ರಾಜ್ಯದಲ್ಲಿ ಕಾಂಗ್ರೆಸ್(Congress) ಸರ್ಕಾರ ಅಸ್ತಿತ್ವಕ್ಕೆ ಬಂದಾಗ ವಿದ್ಯುತ್(Electric) ಸಮಸ್ಯೆ ನಿವಾರಣೆ ಮಾಡಲು ದೊಡ್ಡ ದೊಡ್ಡ ಯೋಜನೆ ಕೈಗೊಳ್ಳುತ್ತಲೇ ಇದೆ ಎನ್ನುವುದು ಸುಳ್ಳಲ್ಲ. ಕಳೆದ ಬಾರಿ ಡಿ.ಕೆ ಶಿವಕುಮಾರ್(DKShivakumar) ಇಂಧನ ಸಚಿವರಾಗಿದ್ದ ವೇಳೆ ತುಮಕೂರಿನ ಪಾವಗಡದಲ್ಲಿ ಬಹುದೊಡ್ಡ ಸೋಲಾರ್ ಪಾರ್ಕ್(Solarpark) ನಿರ್ಮಾಣ ಮಾಡಿದ್ದರು. ಜೊತೆಗೆ ಸಾರ್ವಜನಿಕರು ಕೂಡ ಸೋಲಾರ್ ಪ್ಯಾನಲ್(Solar panel) ಬಳಸಿ ವಿದ್ಯುತ್ ತಯಾರಿಸಿದ ಬಳಿಕ ಸರ್ಕಾರದ ಗ್ರಿಡ್‌ಗೆ ವಾಪಸ್ ಕೊಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಇದೀಗ ಇಂಧನ ಸಚಿವರಾಗಿರುವ ಕೆ.ಜೆ ಜಾರ್ಜ್ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಇದು 8500 ಕೋಟಿ ವೆಚ್ಚದ ಯೋಜನೆ ಆಗಿದ್ದು, ರಾಜ್ಯದ ವಿದ್ಯುತ್ ಬವಣೆ ನೀಗಿಸುವ ನಿರೀಕ್ಷೆ ಮೂಡಿಸಿದೆ. ಆದರೆ ಆರಂಭದಲ್ಲೇ ಅಪಸ್ವರ ಕೇಳಿಬಂದಿದೆ.

ಶರಾವತಿ(Sharavathi) ಕಣಿವೆಯಲ್ಲಿ 8500 ಕೋಟಿ ವೆಚ್ಚದಲ್ಲಿ ಪಂಪ್ಡ್ ಸ್ಟೋರೇಜ್ ಪ್ರೊಜೆಕ್ಟ್(pumped storage project) ಜಾರಿಗೆ ಮುಂದಾಗಿದೆ ರಾಜ್ಯ ಸರ್ಕಾರ. ಆದರೆ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗೆ ಆರಂಭದಲ್ಲೇ ಅಪಸ್ವರ ಕೇಳಿ ಬಂದಿದೆ. ಶರಾವತಿ ಕಣಿವೆಯಲ್ಲಿ ರಿವರ್ಸ್ ಪಂಪ್ಡ್ ಯೋಜನೆ ಜಾರಿಗೆ ಆರಂಭದಲ್ಲೇ ಅಪಸ್ವರ ಕೇಳಿಬಂದಿದ್ದು, ಪರಿಸರ ಹೋರಾಟಗಾರರು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನದಿಯ ಸಹಜ ಹರಿವಿಗೆ ಅಡ್ಡಿ ಆಗಲಿದೆ ಎಂದು ವಾದ ಮಂಡಿಸುತ್ತಿದ್ದಾರೆ ಹೋರಾಟಗಾರರು. ಈ ಯೋಜನೆ ಜಾರಿಯಿಂದ ಶರಾವತಿ ಕಣಿವೆ ಪ್ರದೇಶದ ಪರಿಸರದ ಮೇಲೆ ಪರಿಣಾಮ ಆಗಲಿದೆ ಎಂದು ಆರೋಪಿಸಿದ್ದಾರೆ.

ಶರಾವತಿ ನದಿಯನ್ನೇ ನಂಬಿಕೊಂಡಿರುವ ಕೆಳಭಾಗದ ಜನರ ಜೀವನ ಹಾಗೂ ಜಲಚರಗಳ ಅಸ್ತಿತ್ವವೇ ನಾಶವಾಗಲಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಯೋಜನೆ ಜಾರಿಯಿಂದ ನದಿಯನ್ನೇ ನಂಬಿ ಬದುಕುತ್ತಿರುವ ಹೊನ್ನಾವರ ಭಾಗದ ರೈತರು(Farmers) ಹಾಗೂ ಬೆಸ್ತರ ಬದುಕು ಬೀದಿಗೆ ಬರಲಿದೆ ಎಂದು ಪರಿಸರವಾದಿಗಳು ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಯೋಜನೆ ಜಾರಿಯಿಂದಾಗಿ ಕಡಲ ಕೊರೆತ ಹೆಚ್ಚಳವಾಗುವ ಜೊತೆಗೆ ಜಲಚರ ಪ್ರಾಣಿಗಳ ಸಂತಾನೋತ್ಪತಿಗೆ ಹೊಡೆತ ಬೀಳಲಿದೆ ಎನ್ನುವ ಆಂಶವೂ ಸೇರಿಕೊಂಡಿದೆ. ಕಣಿವೆ ಪ್ರದೇಶದ ಜೀವ ವೈವಿಧ್ಯತೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ ಪರಿಸರವಾದಿ ಅಖಿಲೇಶ್ ಚಪ್ಲಿ(Akihlesh Chipli) . ಯೋಜನೆ ಜಾರಿಗೂ ಮುನ್ನ ಪರಿಸರ ತಜ್ಞರ ಸಲಹೆ ಪಡೆದು ಮುನ್ನಡೆಯುವಂತೆ ಆಗ್ರಹಿಸಿದ್ದಾರೆ.

ಏನಿದು ಶರಾವತಿ ರಿವರ್ಸ್ ಪಂಪ್ಡ್ ಸ್ಟೋರೇಜ್…?
ಶರಾವತಿ ಅಂತರ್ಗತ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ ರಾಜ್ಯ ಸರ್ಕಾರ. ಶರಾವತಿ ನದಿಗೆ ಅಡ್ಡಲಾಗಿ ಗೇರುಸೊಪ್ಪ ಬಳಿ ಕಟ್ಟಿರುವ ಡ್ಯಾಮ್‌ನಿಂದ ನೀರನ್ನು ಬಳಸಿಕೊಂಡು ಮರು ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರ ಯೋಜನೆ ಕೈಗೆತ್ತಿಕೊಂಡಿದೆ. ಗುರುತ್ವಾಕರ್ಷಣ ನಿಯಮಕ್ಕೆ ವಿರುದ್ಧವಾಗಿ ಯೋಜನೆ ಜಾರಿಗೆ ಮುಂದಾಗಿದೆ ರಾಜ್ಯ ಸರ್ಕಾರ ಎನ್ನುವುದು ಆರೋಪ. ಆದರೆ ಈ ಯೋಜನೆ ಜಾರಿ ಆದರೆ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ ಎನ್ನುವುದು ರಾಜ್ಯ ಸರ್ಕಾರದ ಲೆಕ್ಕಾಚಾರ. ಈ ಸಂಬಂಧ ಟೆಂಡರ್(Tender) ಪ್ರಕ್ರಿಯೆಗೆ ಮುಂದಾಗಿದೆ ರಾಜ್ಯ ಸರ್ಕಾರ. ಯೋಜನೆ ಜಾರಿ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಈಗಾಗಲೇ ಇಂಧನ ಸಚಿವ ಕೆ ಜೆ ಚಾರ್ಜ್(KJ George) ಚರ್ಚಿಸಿದ್ದಾರೆ.

ಪಂಪ್ಡ್ ಸ್ಟೋರೇಜ್ ಮೂಲಕ ಸುಮಾರು ಆರು ಕಿ.ಮೀಟರ್‌ಗಳಷ್ಟು ದೂರದ ತಳಕಳಲೆ ಡ್ಯಾಮ್‌ಗೆ ನೀರನ್ನು ಪಂಪ್ ಮಾಡುವುದು. ಈ ಮೂಲಕ ವಿದ್ಯುತ್ ಉತ್ಪಾದನೆ ಆದ ಬಳಿಕ ಸಮುದ್ರ ಸೇರುತ್ತಿರುವ ನೀರನ್ನು ಪುನರ್ಬಳಕೆ ಮಾಡಿಕೊಂಡು ಮತ್ತೆ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರ ಚಿಂತಿಸಿದೆ. ರಾಜ್ಯದಲ್ಲಿರುವ ವಿದ್ಯುತ್ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ಮುಂದಡಿ ಇಟ್ಟಿದೆ. ಯೋಜನೆಯ ಅನುಷ್ಠಾನದಿಂದ ವಿದ್ಯುತ್ ಅಭಾವ ನೀಗಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಯಾವುದೇ ಒಂದು ಯೋಜನೆಯಲ್ಲಿ ಲಾಭ ಪಡೆಯುವ ಉದ್ದೇಶ ಇದ್ದಾಗ ಸಣ್ಣ ಪ್ರಮಾಣದಲ್ಲಿ ಅದರಿಂದ ಅನಾನುಕೂಲ ಆಗುವುದು ಶತಸಿದ್ದ. ಈ ಯೋಜನೆಯಿಂದ ಲಾಭ ಎಷ್ಟರ ಮಟ್ಟಿಗೆ ಆಗಲಿದೆ ಅನ್ನೋದ್ರ ಜೊತೆಗೆ ನಷ್ಟದ ಪ್ರಮಾಣವನ್ನು ಸರ್ಕಾರ ಜನರ ಮುಂದೆ ತೆರೆದಿಡಬೇಕು. ಪರಿಸರವಾದಿಗಳ ಪ್ರಮುಖ ಧ್ಯೇಯ ಪರಿಸರವನ್ನು ರಕ್ಷಣೆ ಮಾಡುವುದೇ ಆಗಿರುತ್ತದೆ ಹೊರತು ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದಿಲ್ಲ. ಒಂದು ಆಯ್ಕೆಯಾದ ಸರ್ಕಾರ ಪರಿಸರವಾದಿಗಳ ಕೂಗಿಗೂ ದನಿಯಾಗಬೇಕು. ಅದೇ ರೀತಿ ಅಭಿವೃದ್ಧಿ ಕಾರ್ಯಗಳಿಗೂ ಮನ್ನಣೆ ಕೊಡಬೇಕು. ಹಾಗಾಗಿ ಲಾಭ ನಷ್ಟದ ಪ್ರಮಾಣವನ್ನು ಲೆಕ್ಕಾಚಾರ ಮಾಡಿ ಜನತೆ ಮುಂದಿಟ್ಟು ಯೋಜನೆ ಜಾರಿಗೆ ಚಿಂತನೆ ನಡೆಸಿದರೆ ಉತ್ತಮ.
#DKShivakumar #PowerSupply #Electric #Sharavathi #Karnataka