ದೇಶದ ಪ್ರತಿಷ್ಠಿತ ಕ್ರಿಕೆಟ್ ಸಂಸ್ಥೆಯಾಗಿರುವ (Cricket Board) ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (karnataka state cricket association) ಮೇಲೆ ಇದೀಗ ಗಂಭೀರವಾಗಿರುವ ಆರೋಪ ಕೇಳಿ ಬಂದಿದೆ. ಕಾರ್ಪೋರೇಷನ್ ಅಧೀನಕ್ಕೆ ಬರುವ ಸಾರ್ವಜನಿಕ ರಸ್ತೆಯೊಂದನ್ನು KSCA ಕಬ್ಜಾ ಮಾಡಿ ಖಾಸಗಿಯಾಗಿ ಬಳಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ಬಿಬಿಎಂಪಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದ (chinnaswamy stadium) ಆಡಳಿತ ಮಂಡಳಿಗೆ ನೋಟೀಸ್ ನೀಡಲಾಗಿದೆ.
ಹೌದು, ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೇಲೆ ಸಾರ್ವಜನಿಕರ ರಸ್ತೆ (Public road) ಒತ್ತುವರಿ ಆರೋಪ ಕೇಳಿ ಬಂದಿದೆ. ಸಾರ್ವಜನಿಕ ರಸ್ತೆಯನ್ನು ಹೇಳದೇ ಕೇಳದೆ ಒತ್ತುವರಿ ಮಾಡಿ ಖಾಸಗಿಯಾಗಿ ಬಳಸುತ್ತಿದೆಯಾ KSCA..? ಎಂಬ ಪ್ರಶ್ನೆ ಸದ್ಯದ್ದು. ಅಲ್ಲದೆ ಒತ್ತುವರಿ ಮಾಡಿರುವ ಸಾರ್ವಜನಿಕ ರಸ್ತೆಗೆ ಚೆಕ್ ಪೋಸ್ಟ್ ಹಾಗೂ ಸ್ಟೆಪ್ಗಳನ್ನು ನಿರ್ಮಾಣ ಮಾಡಲಾಗಿದೆ. ರಸ್ತೆ ದುರ್ಬಳಕೆ ಹಿನ್ನೆಲೆ KSCAಗೆ ಪಾಲಿಕೆಯಿಂದ ನೋಟೀಸ್ ನೀಡಲಾಗಿದೆ.
ಗೇಟ್ ಸಂಖ್ಯೆ 8 ರಿಂದ 11 ದ್ವಾರ ಇರುವ ರಸ್ತೆ ಕಬಳಿಕೆ!
ಶಾಂತಲಾನಗರ ವಾರ್ಡ್ (Santhinagar ward) ವ್ಯಾಪ್ತಿಯಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ಸಂಖ್ಯೆ 8 ರಿಂದ 11 ದ್ವಾರ ಇರುವ ರಸ್ತೆಗಳಲ್ಲಿ ಚೆಕ್ ಪೋಸ್ಟ್ (check post) ನಿರ್ಮಿಸಲಾಗಿದೆ. ಇದರಿಂದ ಸಾರ್ವಜನಿಕ ರಸ್ತೆಗೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟುಮಾಡಲಾಗಿದೆ. ಅಷ್ಟಕ್ಕೂ ಈ ರಸ್ತೆಯನ್ನು ಖಾಸಗಿ ಓಡಾಟಕ್ಕೆ ಇಟ್ಟುಕೊಳ್ಳಲು ಹೇಗೆ ಸಾಧ್ಯ..? ಇದಕ್ಕೆ ಅನುಮತಿ ಕೊಟ್ಟವರು ಯಾರೂ ಎಂಬುವುದು ಸದ್ಯದ ಪ್ರಶ್ನೆ. ಹೀಗಾಗಿ, ಶಾಂತಲಾನಗರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ KSCAಗೆ ನೋಟೀಸ್ ಕೊಡಮಾಡಿದ್ದಾರೆ.
ಚೆಕ್ ಪೋಸ್ಟ್, ಮೆಟ್ಟಿಲು ನಿರ್ಮಾಣ.. ಬಿಬಿಎಂಪಿ ನೋಟೀಸ್!
ಅನಿಲ್ ಕುಂಬ್ಳೆ (Anil kumble) ವೃತ್ತದಿಂದ ಮಾಣಿಕ್ ಷಾ ಪರೇಡ್ ಕಡೆಗೆ ಸಾಗುವ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಕಳೆದ ಕೆಲವು ವರ್ಷಗಳಿಂದ ಇಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಖಾಸಗಿ ಆಸ್ತಿಯೆಂಬಂತೆ ಚೆಕ್ ಪೋಸ್ಟ್ ನಿರ್ಮಿಸಿಕೊಂಡು ಬಳಸಿಕೊಳ್ಳುತ್ತಿದೆ. ಅಲ್ಲದೆ ಮೂರು ಅಡಿ ಎತ್ತರಕ್ಕೆ ಮಣ್ಣು ತುಂಬಿ ಹತ್ತಲು ಮತ್ತು ಇಳಿಯಲು ಮೆಟ್ಟಿಲುಗಳನ್ನೂ ನಿರ್ಮಾಣ ಮಾಡಿಕೊಂಡಿದೆ. ಇದರ ಬಗ್ಗೆ ಈ ಹಿಂದೆಯೇ ಸಾಮಾಜಿಕ ಕಾರ್ಯಕರ್ತರು ಧ್ವನಿ ಎತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಬಿಬಿಎಂಪಿ KSCA ಗೆ ಏಕಾಏಕಿ ನೋಟೀಸ್ ಕೊಟ್ಟು ಮಾಹಿತಿ ಅಥವಾ ಬಿಬಿಎಂಪಿ ಮನವಿ ಪತ್ರ ಕೊಟ್ಟಿದ್ದರೆ ಅದನ್ನು ಸಲ್ಲಿಸುವಂತೆ ಕೋರಲಾಗಿದೆ.
ಬಿಬಿಎಂಪಿ ನೋಟೀಸ್ ನಲ್ಲಿ ಏನಿದೆ.?
ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಗೆ ಪಾಲಿಕೆ ನೀಡಿದ ನೋಟೀಸ್ ನಲ್ಲಿ ರಸ್ತೆ ಒತ್ತುವರಿ ಬಗ್ಗೆ ಮಾಹಿತಿ ಕೇಳಿ ಉತ್ತರ ನೀಡುವಂತೆ ಕೇಳಲಾಗಿದೆ. ಒಂದು ವೇಳೆ ಹಿಂದೆ ಈ ಸಾರ್ವಜನಿಕ ರಸ್ತೆ ಬಳಿಕೆಗೆ ಪಾಲಿಕೆ ಅನುಮತಿ ಕೊಟ್ಟಿದ್ದರೆ ಪಾಲಿಕೆ ಒಪ್ಪಿಗೆ ಪತ್ರ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಕೂಡಲೇ ಉತ್ತರ ನೀಡಿ, ಇಲ್ಲವಾದಲಿ ಕಾನೂನು ಕ್ರಮ (Leagal Action) ಜಾರಿಯ ಎಚ್ಚರಿಕೆ ಕೊಡಲಾಗಿದೆ. ಹೀಗೆ ರಸ್ತೆ ಒತ್ತುವರಿ ಸಂಬಂಧ ಕ್ರಿಕೆಟ್ ಸಂಸ್ಥೆಗೆ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.