ಉಕೇನ್ ಮೇಲೆ ತನ್ನ ಹಿಡಿತವನ್ನು ಮುಂದುವರೆಸಿರುವ ರಷ್ಯಾ ಹಿಂದೆ ಸರಿಯುವ ಯಾವ ಸೂಚನೆಯನ್ನು ನೀಡುತ್ತಿಲ್ಲ. ಇತ್ತ ಉಕ್ರೇನ್ ಒಂದು ಹೆಜ್ಜೆ ಮುಂದೆ ಹೋಗಿ ರಷ್ಯಾದೊಂದಿಗೆ ಮಾತನಾಡಲು ಸಿದ್ದವಿರುವುದಾಗಿ ತಿಳಿಸಿದೆ.
ಇಲ್ಲಿದೆ ಪ್ರಮುಖ 10 ಅಂಶಗಳು
1) ಉಕ್ರೇನ್ ರಷ್ಯಾದೊಂದಿಗೆ ಮಾತುಕಥೆಗೆ ಸಿದ್ದವಿರುವುದಾಗಿ ಹೇಳಿದೆ. ಇದೇ ವೇಳೆ ರಷ್ಯಾದ ಅಧ್ಯಕ್ಷ Vladimir Putin ರಕ್ಷಣಾ ಇಲಾಖೆಯ ಮುಖ್ಯಸ್ಥರಿಗೆ ಪರಮಾಣುಗಳನ್ನು ಸಿದ್ದವಿಟ್ಟುಕೊಂಡು ತಯಾರಿರಬೇಕಾಗಿ ಎಚ್ಚರಿಸಿದ್ದಾರೆ. ಇತ್ತ US ಅಸ್ತಿತ್ವದಲ್ಲಿಲ್ಲದ ಗೊಡ್ಡು ಬೆದರಿಕೆಗಳಿಗೆ ಹೆದರಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ಉಕ್ರೇನ್ ಪರವಾಗಿ ರಷ್ಯಾಗೆ ತಿರುಗೇಟು ನೀಡಿದೆ.
2) ಉಕ್ರೇನ್ನ ಅಧ್ಯಕ್ಷ ಹಾಗೂ ಬೆಲಾರಸ್ನ ನಾಯಕರ ನಡುವಿನ ಮಾತುಕತೆ ನಂತರ ಬೆಲಾರಸ್ ಗಡಿ(Border) ಪ್ರದೇಶದಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಒಪ್ಪಿಕೊಂಡಿತ್ತು. ಮೊದಲು ಬೆಲಾರಸ್ನಲ್ಲಿ(Belarus) ಮಾತುಕತೆ ನಡೆಸಲು ಉಕ್ರೇನ್ ಹಿಂದೇಟು ಹಾಕಿತ್ತು.
3) UN ಭದ್ರತಾ ಮಂಡಳಿಯೂ ಊಕ್ರೇನ್ ಮೇಲಿನ ರಷ್ಯಾದ ದಾಳಿ ಕುರಿತು ಚರ್ಚಿಸಲು ತುರ್ತು ಸಭೆ ಕರೆದಿದೆ. ಭಾರತವು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿತ್ತು ಆದರೆ, ಕೈವ್(KYIV) ಮತ್ತು ಮಾಸ್ಕೋ (Masco) ನಡುವಿನ ಮಾತುಕತೆಯನ್ನು ಸ್ವಾಗತಿಸಿತ್ತು.
4) ಈ ಮಧ್ಯೆ ಅಮೆರಿಕಾ (US) ರಷ್ಯಾ ಸೇನೆಯೂ ತನ್ನ ಬಲವನ್ನು ಕಳೆದುಕೊಂಡಿದೆ. ಉಕ್ರೇನ್ ಸೇನೆಯೂ ತೀವ್ರ ಪ್ರತಿರೋಧವನ್ನು ಎದುರಿಸಿದೆ.
5) ಇತ್ತ ಉಕ್ರೇನ್ ದಿಟ್ಟತನದಿಂದ ರಷ್ಯಾದ ಸೇನೆಯನ್ನು ಹಿಮ್ಮೆಟ್ಟಿಸಿರುವುದಾಗಿ ಹೇಳಿದೆ. ಆದರೆ, ರಷ್ಯಾದ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಷ್ಯಾದ ಬಂಡುಕೋರರ ಗುಂಪಿನ ವಿರುದ್ದ ತನ್ನ ಹೋರಾಟ ಮುಂದವರೆಸಿರುವುದಾಗಿ ಹೇಳಿದೆ.
6) ವಿಶ್ವ ಸಂಸ್ಥೆ (UN) ನ ನಿರಾಶ್ರಿತರ ವಿಭಾಗವು ಸಾವಿರಾರು ಜನರು ಯುದ್ದ(War) ಭೀತಿಯಿಂದ ಪಲಾಯನ ಮಾಡುತ್ತಿದ್ದಾರೆ. ದೇಶದ ಇತರ ನಾಗರೀಕರು Romania, Moldova, Hungaryಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.
7) ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿ ಇತ್ತ ಪ್ರತಿಭಟನೆಗಳು ಸಹ ಜೋರಾಗಿ ನಡೆಯುತ್ತಿವೆ. ಲಕ್ಷಾಂತರ ಜನರು Berlin, Baghdad ಮತ್ತು Quitoನಿಂದ ಜನರು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಇಲ್ಲಿಯವರೆಗೂ ಒಟ್ಟು ಐದು ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
8) ಯೂರೋಪಿಯನ್ ಯೂನಿಯನ್ ಸದಸ್ಯರು ರಷ್ಯಾದ ವಿರುದ್ದ ಹೊಸ ನಿರ್ಬಂಧಗಳನ್ನು ಘೋಷಿಸಿದ್ದರು ಮತ್ತು ಉಕ್ರೇನ್ಗೆ ಹೆಚ್ಚಿನ ಮಿಲಿಟರಿ ಬೆಂಬಲವನ್ನು ಘೋಷಿಸಿದ್ದರು. ರಷ್ಯಾದ ವಿರುದ್ದದ ದಾಳಿಯನ್ನು ತೀವ್ರಗೊಳಿಸುವುದಕ್ಕಾಗಿ ಉಕ್ರೇನ್ಗೆ ಹೆಚ್ಚಿನ ಯುದ್ದ ವಿಮಾನಗಳನ್ನು ಕಳುಹಿಸುವುದಾಗಿ ಯೂರೋಪಿಯನ್ ಯೂನಿಯನ್ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಹೇಳಿದ್ದಾರೆ.
9) ಇತ್ತ ರಷಾಯದ ಆಕ್ರಮಣದ ವಿರುದ್ದ ತೀವ್ರ ಪ್ರತಿರೋಧಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಗೂಗಲ್ ರಷ್ಯಾದ ಸುದ್ದಿ ಮಾಧ್ಯಮಗಳು ಹಣ ಗಳಿಸುವುದನ್ನು ತಡೆಯಲು ಫೇಸ್ಬುಕ್ಅನ್ನು ಅನುಸರಿಸಿದೆ ಮತ್ತು ಉಕ್ರೇನ್ನಲ್ಲಿ ರಷ್ಯಾ ಇಂಟರ್ನೆಟ್ ಸೇವೆಗಳನ್ನು ನಿರ್ಬಂಧಿಸಲು ಮುಂದಾಗಿದೆ. ಇತ್ತ ಉಕ್ರೇನ್ ನೆರವಿಗೆ ಧಾವಿಸಿರುವ Elon Musk Space Xನ Star link ಮೂಲಕ ಉಪಗ್ರಹ ಸೇವೆ ಒದಗಿಸಲು ಆದೇಶಿಸಿದ್ದಾರೆ.
10) ಇತ್ತ ರಷ್ಯಾ ಕ್ರೀಡಾ ಕ್ಷೇತ್ರದಲ್ಲೂ ಸಹ ತೀವ್ರ ವಿರೋಧವನ್ನ ಎದುರಿಸುತ್ತಿದೆ. ಪುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಳಲ್ಲಿ ರಷ್ಯಾ ವಿರುದ್ದ ಪಂದ್ಯಾವಳಿಗಳನ್ನು ಜೆಕ್ ರಿಪಬ್ಲಿಕ್, ಸ್ವೀಡನ್ ಹಾಗೂ ಪೋಲೆಂಡ್ ರಷ್ಯಾ ವಿರುದ್ದ ಪ್ಲೇ ಆಫ್ ಪಂದ್ಯಗಳನ್ನು ಬಹಿಷ್ಕರಿಸಿವೆ.