
ಭುವನೇಶ್ವರ: ವೃದ್ಧರು ಮತ್ತು ಅಂಗವಿಕಲ ಫಲಾನುಭವಿಗಳಿಗೆ ಭತ್ಯೆಯನ್ನು ಮನೆಗಳಿಗೆ ತಲುಪಿಸುವಂತೆ ಸರ್ಕಾರ ವ್ಯವಸ್ಥೆ ಮಾಡಿದ್ದರೂ ಒಡಿಶಾದಲ್ಲಿ 80 ವರ್ಷದ ವೃದ್ಧೆಯೊಬ್ಬರು ತಮ್ಮ ವೃದ್ಧಾಪ್ಯ ಪಿಂಚಣಿಯನ್ನು ಪಡೆಯಲು 2 ಕಿ.ಮೀ ದೂರವನ್ನು ತೆವಳಿಕೊಂಡೇ ಹೋಗಿರುವ ಮನಕಲಕುವ ಘಟನೆ ನಡೆದಿದೆ.
ರೈಸುವಾನ್ ಗ್ರಾ.ಪಂ.ನ ಪಥೂರಿ ದೇಹುರಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಸರಿಯಾಗಿ ನಡೆಯಲು ಸಾಧ್ಯವಾಗದೇ ತೆವಳಿಕೊಂಡೇ ಓಡಾಡುವ ಸ್ಥಿತಿಯಲ್ಲಿದ್ದಾರೆ. ಅವರು ಶನಿವಾರ ತಮ್ಮ ವೃದ್ಧಾಪ್ಯ ಪಿಂಚಣಿ ಪಡೆಯಲು ಒಡಿಶಾದ ಕಿಯೋಂಜಾರ್ನ ಟೆಲ್ಕೊಯ್ ಬ್ಲಾಕ್ನಲ್ಲಿ ಪಂಚಾಯತ್ ಕಚೇರಿಗೆ ಸುಮಾರು 2 ಕಿ.ಮೀ ತೆವಳಿಕೊಂಡೇ ಹೋಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
80-year-old woman was forced to crawl nearly 2 km to panchayat office in Telkoi block of Odisha's Keonjhar to collect her old-age pension, despite a government directive to deliver the allowances to homes of elderly and disabled beneficiaries.@CMO_Odisha @BJP4Odisha… pic.twitter.com/DbtXXIrU74
— Siddhant Anand (@JournoSiddhant) September 24, 2024
ಪಂಚಾಯತ್ ವಿಸ್ತರಣಾಧಿಕಾರಿ (PEO) ಪಿಂಚಣಿ ಹಣವನ್ನು ಪಡೆಯಲು ವೃದ್ಧೆಗೆ ಕಚೇರಿಗೆ ಭೇಟಿ ನೀಡುವಂತೆ ಹೇಳಿದ್ದರು. ಪಿಂಚಣಿ ವಿತರಿಸಲು ಯಾರೂ ಮನೆಗೆ ಬಾರದೇ ಇದ್ದಾಗ ವೃದ್ಧೆ ತಾವೇ ಪಂಚಾಯಿತಿ ಕಚೇರಿಗೆ ತೆವಳಿಕೊಂಡು ಹೋಗಿದ್ದಾರೆ. ಇದೊಂದು ಬಿಟ್ಟರೆ ತಮಗೆ ಅಲ್ಲಿಗೆ ಹೋಗಲು ಬೇರೆ ಯಾವುದೇ ದಾರಿ ಇಲ್ಲ ಎಂದು ಅವರು ಹೇಳಿದ್ದಾರೆ.
ಪಥೂರಿ ಅವರ ಪ್ರಕರಣದ ಬಗ್ಗೆ ತಿಳಿದುಕೊಂಡ ನಂತರ ರೈಸುವಾನ್ ಸರಪಂಚ್ ಬಾಗುನ್ ಚಾಂಪಿಯಾ ಮಾತನಾಡಿ, ಮುಂದಿನ ತಿಂಗಳಿನಿಂದ ಅವರ ಮನೆಗೆ ಭತ್ಯೆ ಮತ್ತು ಪಡಿತರವನ್ನು ನೀಡುವಂತೆ ಪಿಇಒ ಮತ್ತು ಪೂರೈಕೆ ಸಹಾಯಕರಿಗೆ ಸೂಚಿಸಲಾಗಿದೆ. ಜಿಪಿ ಕಚೇರಿಗಳನ್ನು ತಲುಪಲು ಸಾಧ್ಯವಾಗದ ಫಲಾನುಭವಿಗಳಿಗೆ ಭತ್ಯೆಗಳನ್ನು ವಿತರಿಸಲು ನಾವು ಪಿಇಒಗಳಿಗೆ ಸೂಚಿಸಿದ್ದೇವೆ ಎಂದು ಟೆಲ್ಕೊಯ್ ಬಿಡಿಒ ಗೀತಾ ಮುರ್ಮು ಹೇಳಿದ್ದಾರೆ.