ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭರ್ಜರಿ ಉದ್ಯೋಗ ಅವಕಾಶಗಳು ಕೈ ಬೀಸಿ ಕರೆಯುತ್ತಿದೆ. ನೀವು ಯಾವುದೇ ಪದವಿಯನ್ನು ಪಡೆದಿದ್ರೆ ಸಾಕು ಈ ಜಾಬ್ ಗೆ ನೀವು ಅರ್ಜಿ ಸಲ್ಲಿಸಬಹದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬಂಪರ್ ಅವಕಾಶ ಇಲ್ಲಿದೆ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ(RRBs) ಅಧಿಕಾರಿಗಳು ಮತ್ತು ಕಚೇರಿ ಸಹಾಯಕರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಸುಮಾರು 8 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜೂ.21.ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
ಕಚೇರಿ ಸಹಾಯಕ (ಮಲ್ಟಿಪರ್ಪಸ್) – 5538
ಆಫೀಸರ್ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ)-2685
ಆಫೀಸರ್ ಸ್ಕೇಲ್-II (ಕೃಷಿ ಅಧಿಕಾರಿ) – 60
ಆಫೀಸರ್‌ಸ್ಕೇಲ್-II (ಮಾರ್ಕೆಟಿಂಗ್ ಆಫೀಸರ್) – 03
ಆಫೀಸರ್ ಸ್ಕೇಲ್-II (ಖಜಾನೆ ವ್ಯವಸ್ಥಾಪಕ) – 08
ಆಫೀಸರ್ ಸ್ಕೇಲ್-II (ಕಾನೂನು) – 24
ಆಫೀಸರ್ ಸ್ಕೇಲ್-II (ಸಿಎ) – 21
ಆಫೀಸರ್ ಸ್ಕೇಲ್-II (ಐಟಿ) – 68
ಆಫೀಸರ್ ಸ್ಕೇಲ್-II (ಜನರಲ್ ಬ್ಯಾಂಕಿಂಗ್ ಅಧಿಕಾರಿ) – 332
ಆಫೀಸರ್ ಸ್ಕೇಲ್ III – 73
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗೆ ಸಂಬಂಧಿಸಿದ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ಕೋರ್ಸ್ ವ್ಯಾಸಂಗ ಮಾಡಿರಬೇಕು. ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕಂಪ್ಯೂಟರ್ ಕೆಲಸದ ಬಗ್ಗೆ ಜ್ಞಾನವಿರುವವರಿಗೆ ಆದ್ಯತೆ ನೀಡಲಾಗಿದ್ದು, ಕೆಲವು ಹುದ್ದೆಗಳಿಗೆ ಅನುಭವದ ಅವಶ್ಯಕತೆಯಿದೆ.

ವಯೋಮಿತಿ
ಹುದ್ದೆಗೆ ಅನುಗುಣವಾಗಿ ವಯೋಮಿತಿ ನಿಗದಿಪಡಿಸಲಾಗಿದೆ. ಕನಿಷ್ಠ 18, ಗರಿಷ್ಠ 40 ವರ್ಷ ವಯೋಮಿತಿಯ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗೆ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆ
*ಕಚೇರಿ ಸಹಾಯಕ (ಮಲ್ಟಿಪರ್ಪಸ್) ಮತ್ತು ಆಫೀಸರ್ ಸ್ಕೇಲ್-I: ಪೂರ್ವಭಾವಿ ಪರೀಕ್ಷೆ (ಅಬ್ಜೆಕ್ಟಿವ್) ಮತ್ತು ಮುಖ್ಯ ಪರೀಕ್ಷೆ (ಅಬ್ಜೆಕ್ಟಿವ್)
*ಆಫೀಸರ್ ಸ್ಕೇಲ್-II (ಜನರಲ್ ಬ್ಯಾಂಕಿಂಗ್ ಆಫೀಸರ್), ಆಫೀಸರ್ ಸ್ಕೇಲ್-II (ಸ್ಪೆಷಲಿಸ್ಟ್ ಕೇಡರ್), ಆಫೀಸರ್ ಸ್ಕೇಲ್-III: ಏಕ ಹಂತದ ಪರೀಕ್ಷೆ (ಅಬ್ಜೆಕ್ಟಿವ್)
*ಸಂದರ್ಶನ – ಅಧಿಕಾರಿಗಳ ಹುದ್ದೆಗೆ ಮಾತ್ರ ಅನ್ವಯಿಸುತ್ತದೆ (ಸ್ಕೇಲ್ I,II ಮತ್ತು III)

ಯಾರಿಗೆ ಎಷ್ಟು ಶುಲ್ಕವಿದೆ?
ಆಫೀಸರ್ (ಸ್ಕೇಲ್ I, II ಮತ್ತು III), ಎಲ್ಲ ಇತರ ಕಚೇರಿ ಸಹಾಯಕರು (ಮಲ್ಟಿಪರ್ಪಸ್): ಜಿಎಸ್‌ಟಿ ಒಳಗೊಂಡಂತೆ ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳು 175 ರೂ. ಹಾಗೂ ಇತರ ಅಭ್ಯರ್ಥಿಗಳು 850 ರೂ.ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಆರಂಭ:01-06-2023
ಅರ್ಜಿ ಸಲ್ಲಿಸಲು ಕೊನೇ ದಿನ:21-06-2023
ಈ ಹುದ್ದೆಗಳ ವಿವರವಾದ ಮಾಹಿತಿಗಾಗಿ www.ibps.inಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.