಿರದ ಗ್ರಾಮವನ್ನು “ಒಂದು ಮೂತ್ರಪಿಂಡದ ಗ್ರಾಮ” ಎಂದು ಕರೆಯಲಾಗುತ್ತಿದೆ.

“ಕಿಡ್ನಿ ಮಾರಾಟ ಮಾಡಿರುವುದಕ್ಕಾಗಿ ನಾನೀಗ ಪಶ್ಚಾತ್ತಾಪ ಪಡುತ್ತೇನೆ ಯಾಕೆಂದರೆ ನಾನು ಇನ್ನು ಮುಂದೆ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಈಗ ನೋವಿನಲ್ಲಿದ್ದೇನೆ ಮತ್ತು ನಾನು ಭಾರವಾದ ಯಾವುದನ್ನೂ ಎತ್ತಲು ಸಾಧ್ಯವಿಲ್ಲ” ಎಂದೂ ನೂರುದ್ದೀನ್ ಹೇಳಿದ್ದಾರೆ. ಹಿಂದೆ $3,500 ರಿಂದ $4,000 ಇದ್ದ ಕಿಡ್ನಿ ಬೆಲೆಯು ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ $1,500 ಗಿಂತ ಕಡಿಮೆಯಾಗಿದೆ.

ತಮ್ಮ ಕುಟುಂಬಗಳನ್ನು ಪೋಷಿಸಲು ಅಥವಾ ಸಾಲವನ್ನು ತೀರಿಸಲು ಮೂತ್ರಪಿಂಡವನ್ನು ಮಾರಾಟ ಮಾಡಿದೆ ಎಂದು   AFP ಜೊತೆ ಹೇಳಿದ್ದ ಎಂಟು ಮಂದಿಯಲ್ಲಿ ನೂರುದ್ದೀನ್ ಸಹ ಒಬ್ಬರು. ಹೆಚ್ಚಿನ ರಾಷ್ಟ್ರಗಳಲ್ಲಿ ಅಂಗಗಳನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು ಕಾನೂನುಬಾಹಿರವಾಗಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಅಂಗಾಂಗ ಮಾರಾಟಕ್ಕೆ ಯಾವುದೇ ನಿಯಂತ್ರಣವಿಲ್ಲ.

“ಅಂಗಗಳನ್ನು ಹೇಗೆ ದಾನ ಮಾಡಬಹುದು ಅಥವಾ ಮಾರಾಟ ಮಾಡಬಹುದು ಎಂಬುದನ್ನು ನಿಯಂತ್ರಿಸಲು ಯಾವುದೇ ಕಾನೂನು ಇಲ್ಲ, ಆದರೆ ದಾನಿಗಳ ಒಪ್ಪಿಗೆ ಅಗತ್ಯ” ಎಂದು ಉತ್ತರದ ನಗರವಾದ ಮಜಾರ್-ಐನಲ್ಲಿರುವ ಆಸ್ಪತ್ರೆಯ ಮಾಜಿ ಉನ್ನತ ಶಸ್ತ್ರಚಿಕಿತ್ಸಕ ಪ್ರೊಫೆಸರ್ ಮೊಹಮ್ಮದ್ ವಕಿಲ್ ಮತೀನ್ ಹೇಳಿದ್ದಾರೆ.  ಹೆರಾತ್‌ನ ಬಹುಪಾಲು ಕಸಿ ಮಾಡುವ ಎರಡು ಆಸ್ಪತ್ರೆಗಳಲ್ಲಿ ಒಂದರಲ್ಲಿನ  ಶಸ್ತ್ರಚಿಕಿತ್ಸಕ ಮೊಹಮದ್ ಬಸ್ಸಿರ್ ಒಸ್ಮಾನಿ “ಸಮ್ಮತಿ” ಮುಖ್ಯ ಎಂದು ಹೇಳಿದ್ದಾರೆ.”ನಾವು ಅವರಿಂದ ಲಿಖಿತ ಒಪ್ಪಿಗೆ ಮತ್ತು ವೀಡಿಯೊ ರೆಕಾರ್ಡಿಂಗ್ ಅನ್ನು ತೆಗೆದುಕೊಳ್ಳುತ್ತೇವೆ. ವಿಶೇಷವಾಗಿ ದಾನಿಯಿಂದ. ಆದರೆ ರೋಗಿ ಅಥವಾ ದಾನಿ ಎಲ್ಲಿಂದ ಬರುತ್ತಾರೆ, ಅಥವಾ ಹೇಗೆ ಎಂದು ನಾವು ಎಂದಿಗೂ ತನಿಖೆ ಮಾಡಿಲ್ಲ. ಇದು ನಮ್ಮ ಕೆಲಸವಲ್ಲ” ಎಂದೂ ಅವರು ಹೇಳಿದ್ದಾರೆ.

ಈ ಕುರಿತು ಕಾಮೆಂಟ್‌ಗಾಗಿ ಎಎಫ್‌ಪಿ ಮಾಡಿದ ವಿನಂತಿಗಳಿಗೆ ತಾಲಿಬಾನ್ ಪ್ರತಿಕ್ರಿಯಿಸಲಿಲ್ಲ, ಆದರೆ ದೇಶದ ಹೊಸ ಆಡಳಿತಗಾರರು ಅಂಗಾಂಗ ವ್ಯಾಪಾರವನ್ನು ನಿರ್ಬಂಧಿಸುವ ಯೋಜನೆಯನ್ನು ಹೊಂದಿದ್ದಾರೆ ಮತ್ತು ಅದನ್ನು ನಿಯಂತ್ರಿಸಲು ಸಮಿತಿಯನ್ನು ರಚಿಸುತ್ತಿದ್ದಾರೆ ಎಂದು ಉಸ್ಮಾನಿ ಹೇಳಿದರು.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ, ದಾನಿಗಳು ಮತ್ತು ಸ್ವೀಕರಿಸುವವರು ಸಾಮಾನ್ಯವಾಗಿ ಪೂರ್ಣ ಮತ್ತು ಸಾಮಾನ್ಯ ಜೀವನವನ್ನು ನಡೆಸುತ್ತಾರೆ, ಆದರೆ ಅವರ ಶಸ್ತ್ರಚಿಕಿತ್ಸೆಯ ನಂತರದ ಆರೋಗ್ಯವನ್ನು ಸಾಮಾನ್ಯವಾಗಿ  ಮೇಲ್ವಿಚಾರಣೆ ಮಾಡಲಾಗುತ್ತದೆ  ಮತ್ತು ಸಮತೋಲಿತ ಜೀವನಶೈಲಿ ಮತ್ತು ಆಹಾರವನ್ನು ಅವರಿಗೆ ಒದಗಿಸಲಾಗುತ್ತದೆ. ಮೂತ್ರಪಿಂಡವನ್ನು ಮಾರುವ, ಇನ್ನೂ ಬಡತನದಲ್ಲಿರುವ ಮತ್ತು ಕೆಲವೊಮ್ಮೆ ಅನಾರೋಗ್ಯಕ್ಕೆ ಸಿಲುಕಿರುವ ಬಡ ಆಫ್ಘನ್ನರಿಗೆ ಆ ಐಷಾರಾಮಿ ಸಾಮಾನ್ಯವಾಗಿ ಲಭ್ಯವಿರುವುದಿಲ್ಲ.

ಕೆಲವು ದಾನಿಗಳು ಮಾತ್ರ ಮುಂದಿನ ತಪಾಸಣೆಗೆ ವ್ಯವಸ್ಥೆ ಮಾಡುತ್ತಾರೆ ಎಂದು ಪ್ರೊಫೆಸರ್ ಮತೀನ್ ಹೇಳುತ್ತಾರೆ.  “ಕಿಡ್ನಿ ಮಾರಾಟಗಾರರು ಮತ್ತು ದಾನಿಗಳನ್ನು ಅವರ ಆರೋಗ್ಯದ ಮೇಲೆ ಪರಿಣಾಮಗಳನ್ನು ಪರಿಶೀಲಿಸಲು ನಿಯಮಿತ ಪರೀಕ್ಷೆಗಳಿಗೆ ನೋಂದಾಯಿಸಲು ಯಾವುದೇ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಲ್ಲ” ಎಂದು ಅವರು ಹೇಳುತ್ತಾರೆ.

ಎಎಫ್‌ಪಿ ಜೊತೆ ಮಾತಾಡಿರುವ ಮೂರು ಮಕ್ಕಳ ತಾಯಿ ಅಜೀಜಾ “ನನ್ನ ಮಕ್ಕಳು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ ತಿರುಗುತ್ತಿದ್ದಾರೆ, ನನ್ನ ಕಿಡ್ನಿ ಮಾರದಿದ್ದರೆ ನನ್ನ ಒಂದು ವರ್ಷದ ಮಗಳನ್ನು ಬಲವಂತವಾಗಿ ಮಾರಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಇಂತಹ ದೊಡ್ಡ ಮಟ್ಟದ ಆರ್ಥಿಕ ಸಂಕಷ್ಟಕ್ಕೆ ಆ ದೇಶದ ಮೇಲೆ ಹೇರಿರುವ ಆರ್ಥಿಕ ನಿರ್ಬಂಧ, ದೇಶದ ಅತ್ಯಂತ ಭೀಕರ ಬರಗಾಲ ಮತ್ತು ಕೋವಿಡ್-19 ಕಾರಣಗಳಾಗಿವೆ. ತಾಲಿಬಾನ್‌ನ್ನು ಶಿಕ್ಷಿಸುವುದಕ್ಕಾಗಿ ಜಗತ್ತು ಅಫ್ಘಾನಿನ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿದೆ. ಆದರೆ ಸಾವಿರಾರು ಮಿಲಿಯನ್ ಡಾಲರ್ ಆಸ್ತಿ ಇರುವ ತಾಲಿಬಾನ್ ಮೇಲೆ ಈ ಆರ್ಥಿಕ ನಿರ್ಬಂಧ ಯಾವುದೇ ಪರಿಣಾಮ ಬೀರಿಲ್ಲ. ಆದರೆ ಅಫ್ಘಾನಿನ ಸಾಮಾನ್ಯ ಜನತೆ ಹಸಿವಿಗಾಗಿ ಅಂಗಾಂಗ, ಮಕ್ಕಳನ್ನೇ ಮಾರುವ ದಾರುಣ ಸ್ಥಿತಿ ತಲುಪಿದ್ದಾರೆ. ಒಂದು ಕಾಲದಲ್ಲಿ ಅಭಿವೃದ್ಧಿಯ ಕಡೆಗೆ ದಾಪುಗಾಲು ಹಾಕುತ್ತಿದ್ದ ಮಧ್ಯ ಏಷ್ಯಾದ ನಗರದ ರಸ್ತೆಗಳಲ್ಲಿ ಇಂದು ವಾಹನಗಳೇ ಕಾಣುತ್ತಿಲ್ಲ, ರಸ್ತೆ ಬದಿ ವ್ಯಾಪಾರಿಗಳಿಂದ ಹಣ್ಣುಗಳನ್ನೂ ಕೊಳ್ಳಲು ಜನರಿಲ್ಲ. ಅಫ್ಘಾನಿಸ್ತಾನ ಸಾಮಾನ್ಯ ಜನತೆಯನ್ನು ಇಂತಹ ಸ್ಥಿತಿಗೆ ತಂದಿಟ್ಟ ತಾಲಿಬಾನಿಗರನ್ನಾಗಲೀ, ಅದನ್ನು ಕಣ್ಣು ಮುಚ್ಚಿ ನೋಡುತ್ತಿರುವ ಜಗತ್ತಿನ ಇತರ ರಾಷ್ಟ್ರಗಳನ್ನೇ ಆಗಲಿ ಇತಿಹಾಸ ಎಂದಿಗೂ ಕ್ಷಮಿಸದು.

Tags: AfghanistanAfghanistanCrisisAfghans selling kidneys to feed their families
Previous Post

ನಿಂತಲ್ಲೇ ಬರುತ್ತೆ ಪಂಚರ್ ಅಂಗಡಿ : ಬೆಂಗಳೂರು ಹುಡುಗನ ಕ್ರಿಯಾಶೀಲ ಕಾರ್ಯ

Next Post

ಅಪೂರ್ಣ ಮೆಟ್ರೋ ಉದ್ಘಾಟಿಸುವ ಬದಲು, ವಿದ್ಯಾರ್ಥಿಗಳ ರಕ್ಷಣೆ ಕಡೆ ಗಮನ ಹರಿಸಿ : PM ಮೋದಿಗೆ ಶರದ್ ಪವಾರ್ ಸಲಹೆ

Related Posts

ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?
Top Story

ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?

by ಪ್ರತಿಧ್ವನಿ
February 11, 2026
0

ಐಸಿಸಿ.. ಕ್ರಿಕೆಟ್ ಜಗತ್ತಿಗೆ ಬಾಸ್.. ಬಿಸಿಸಿಐ ವಿಶ್ವಕ್ರಿಕೆಟ್‍ನ ಲಕ್ಷ್ಮೀ ಪುತ್ರ.. ಕುಬೇರ.. ದೊಡ್ಡಣ್ಣ..! ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಹಿಂದಿನಿಂದಲೂ ಬಂದಿರುವ ಒಂದು ನಿಯಮ ಇದೆ. ಅದು ಯಾವುದೇ ಕ್ರಿಕೆಟ್...

Read moreDetails
ಅಮೆರಿಕ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ಬಳಸಿ ಎಸೆಯಿತು : ಖವಾಜಾ ಆಸಿಫ್

ಅಮೆರಿಕ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ಬಳಸಿ ಎಸೆಯಿತು : ಖವಾಜಾ ಆಸಿಫ್

February 11, 2026
ತಿಂಗಳುಗಟ್ಟಲೆ ಸಮುದ್ರದಲ್ಲಿ ಸಿಲುಕಿದ್ದ ರಷ್ಯಾ ತೈಲ ಟ್ಯಾಂಕರ್‌ಗಳು: ಭಾರತ ಮಧ್ಯಪ್ರವೇಶಿಸುತ್ತದೆಯೇ?

ತಿಂಗಳುಗಟ್ಟಲೆ ಸಮುದ್ರದಲ್ಲಿ ಸಿಲುಕಿದ್ದ ರಷ್ಯಾ ತೈಲ ಟ್ಯಾಂಕರ್‌ಗಳು: ಭಾರತ ಮಧ್ಯಪ್ರವೇಶಿಸುತ್ತದೆಯೇ?

February 11, 2026
ನರೇಂದ್ರ ಮೋದಿ ಅವರ ರಾಜಕೀಯ ಜೀವನವನ್ನು ನಾನು ಕೊನೆಗೊಳಿಸಬಲ್ಲೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರಾ? 

ನರೇಂದ್ರ ಮೋದಿ ಅವರ ರಾಜಕೀಯ ಜೀವನವನ್ನು ನಾನು ಕೊನೆಗೊಳಿಸಬಲ್ಲೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರಾ? 

February 10, 2026
ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

February 7, 2026
Next Post
ಅಪೂರ್ಣ ಮೆಟ್ರೋ ಉದ್ಘಾಟಿಸುವ ಬದಲು, ವಿದ್ಯಾರ್ಥಿಗಳ ರಕ್ಷಣೆ ಕಡೆ ಗಮನ ಹರಿಸಿ : PM ಮೋದಿಗೆ ಶರದ್ ಪವಾರ್ ಸಲಹೆ

ಅಪೂರ್ಣ ಮೆಟ್ರೋ ಉದ್ಘಾಟಿಸುವ ಬದಲು, ವಿದ್ಯಾರ್ಥಿಗಳ ರಕ್ಷಣೆ ಕಡೆ ಗಮನ ಹರಿಸಿ : PM ಮೋದಿಗೆ ಶರದ್ ಪವಾರ್ ಸಲಹೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada