ಇತ್ತೀಚಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ (School Children) ಓದುವುದರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಯಾಕೆಂದ್ರೆ ಬೇರೆ ಚಟುವಟಿಕೆಗಳಲ್ಲಿ ಇವರು ತಮ್ಮನ್ನ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ, ಪ್ರೀತಿಗೆ ಒಳಗಾಗುವ (Love) ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿದೆ. ಇದು ಪೋಷಕರಿಗೆ ಆತಂಕವನ್ನು ಹುಟ್ಟಿಸುವಂತಾಗಿದೆ. ಹಾಗಾದ್ರೆ ಯಾಕೆ ವಿದ್ಯಾರ್ಥಿಗಳು ಲವ್‌ಗೆ ಬೀಳ್ತಿದ್ದಾರೆ.
ಹೀಗಂತ ಹೇಳ್ತಿರುವುದು ನಾವಲ್ಲ. ಇದು ಮಹಿಳಾ ಆಯೋಗ ನಡೆಸಿದ ಒಂದು ಅಧ್ಯಯನದಲ್ಲಿ ಗೊತ್ತಾಗಿದೆ. ಇತ್ತೀಚೆಗೆ ಅಂದರೆ ಕಳೆದ ಒಂದು ವರ್ಷದಿಂದ ಶಾಲಾ, ಕಾಲೇಜು ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಂದ ಹೆಚ್ಚು ದೂರ ಉಳಿದಕೊಂಡಿದ್ದರು. ಮೊಬೈಲ್ ನಲ್ಲೇ (Mobile) ದಿನದ ಬಹುತೇಕ ಕಾಲ ಕಳೆಯುತ್ತಿದ್ದರು. ಹೀಗಾಗಿ ಮಕ್ಕಳ ಮನಸ್ಥಿತಿ ಬದಲಾಗಿದೆ. ಈ ವೇಳೆ ಪ್ರೀತಿ, ಪ್ರೇಮದ ಕಡೆ ಮಕ್ಕಳು ಹೆಚ್ಚು ಆಕರ್ಷಿತರಾಗಿದ್ದಾರೆ ಎಂದು ಮಹಿಳಾ ಆಯೋಗ ನಡೆಸಿದ ಅಧ್ಯಯನದಲ್ಲಿ ವರದಿಯಾಗಿದೆ. ಹೀಗೆ ಹದಿಹರೆಯದ ವಯಸ್ಸಿನಲಿ ಮಕ್ಕಳಿಗೆ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಅದರಲ್ಲೂ ಲವ್ ಮಾಡಿ ಬ್ರೇಕ್ ಅಪ್ ಆಗಿ ಬಳಿಕ ನ್ಯಾಯಕ್ಕಾಗಿ ಮಹಿಳಾ ಆಯೋಗದ ಮೆಟ್ಟಿಲೇರುತ್ತಿದ್ದಾರೆ ವಿದ್ಯಾರ್ಥಿನಿಯರು.

ಕಳೆದ ವರ್ಷದ ಆರಂಭದಿಂದ ಡಿಸೆಂಬರ್‌ವರೆಗೂ ಮಹಿಳಾ ಆಯೋಗದಲ್ಲಿ ಬರೋಬ್ಬರಿ 67 ಪ್ರೇಮ ಪ್ರಕರಣದ ದೂರುಗಳು ಬಂದಿವೆ. ಇದರ ಜೊತೆಗೆ ನೂರಕ್ಕೂ ಹೆಚ್ಚು ಸುಮೋಟೋ ಕೇಸ್ ದಾಖಲಾಗಿವೆ. ಇಲ್ಲಿ ಬರುವ ರಕ್ಷಣೆ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಕೆಲಸದಲ್ಲಿ ಕಿರುಕುಳ ಪ್ರಕರಣಗಳ ಜೊತೆಯಲ್ಲಿ ಪ್ರೇಮ ಸಂಬಂಧ ಪ್ರಕರಣ ಕೂಡಾ ಪಟ್ಟಿಯಲಿ ದಾಖಲಾಗಿದೆ. ಅದರಲ್ಲೂ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ದಿನಗಳಲ್ಲೇ ಲವ್ ಮಾಡಿ ಕೆಲ ಮಕ್ಕಳು ಓದನ್ನು ಅರ್ಧಕ್ಕೆ ಬಿಟ್ಟು ಮದ್ವೆಯಾದರೆ, ಉಳಿದ ಕೇಸ್‌ಗಳಲ್ಲಿ ಬ್ರೇಕ್ ಅಪ್ ಆಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಶಾಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಈ ವರ್ಷ ಮಹಿಳಾ ಆಯೋಗದಲ್ಲಿ ಹೆಚ್ಚಾಗಿ ಶಾಲೆಗಳ ಮೇಲೆ ಗಮನ ಹರಿಸಿದ್ದು, ಎಲ್ಲಾ ಶಾಲೆಗಳಲ್ಲೂ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲು ಆಯೋಗ ಸಿದ್ಧತೆಯನ್ನು ಮಾಡಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದ್ದಾರೆ.
ಇನ್ನು ಮಕ್ಕಳಲ್ಲಿ ಈ ರೀತಿಯ ಮನಸ್ಥಿತಿ ಉಂಟಾಗಲು ಕಾರಣ ಏನು ಎಂದು ನೋಡುವುದಾದರೆ, ಸೊಷಿಯಲ್ ಮೀಡಿಯಾದ ಪ್ರಭಾವದಿಂದ ಈ ಲವ್ ಮೇಲೆ ಆಸಕ್ತಿ ಹೆಚ್ಚಿದೆ. ಫೇಸ್‌ಬುಕ್, ಇನ್ಸಟಾಗ್ರಾಮ್‌ನಂಥಹ ಹಲವು ಸೋಷಿಯಲ್ ಮೀಡಿಯಾದಲ್ಲಿ ಗೆಳೆಯರಾಗಿ ಬಳಿಕ ಅದು ವಿವಿಧ ಆಯಾಮಕ್ಕೆ ತಿರುಗಿ ಪ್ರೇಮವಾಗುತ್ತಿದೆ. ಹೀಗಾಗಿ ಮಕ್ಕಳ ಮೇಲೆ ಗಮನವನ್ನು ಪೋಷಕರು ಹೆಚ್ಚಾಗಿ ವಹಿಸಬೇಕಿದೆ. ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ಕಣ್ಣಿಡಬೇಕಿದೆ. ಒಟ್ಟಾರೆ ಇತ್ತೀಚೆಗೆ ಲವ್ ಪ್ರಕರಣ ಹೆಚ್ಚಾಗಿದ್ದು, ಸ್ಕೂಲ್ ಲೈಫ್ ಗೋಲ್ಡನ್ ಲೈಫ್ ಅಂತಾರೆ. ಹೀಗಾಗಿ ಮಕ್ಕಳು ತಮ್ಮ ಶೈಕ್ಷಣಿಕ ಸಮಯದಲ್ಲಿ ಶಿಕ್ಷಣದ ಬಗ್ಗೆ ಗಮನ ಹರಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದರ ಬಗ್ಗೆ ಒಲವು ತೋರಬೇಕಿದೆ. ಪೋಷಕರು ಈ ಬಗ್ಗೆ ಗಮನಹರಿಸುವುದು ಒಳಿತು.